BUNTS NEWS, ಮಂಜೇಶ್ವರ : ಗೆಳೆಯರ ಬಳಗ ಬಲ್ಲಂಗುಡೇಲು
ಇದರ ಆಶ್ರಯದಲ್ಲಿ ಇತ್ತಿಚೇಗೆ ಮೂಡಂಬೈಲ್
ಶಾಲೆಯಲ್ಲಿ ಆಯೋಜಿಸಿದ ಸಂಸ್ಥೆಯ ಸ್ಥಾಪಕ ಸದಸ್ಯರಾದ
ಕೆ. ಜಯಾನಂದರವರ ಸ್ಮರಣಾರ್ಥವಾಗಿ ಉಚಿತ ವೈದ್ಯಕಿಯ ಶಿಬಿರ
ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಉಚಿತ
ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ
ನಡೆಯಿತು.
ಮಿಂಜ ಪಂಚಾಯತಿನ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ
ಡಾ. ಪ್ರಭಾಕರ ರೈಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯಕಿಯ ಶಿಬಿರದ ಮೂಲಕ ಸಂಘದ
ಹೆಸರನ್ನು ಶಾಸ್ವತವಾಗಿ ಸಾರ್ವಜನಿಕರು ನೆನಪಿನಲ್ಲಿಡುವ ಕೆಲಸವನ್ನು ಗೆಳೆಯರ ಬಳಗ ಬಲ್ಲಂಗುಡೇಲು ಮಾಡಿದೆ.
ಇಂತಹ ಶಿಬಿರದ ಅಯೋಜನೆಯಿಂದ ನಮಗೆ
ಗೊತ್ತಿರದ ರೋಗಗಳ ಮಾಹಿತಿ ತಿಳಿಯಲ್ಪಡುತ್ತವೆ
ಹಾಗೂ ಇಂತಹ ಸಮಜಾಮುಖಿ ಕೆಲಸವನ್ನು
ಕೈಗೆತ್ತಿಕೊಂಡ ಗೆಳೆಯರ
ಬಳಗ ಸಂಸ್ಥೆಯ ಸಾಧನೆಗೆ ನಾನು
ಚಿರರುಣಿಯಾಗಿರುತೆನೆ ಎಂದು ಹೇಳಿದರು.
ಬಲ್ಲಂಗುಡೇಲು
ಕ್ಷೇತ್ರದ ಅನುವಂಶಿಕ ಪಾತ್ರಿಗಳಾದ ನಾರಯಣ ಪೂಜಾರಿ ಹಾಗು
ವಿಶ್ವನಾಥ ಬೆಳ್ಚಪಾಡರು ಅರ್ಶಿವಚನಗೈದರು. ನಿವೃತ ಶಿಕ್ಷಕರಾದ ಬಾಲಕೃಷ್ಣ
ಭಂಡಾರಿ ದಡ್ಡಂಗಡಿ, ಶಿವರಾಮ ಪದಕಣ್ಣಯ ಮುಡಂಬೈಲ್,
ನ್ಯಾ. ದಾಮೋದರ ಶೆಟ್ಟಿ ಮಜಿಬೈಲ್,
ಪ್ರಭಾಕರ್ ಚೌಟ ದರ್ಬೆ ಮಿಯಪದವು,
ಪ. ಸದಸ್ಯೆ ಶ್ರೀಮತಿ ಚಂದ್ರವಾತಿ
ಕಾರ್ಯಕ್ರಮಕ್ಕೆ ಶುಭಕೋರಿದರು. ಸಭೆಯ ಅದ್ಯಕ್ಷತೆಯನ್ನು ಸಂಘದ
ಅದ್ಯಕ್ಷರಾದ ಉದಯ ಕುಮಾರ್ ಶೆಟ್ಟಿ
ಕರಿಬೈಲ್ ವಹಿಸಿದ್ದರು.
ವೇದಿಕೆಯಲ್ಲಿ
ಜಗದೀಶ್ ಮೂಡಂಬೈಲ್, ಶೇಖರ ಸೊಯ್ಪಕಲ್ಲು, ಸಂಘದ
ಮಾಜಿ ಅಧ್ಯಕ್ಷರಾದ ರವಿಂದ್ರ ಶೆಟ್ಟಿ ಕರಿಬೈಲ್,
ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೋಗರು,
ಸಂಘದ ಕಾರ್ಯದರ್ಶಿ ಆನಂದ ಹೊಸಗದ್ದೆ, ಕೋಶಾಧಿಕಾರಿ
ಬಶೀರ್ ಮುಡಂಬೈಲ್, ಉಪದ್ಯಕ್ಷರಾದ ಪ್ರಭಾಕರ ಶೆಟ್ಟಿ ಪನಂಬೆ,
ಸಾ.ಕಾರ್ಯದರ್ಶಿ ಪ್ರದಿಪ್ ಶೆಟ್ಟಿ ಬಲ್ಲಂಗುಡೇಲು,
ಲೆಕ್ಕ ಪರಿಶೋದಕರಾದ ಕಾರ್ತಿಕ್ ಶೆಟ್ಟಿ ಮಜಿಬೈಲ್, ನವೀನ್
ಶೆಟ್ಟಿ ಮಾಯಿಪ್ಪಾಡಿ ಉಪಸ್ಥಿತರಿದ್ದರು. ಜಯರಾಮ ಬಲ್ಲಂಗುಡೇಲು ಸ್ವಾಗತಿಸಿ
ಧನ್ಯವಾದವಿತ್ತರು.
ನಂತರ ಕೆ. ಎಸ್. ಹೆಗ್ಡೆ.
ಆಸ್ಪತ್ರೆಯ ನುರಿತ ವೈದ್ಯರಿಂದ ಸ್ತ್ರಿರೋಗ
ವಿಭಾಗ, ಎಲುಬು ಮತ್ತು ಕೀಲು
ರೋಗ ವಿಭಾಗ, ನೇತ್ರ ತಪಾಸಣೆ,
ಸಾಮಾನ್ಯ ಚಿಕಿತ್ಸಾ ವಿಭಾಗ, ಬಿಪಿ -ಬ್ಲಡ್
ಶುಗರ್ ತಪಾಸಣ ವಿಭಾಗ, ಇಸಿಜಿ
ತಪಾಸಣ, ಕಿವಿ, ಮುಗು, ಗಂಟಲು
ವಿಭಾಗ ಹಾಗೂ ಮಕ್ಕಳ ಚಿಕಿತ್ಸ
ವಿಭಾಗದ ಮುಲಕ ಸಾವಿರಕ್ಕೂ ಅಧಿಕ
ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದರು.