ನಂ.1ರಂದು ಅಬುದಾಭಿಯಲ್ಲಿ 64ನೇ ವರ್ಷದ ಕರ್ನಾಟಕ ರಾಜ್ಯೋತ್ಸವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಂ.1ರಂದು ಅಬುದಾಭಿಯಲ್ಲಿ 64ನೇ ವರ್ಷದ ಕರ್ನಾಟಕ ರಾಜ್ಯೋತ್ಸವ

Share This
ದುಬೈ: ಅಬುದಾಭಿಯ ಕರ್ನಾಟಕ ಸಂಘದ ವತಿಯಿಂದ 64ನೇ ವರ್ಷದ ಕರ್ನಾಟಕ ರಾಜ್ಯೋತ್ಸವವು .1ರಂದು ಅಬುದಾಭಿಯ  ಇಂಡಿಯನ್ ಸೋಶಿಯಲ್ ಕಲ್ಚರಲ್ ಸೆಂಟರಿನ ಸಭಾಂಗಣದಲ್ಲಿ ದಿನವಿಡಿ ವಿಜೃಂಬಣೆಯಿಂದ ಜರಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಎಇಯ ಮಹಾಪೋಷಕರಾದ ಪದ್ಮಶ್ರೀ ಡಾ. ಬಿ. ಆರ್ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಮಲೈ ಹಾಗೂ ಸುಮಾ ರಾಜಕುಮಾರ್ ಭಾಗವಹಿಸಲಿದ್ದಾರೆ. 2019 ಸಾಲಿನ ದಾ. ರಾ ಬೇಂದ್ರೆ ಪ್ರಶಸ್ತಿ ಪುರಸ್ಕಾರವನ್ನು ಕನ್ನಡ ಭಾಷೆ ಪತ್ರಿಕಾರಂಗ ಸಾಹಿತ್ಯದ ಸೇವೆಗಾಗಿ ಮನೋಹರ್ ತೋನ್ಸೆಯವರಿಗೆ ನೀಡಲಾಗುವುದು. ಅಲ್ಲದೆ ದಿನವಿಡಿ ಕನ್ನಡ ಪರ ಕಾರ್ಯಕ್ರಮಗಳು ವೇದಿಕೆಯಲ್ಲಿ ಜರಗಲಿರುವುದೆಂದು ಸಂಘದ ಅಧ್ಯಕ್ಷರಾದ ಸರ್ವೊತ್ತಮ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ವರದಿ: ವಿಜಯಕುಮಾರ್ ಶೆಟ್ಟಿ ಮಜಿಬೈಲ್]

Pages