ಅಜಾತಶತ್ರು, ಸಮಾಜಸೇವಕ ಪ್ರಕಾಶ್ ಶೆಟ್ಟಿಗೆ 60ರ ಸಂಭ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಜಾತಶತ್ರು, ಸಮಾಜಸೇವಕ ಪ್ರಕಾಶ್ ಶೆಟ್ಟಿಗೆ 60ರ ಸಂಭ್ರಮ

Share This
BUNTS NEWS, ಮಂಗಳೂರು: ತುಳುವರು ಹೊಟ್ಟೆ ತುಂಬಾ ಉಣಿಸಿ ಆತಿಥ್ಯ ಮಾಡುವುದರಲ್ಲಿ ಸದಾ ಎತ್ತಿದ ಕೈ. ಹೊಟ್ಟೆ ತುಂಬಾ ಉಣ್ಣುವುದು ಎನ್ನುವುದಕ್ಕೆ ತುಳುವಿನಲ್ಲಿಬಂಜಾರ’ ಎಂದು ಹೆಸರು. ಇದೇ ಬಂಜಾರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹೊಟೇಲ್ ಆರಂಭಿಸಿ ಇಂದು ದೇಶಮಟ್ಟದಲ್ಲಿ ಓರ್ವ ಅತಿ ಪ್ರಮುಖ ಹೊಟೇಲ್ ಉದ್ಯಮಿ ಎಂದು ಗುರುತಿಸಿಕೊಂಡಿರುವ ಬಂಜಾರ ಪ್ರಕಾಶ್ ಶೆಟ್ಟಿ ಎಂದೇ ಖ್ಯಾತರಾಗಿರುವ ಕೊರಂಗ್ರಪಾಡಿ  ಪ್ರಕಾಶ್ ಶೆಟ್ಟಿ ಅವರ ಸಾಧನೆ ಅದ್ವಿತೀಯವಾದುದು. ಅವರಿಗೆ 60 ವರ್ಷ ತುಂಬುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ಬಂಟರ ನೇತೃತ್ವದಲ್ಲಿ ಅದ್ದೂರಿ ಸಮಾರಂಭ ನಡೆಸಿ ಸಮ್ಮಾನಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹಿನ್ನೆಲೆಯಲ್ಲಿ ಇದೊಂದು ಪುಟ್ಟ ಬರಹ.
ಕೊರಂಗ್ರಪಾಡಿ ದೊಡ್ಡಮನೆ ದಿ. ಮಾಧವ ಶೆಟ್ಟಿ ಮತ್ತು ಇವತ್ತು ಹೊಸಮನೆ ರತ್ನಾ ಶೆಟ್ಟಿ ದಂಪತಿಯ ಪುತ್ರರಾಗಿರುವ ಪ್ರಕಾಶ್ ಶೆಟ್ಟಿ ಅವರು ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಹೊಟೇಲ್ ಉದ್ಯಮದ ಕಡೆಗೆ ಗಮನ ಹರಿಸಿದವರು. ಎಳವೆಯಲ್ಲೇ ಸಾಧಕನಾಗಬೇಕು ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತ ಹೊಂದಿದ್ದರು. ಮೊದಲು ತನ್ನ ಇಷ್ಟದ ಹೊಟೇಲ್ ಉದ್ಯಮದ ಮೂಲಕ ಸಾಧಕನಾಗುವ ಕನಸನ್ನು ನನಸು ಮಾಡಿದರು. ಬಳಿಕ  ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು.
1993ರಲ್ಲಿ ಬೆಂಗಳೂರಿನಲ್ಲಿ ಬಂಜಾರ ಹೆಸರಿನ ರೆಸ್ಟೋರೆಂಟ್ ಆರಂಭಿಸಿದ್ದ ಅವರು ಪ್ರಸ್ತುತ ಎಂಆರ್ಜಿ ಹಾಸ್ಟಿಟಾಲಿಟಿ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಚೇರ್ಮನ್ ಆಗಿದ್ದಾರೆ. ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮಕ್ಕೆ  ಕಾಲಿರಿಸಿದ 9 ವರ್ಷದಲ್ಲೇ ಗೋಲ್ಡ್ಫಿಂಚ್ ಎಂಬ ವಿಲಾಸಿ ಹೊಟೇಲನ್ನು ಆರಂಭಿಸಿದರು. ಪ್ರಸ್ತುತ ಮಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಗೋಲ್ಡ್ಫಿಂಚ್ ಹೊಟೇಲಿನ ಶಾಖೆಗಳಿವೆ.

