ಜ.25ರಂದು ಕ್ಯಾ. ಬ್ರಜೇಶ್ ಚೌಟ ಸಾರಥ್ಯದ “ಮಂಗಳೂರು ಕಂಬಳ” - BUNTS NEWS WORLD

ಜ.25ರಂದು ಕ್ಯಾ. ಬ್ರಜೇಶ್ ಚೌಟ ಸಾರಥ್ಯದ “ಮಂಗಳೂರು ಕಂಬಳ”

Share This
BUNTS NEWS, ಮಂಗಳೂರು: ಕ್ಯಾಪ್ಟನ್ ಬ್ರಜೇಶ್ ಚೌಟ ಸಾರಥ್ಯದಲ್ಲಿ 3ನೇ ವರ್ಷದ ಹೊನಲು ಬೆಳಕಿನ “ಮಂಗಳೂರು ಕಂಬಳ”ವು ಜ.25ರಂದು ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷಣ ಜೋಡುಕರೆಯಲ್ಲಿ ನಡೆಯಲಿದೆ.
ಕಂಬಳವನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ ಕೊಡುವ ಸದುದ್ದೇಶದಿಂದ ನಡೆಯುತ್ತಿರುವ ಕಂಬಳವು ಜ.25 ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಿ ಜ.26ರ ಭಾನುವಾರ 8ಕ್ಕೆ ಬಹುಮಾನ ವಿತರಣಾ ಸಮಾರಂಭದೊಂದಿಗೆ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಈ ಭಾರಿ ಕಂಬಳದಲ್ಲಿ ಕಂಬಳಕ್ಕೆ ಸಂಬಂಧಿಸಿದ ಪರಿಕರಗಳನ್ನು ತೋರಿಸುವ ವಸ್ತು ಪ್ರದರ್ಶನ, ಕಂಬಳ ಸಂಬಂಧಿಸಿದ ಫೋಟೊಗ್ರಾಪಿ ಸ್ಪರ್ಧೆ ನಡೆಯಲಿದ್ದು ಪ್ರದರ್ಶನಗೊಳ್ಳುವ ಅತ್ಯುತ್ತಮ ಛಾಯಾಚಿತ್ರಕ್ಕೆ ಬಹುಮಾನ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಜೇಶ್ ಚೌಟ, ಕಾರ್ಯಾಧ್ಯಕ್ಷ ಚಂದನ್ ಮಲ್ಯ, ಗೌರವ ಸಲಹೆಗಾರರಾದ ಶಾಸಕ ಉಮಾನಾಥ್ ಕೋಟ್ಯಾನ್, ಪ್ರೋ. ಗುಣಪಾಲ ಕಡಂಬ, ಉಪಾಧ್ಯಕ್ಷರಾದ ಸಂಜಯ್ ಪ್ರಭು, ಲೋಕೇಶ್ ಶೆಟ್ಟಿ, ಬಿ. ನವೀನಚಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಕೋಶಾಧಿಕಾರಿ ತಲಪಾಡಿ ದೊಡ್ಡಮನೆ ಪ್ರೀತಮ್ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Pages