BUNTS NEWS, ಮಂಗಳೂರು: ಗುರುಪುರ ಬಂಟರ ಮಾತೃ ಸಂಘ (ರಿ) ಇದರ ಆಶ್ರಯದಲ್ಲಿ
ಫೆ.2ರ ಭಾನುವಾರ ವಾಮಂಜೂರು ಅಮೃತೇಶ್ವರ ಶಾಲೆಯ ವಠಾರದಲ್ಲಿ ರಾಷ್ಟ್ರೀಯ ಬಂಟರ ಭಾವೈಕದ ಸಂಗಮದ ಅಂಗವಾಗಿ
ಬಂಟರ ಕಲಾಪ್ರತಿಭೆ ಪ್ರತಬಿಂಬಿಸುವ “ಬಂಟ ಕಲಾ ವೀಳ್ಯ-2020” ಅಂತರ್ ಬಂಟರ ಸಂಘಗಳ ಸ್ವರ್ಧೆ ನಡೆಯಲಿದೆ.
ಈ ಬಗ್ಗೆ ಬಂಟರ
ಯಾನೆ ನಾಡವರ ಮಾತೃ ಸಂಘದ
ಅಮೃತ ಮಹೋತ್ಸವ ಕಟ್ಟಡದ ಸಭಾಭವನದಲ್ಲಿ
ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜ್
ಕುಮಾರ್ ಶೆಟ್ಟಿ ತಿರುವೈಲುಗುತ್ತು ಇವರ
ಅಧ್ಯಕ್ಷತೆಯಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ
, ಸಂಘದ ಸಂಚಾಲಕರಾದ ಸುದರ್ಶನ ಶೆಟ್ಟಿ ಪೆರ್ಮಂಕಿ
ಇವರು ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು
ನೀಡಿದರು.
ಬಂಟರ ಕಲಾ ವೀಳ್ಯ
ಸ್ವರ್ಧೆಯು ಫೆ.2ರ ಬೆಳಿಗ್ಗೆ 9ಕ್ಕೆ ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಶ್ರೀಮತಿ ಆಶಾಜ್ಯೋತಿ
ರೈ ಅವರಿಂದ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 1ರಿಂದ 2ರ ವರೆಗೆ ‘ಬಂಟರಿಂದ ಬಂಟರಿಗಾಗಿ ಬಂಟರಿಗೋಸ್ಕರ’
ಪರಿಕಲ್ಪನೆಯ ಚರ್ಚಾಗೋಷ್ಠಿ ನಡೆಯಲಿದೆ. ಸಂಜೆ 5.30ರಿಂದ ರಾತ್ರಿ 7.30ರ ವರೆಗೆ ಸೀತಾರಾಮ ಜಾಣು ಶೆಟ್ಟಿಯವರ
ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಗುರುಪುರ ರಾಜಶೇಖರಾನಂದ ಸ್ವಾಮಿಗಳು ಆರ್ಶಿವಚನ ನೀಡಲಿದ್ದಾರೆ.
ಸಮಾರಂಭಕ್ಕೆ 50ಕ್ಕೂ
ಮಿಕ್ಕಿ ಗಣ್ಯರು ಆಗಮಿಸಲಿದ್ದು ಪ್ರಕಾಶ್ ಶೆಟ್ಟಿ, ಎಂ.ಎನ್. ರಾಜೇಂದ್ರ ಕುಮಾರ್, ಸೀತಾರಾಮ ಜಾಣು
ಶೆಟ್ಟಿ, ಭೋಜರಾಜ್ ವಾಮೂಂಜೂರು, ಭಾಸ್ಕರ್ ಶೆಟ್ಟಿ ಸಾಂತೂರು ಸನ್ಮಾನಿಸಿ ಗೌರವಿಸಲಾಗುತ್ತದೆ. ರಾತ್ರಿ
ಗಂಟೆ 10.30ಕ್ಕೆ ಸಂಘದ ಸದಸ್ಯರಿಂದ ‘ಅಗ್ರಪೂಜೆ’ ಯಕ್ಷಗಾನ, 11.45ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ
ನಡೆಯಲಿದೆ.
ಬಂಟ ಕಲಾವೀಳ್ಯ ಸ್ಪರ್ಧೆಯಲ್ಲಿ
ವಿಜೇತ ತಂಡಕ್ಕೆ 1 ಲಕ್ಷ ರೂ., ದ್ವೀತಿಯ ಸ್ಥಾನಕ್ಕೆ 60 ಸಾವಿರ ರೂ., ತೃತೀಯ 40 ಸಾವಿರ ರೂ., ಚತುರ್ಥ
20 ಸಾವಿರ ರೂ., ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೆ ರೂ.10 ಸಾವಿರ ಗೌರವ ಧನವನ್ನು ಬಹುಮಾನವಾಗಿ
ನೀಡಲಾಗುವುದು. ಶ್ರೇಷ್ಠ ನಟ, ನಟಿ, ಉತ್ತಮ ನಿರೂಪಣೆ ಹಾಗೂ ನೃತ್ಯ, ಹಾಡುಗಾರಿಕೆ, ಪ್ರಹಸನ, ವೇಷಭೂಷಣಗಳಿಗೆ
ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರಿಗೂ ಮಧ್ಯಾಹ್ನ 12ರಿಂದ ರಾತ್ರಿ
12ರ ವರೆಗೆ ಭೋಜನದ ವ್ಯವಸ್ಥೆ ಇದೆ.
ಸುದ್ದಿಗೋಷ್ಠಿಯಲ್ಲಿ
ಬಂಟ್ಸ್ ವೆಲ್ಫೇರ್ ಟ್ರಸ್ಟ್ ಇದರ ಯವ
ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ,
ಜಾಗತಿಕ ಬಂಟರ ಸಂಘದ ಕಾರ್ಯದರ್ಶಿ
ಸತೀಶ್ ಅಡಪ,ಸಂಘದ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ
ಶೆಡ್ಯೆ, ಸಮಿತಿಯ ಕಾರ್ಯದರ್ಶಿ ಚಂದ್ರಹಾಸ
ಶೆಟ್ಟಿ ನಾರಳ, ಸಮಿತಿಯ ಉಪಾಧ್ಯಕ್ಷ
ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು ಹಾಗೂ
ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.