ಹೊಟೇಲ್ ಉದ್ಯಮದಲ್ಲಿ  ಸಿಕ್ಕಿದ ಯಶಸ್ಸಿನ  ಬಳಿಕ ಅವರು ತ್ರಿಶೂಲ್ ಬಿಲ್ಡ್ಟೆಕ್ ಆ್ಯಂಡ್  ಇನ್ಫ್ರಾಸ್ಟ್ರಕ್ಚರ್ ಪ್ರೈ. ಲಿ. ಮತ್ತು ಆಶಾ ಸಿಟಿ ಬಿಲ್ಡರ್ಸ್  ಆ್ಯಂಡ್ ಡೆವಲಪರ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದರ ಮೂಲಕ ಇನ್ಫ್ರಾಸ್ಟ್ರಕ್ಚರ್ ಸೇವೆಯನ್ನು ನೀಡುತ್ತಾ ಸಾವಿರಾರು ಮಂದಿಗೆ ಉದ್ಯೋಗದಾತರಾದರು.

ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಶನ್ ಅಮೃತ ಮಹೋತ್ಸವದಲ್ಲಿ ಇವರ ಸಾಧನೆಗಾಗಿ ಅದ್ದೂರಿ ಗೌರವ ಸಂದಿದೆ.  ಸಮಾಜ ಮತ್ತು ಹೊಟೇಲ್ ಉದ್ಯಮದಲ್ಲಿ ಅವರು ಸಲ್ಲಿಸಿರುವ ಸೇವೆಗಾಗಿ ಗೌರವ ಅವರಿಗೆ ಸಂದಿದೆ. ಗ್ಲೋಬಲ್ ಅಚೀವರ್ಸ್  ಫೌಂಡೇಶನ್ನಿಂದ ಬೆಸ್ಟ್ ಇಂಟಲೆಕ್ಟುವಲ್ ಅವಾರ್ಡ್,  ಇಂಡಿಯನ್ ಆರ್ಗನೈಸೇಶನ್ ಫಾರ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಿಂದ ಭಾರತ ಗೌರವ ರತ್ನ, ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ ಪ್ರಶಸ್ತಿ, ಥಾಯ್ಲ್ಯಾಂಡಿಂದ ಇಂಟರ್ನ್ಯಾಷನಲ್ ಗೋಲ್ಡ್ಸ್ಟಾರ್ ಮಿಲೇಯಂ ಅವಾರ್ಡ್ ಮುಂತಾದ ಹಲವಾರು ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದ ಪ್ರಶಸ್ತಿ ಇವರಿಗೆ ಸಂದಿದೆ.

ಎಲ್ಲರ ಪ್ರೀತಿಪಾತ್ರ ನಾಯಕ: ಪ್ರಕಾಶ್ ಶೆಟ್ಟಿ ಅವರು ಎಲ್ಲರಿಗೂ ಬೇಕಾದ ಮತ್ತು ಎಲ್ಲರಿಂದಲೂ ಪ್ರೀತಿ, ಗೌರವ ಪಡೆಯುತ್ತಿರುವ ಓರ್ವ ಅಜಾತಶತ್ರು ಎಂದು ಹೇಳಬಹುದಾದ  ಉದ್ಯಮಿ. ಅವರು ಕೇವಲ  ಉದ್ಯಮಿ ಮಾತ್ರವಲ್ಲದೆ, ಬಂಟ ಸಮುದಾಯದ ಮಹಾನ್ ನಾಯಕನಾಗಿಯೂ ರೂಪುಗೊಂಡಿದ್ದಾರೆ. ಇವರು ಯಾವುದೇ ಗುಂಪುಗಾರಿಕೆಯಲ್ಲೂ ತೊಡಗಿಕೊಂಡವರಲ್ಲ. ಇವರಿಂದ ದೂರ ಸರಿದು ನಿಲ್ಲುವವರು ಯಾರು ಇಲ್ಲ. ಇದು ಅವರೆಂಥ ಉತ್ತಮ ಗುಣ ಸ್ವಭಾವ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ.

ಮಹಾನ್ ದಾನಿ: ಇವರು ತನ್ನ ಆದಾಯದ ದೊಡ್ಡ ಪಾಲನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಬೇರೆ ಬೇರೆ ರೂಪದಲ್ಲಿ ಇವರು ಮಾಡುತ್ತಿರುವ ಸಮಾಜಸೇವೆ ಶ್ಲಾಘನೀಯ. ಮೈಸೂರು, ಬೆಂಗಳೂರು, ಮಂಗಳೂರು, ಮುಂಬಯಿ  ಸಹಿತ  ಪ್ರಮುಖ ಬಂಟರ ಸಂಘಗಳಿಗೆ ಇವರು ನೀಡಿರುವ ಕೊಡುಗೆ ವಿಶೇಷವಾದುದು. ಸಹಾಯ ಯಾಚಿಸಿ ಬಂದವರನ್ನು ಯಾವತ್ತೂ ಬರಿಗೈಯಲ್ಲಿ ಕಳುಹಿಸಿದವರಲ್ಲ. ಅಶಕ್ತರ ಸೇವೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಇವರು ಜನರ ಸುಖದುಃಖಗಳಿಗೆ ಸದಾ ಸ್ಪಂದಿಸುವ ಶ್ರೀಮಂತ ಹೃದಯಿ.

ಪ್ರಕಾಶಾಭಿನಂದನ 60: ಇಂಥ ಮಹಾನ್ ಸಾಧಕನಿಗೆ, ಜನಪ್ರೀತಿಯ ನಾಯಕನಿಗೆ, ಯಶಸ್ವಿ ಉದ್ಯಮಿಗೆ 60 ವರ್ಷ  ತುಂಬುವ ಹಿನ್ನೆಲೆಯಲ್ಲಿ ಡಿ. 25ರಂದು ಮಂಗಳೂರಿನ ಬಂಗ್ರಕೂರಿನಲ್ಲಿ ಅದ್ದೂರಿ ಸನ್ಮಾನ ಕಾರ್ಯಕ್ರಮ ಪ್ರಕಾಶಾಭಿನಂದನೆ-60 ಆಯೋಜಿಸಲಾಗಿದೆ. ಸುಮಾರು 25ರಿಂದ 30 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಬಂಟರು ಸೇರಿದಂತೆ ಅವರ ಹಿತೈಷಿಗಳೆಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿ ದುಡಿಯುತ್ತಿದ್ದಾರೆ. ಎಲ್ಲ ಪ್ರಮುಖ ಬಂಟ ನಾಯಕರು ಒಂದೇ ವೇದಿಕೆಯಲ್ಲಿ  ಕಂಡು ಬರುವ ಒಂದು ಅಪರೂಪದ ಕಾರ್ಯಕ್ರಮಕ್ಕೆ ಪ್ರಕಾಶ್ ಶೆಟ್ಟಿ ಅವರ ಪ್ರಕಾಶಾಭಿನಂದನ ಕಾರ್ಯಕ್ರಮ ಸಾಕ್ಷಿಯಾಗಲಿದೆ. ಇದಕ್ಕೆ ಸೆಲೆಬ್ರಿಟಿ ಸ್ಪರ್ಶ ಕೂಡ ಸಿಗಲಿದ್ದು, ಖ್ಯಾತ ಸಿನಿಮಾ ಕಲಾವಿದರು ಕೂಡ ಪಾಲ್ಗೊಳ್ಳಲಿದ್ದಾರೆ. ಈಗ ಕಂಡು ಬರುವ ಇಂಥದ್ದೊಂದು ಒಗ್ಗಟ್ಟಿನ ಕಾರ್ಯಕ್ರಮ ಅತಿ ವಿರಳವಾಗಿದೆ. ಆದ್ದರಿಂದ ಇದಕ್ಕೆ ಕಾರಣರಾಗಿರುವ ಪ್ರಕಾಶ್ ಶೆಟ್ಟಿ ಕೂಡ ವಿರಳಾತಿವಿರಳ ಅಸಾಮಾನ್ಯ ಸಾಧಕ ಎಂಬುದು ಖಾತ್ರಿಯಾಗುತ್ತಿದೆ.

