ಅ.18 ರಂದು ದುಬೈಯಲ್ಲಿ ಪಟ್ಲ ಸಂಭ್ರಮಕ್ಕೆ ಭರದ ಸಿದ್ದತೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅ.18 ರಂದು ದುಬೈಯಲ್ಲಿ ಪಟ್ಲ ಸಂಭ್ರಮಕ್ಕೆ ಭರದ ಸಿದ್ದತೆ

Share This
ದುಬಾಯಿ: ಯಕ್ಷಧ್ರುವ ಪಟ್ಲ ಗಾನ ಸಾರಥ್ಯದ ದುಬೈ ಘಟಕದ ವತಿಯಿಂದ ಅ.18 ರಂದು ನಡೆಯಲ್ಲಿರುವ ಪಟ್ಲ ಸಂಭ್ರಮಕ್ಕೆ ಭರದ ಸಿದ್ದತೆ ಆದ್ದೂರಿಯಾಗಿ ನಡೆಯುತ್ತಿದೆ.
ನಗರದ ಶೇಕ್ ರಶೀದ್ ಅಡಿಟೋರಿಯಂ ಇಂಡಿಯನ್ ಹೈಸ್ಕೂಲ್ ಊದುಮೇತದ ಭವ್ಯ ರಂಗ ವೆದೀಕೆಯಲ್ಲಿ ಮಧ್ಯಾಹ್ನ 3ರಿಂದ ರಾತ್ರಿ 10 ಗಂಟೆಯವರೆಗೆ ಜರಗಲಿದೆ. ಯಕ್ಷಗಾನ ಅಭ್ಯಾಸ ತರಗತಿ ದುಬೈ ಹಾಗೂ ಊರಿನ ಪ್ರಸಿದ್ದ ಅತಿಥಿ ಕಲಾವಿದರ ಕೂಡುವಿಕೆಯಿಂದ ಮಹಿಷಮರ್ಧಿನಿ - ಜಗಜ್ಜನನಿ ಯಕ್ಷಗಾನ ಪ್ರದರ್ಶಣ ಹಾಗು ದಿನೇಶ್ ಕೊಡಪದವು ಮತ್ತು ಅರವಿಂದ ಬೋಳಾರ್ ತಂಡದವರಿಂದ ಯಕ್ಷಗಾನ ಹಾಸ್ಯ ವೈಭವ ಜರಗಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯುಎಇ ಉದ್ಯಮಿಗಳಾದ ಡಾ.  ಬಿ.ಆರ್. ಶೆಟ್ಟಿ, ರೊನೆಲ್ಡೊ ಕೋಲಸೊ, ಕನ್ನಡ ಚಿತ್ರನಟ ಪುನಿತ್ ರಾಜ್’ಕುಮಾರ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 05661002239, 0553912535 ಸಂಪರ್ಕಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ವರದಿ: ವಿಜಯ ಕುಮಾರ್ ಶೆಟ್ಟಿ

Pages