ಕಾರ್ಯಕ್ರಮದಲ್ಲಿ ಸಂಸ್ಕೃತಿ, ಮನೋರಂಜನೆ, ಚಿಂತನೆಗೆ ಸಹಕರಿಸುವ ಹಲವಾರು ವೇದಿಕೆಗಳಿರಲಿವೆ ಮತ್ತು ಇವುಗಳಲ್ಲಿ ಪ್ರಬುದ್ಧರು ತಮ್ಮ ಅಭಿಪ್ರಾಯ, ಚಿಂತನೆ, ಕಲಾ ಪ್ರೌಢಿಮೆಗಳನ್ನು ನಮ್ಮೆದುರು ತೆರೆದಿಡಲಿದ್ದಾರೆ.

ಪ್ರಕಾಶ್ ಶೆಟ್ಟಿ ಅವರ ಚಿಂತನೆ, ಪರಿಶ್ರಮದ ಕಾರಣದಿಂದಾಗಿಯೇ ಇಂದು ಅವರು ಆರಂಭಿಸಿದ ಸಂಸ್ಥೆ ಅಲ್ಪಾವಧಿಯಲ್ಲೇ ಮಟ್ಟಕ್ಕೆ ಬೆಳೆದು ನಿಲ್ಲಲು ಕಾರಣ. ಜತೆಗೆ ಅವರಿಗೆ ಜನರ ಶುಭ ಹಾರೈಕೆಯ ಆಶೀರ್ವಾದವೂ ಇದೆ. ಯಾರನ್ನೂ ನೋಯಿಸದ, ಎಲ್ಲರನ್ನೂ ಪ್ರೀತಿಸುವ ಪ್ರಕಾಶ್ ಶೆಟ್ಟಿ ಅವರದ್ದು ದೇವರು ಮೆಚ್ಚುವಂಥ ಮನಸ್ಸು. ಇಂಥವರಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ, ಇಂಥವರು ಮಾತ್ರ ನಿಜವಾದ ಸಮಾಜ ಸೇವಕರು ಎಂಬ ಮಾತು ಎಲ್ಲರಿಂದಲೂ ಕೇಳಿ ಬರುತ್ತಿದೆ.

ಸಂಸ್ಕೃತಿ ಪ್ರಿಯ: ಇವರಿಗೆ ಕರಾವಳಿ ಮತ್ತು ತುಳುವಿನ ಸಂಸ್ಕøತಿ ಮೇಲೆ ಅಪಾರ ಪ್ರೀತಿ. ಇದನ್ನು ನೀವು ಕಣ್ಣಾರೆ ಕಂಡು ತಿಳಿದುಕೊಳ್ಳಬೇಕಿದ್ದರೆ ಇವರ ಬೆಂಗಳೂರಿನ ಬಂಜಾರ ಹೊಟೇಲ್ಗೆ  ಹೋಗಬೇಕು. ಅಲ್ಲಿ ಒಂದು ತುಳುನಾಡನ್ನೇ ಇವರು ಸೃಷ್ಟಿಸಿದ್ದಾರೆ. ಕರ್ನಾಟಕದವರಿಗೆ ಮತ್ತು ದೇಶ ವಿದೇಶದ ಲಕ್ಷಾಂತರ ಮಂದಿಗೆ ತುಳು ಮಣ್ಣಿನ ಸೊಬಗನ್ನು ಪರಿಚಯಿಸಿ ಕೊಡುವಲ್ಲಿ ಇವರ ಕೊಡುಗೆ ಮಹತ್ತರವಾದುದು ಎಂಬುದು ಮೆಚ್ಚತಕ್ಕ ಸಂಗತಿ.

ಹಾಸ್ಪಿಟಾಲಿಟಿ ಲಿಂಕ್ ಪ್ರೈ.ಲಿ., ಮೋಟೆಲ್ಸ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಇಂಡಿಯಾ ಪ್ರೈ. ಲಿ., ಶ್ರೀ ರಾಘವೇಂದ್ರ ಹೊಟೇಲ್ ಎಂಟರ್ಪ್ರೈಸಸ್ ಪ್ರೈ. ಲಿ., ಗೋಲ್ಡ್ಫಿಂಚ್ ರೆಸಾರ್ಟ್ ಪ್ರೈ. ಲಿ., ಬೀನ್ ಬೆರ್ರಿ ರೆಸಾಟ್ಸ್ ಪ್ರೈ. ಲಿ., ಅಣ್ಣಾ ಕೂಟ್ ಪ್ರಾಪರ್ಟಿ ಪ್ರೈ. ಲಿ., ಮುಂತಾದ ಹಲವಾರು ಸಂಸ್ಥೆಗಳಲ್ಲಿ £ರ್ದೇಶಕರಾಗಿಯೂ ದುಡಿದ ಅನುಭವ ಇವರಲ್ಲಿದೆ.

ಪ್ರಕಾಶ್ ಕುಟುಂಬ: ಪ್ರಕಾಶ್ ಶೆಟ್ಟರದ್ದು ಸುಖೀ ಸಂಸಾರ.  ಪತ್ನಿ ಆಶಾ ಶೆಟ್ಟಿ,  ಪುತ್ರ ಗೌರವ್ ಶೆಟ್ಟಿ ಮತ್ತು ಸೊಸೆ ಅನುಷ್ಕಾ ಗೌರವ್ ಶೆಟ್ಟಿ ಜತೆ ಸುಖ ಸಂಸಾರದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಪ್ರಕಾಶಾಭಿನಂದನೆಗೆ ಸಮಿತಿ ರಚನೆ: ಪ್ರಕಾಶ್ ಶೆಟ್ಟಿ ಅವರ  60ನೇ ವರ್ಷವನ್ನು ವಿಶಿಷ್ಟ ರೀತಿಯಲ್ಲಿ  ಆಚರಿಸುಬೇಕೆಂದು ಪುಣೆ    ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ  ಹಾಗೂ ಸಮಾಜ ಸೇವಕ ಗುರ್ಮೆ  ಸುರೇಶ್  ಶೆಟ್ಟಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ  ಕಾರ್ಯಕ್ರಮದ ಯಶಸ್ಸಿಗೆ  ದುಡಿಯುತ್ತಿದ್ದಾರೆ. ಕರಾವಳಿ ಜಿಲ್ಲೆಯಾದ್ಯಂತ  ಅವರ ಓಡಾಟ, ಜಿಲ್ಲೆಯಲ್ಲಿರುವ ಬಂಟರ ಸಂಘಗಳನ್ನು ಸಂಪರ್ಕಿಸಿ ಸಮಾಜದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.  ಸಭೆಗಳನ್ನು ಆಯೋಜಿಸಿದ್ದಾರೆ. ಇದರಲ್ಲಿ ಸಂಪೂರ್ಣ ಯಶಸ್ಸು ಗಳಿಸುವ ವಿಶ್ವಾಸವೂ  ಅವರಲ್ಲಿದೆ. ಮುಖ್ಯವಾಗಿ ಸಮಾಜದ ಮುಖಂಡರು ಅವರ ಮಾತಿಗೆ ಮನ್ನಣೆ ನೀಡಿ ಸ್ಪಂದಿಸುತ್ತಿದ್ದಾರೆಬರಹ: ಜಗನ್ನಾಥ ಶೆಟ್ಟಿ ಬಾಳ (ಮಾಜೀ ಅಧ್ಯಕ್ಷ, . ಜಿಲ್ಲಾ ಕಾರ್ಯನಿರತ, ಪರ್ತಕರ್ತರ ಸಂಘ, ಮಂಗಳೂರು)

Pages