ಮುಂಬೈ ಬಂಟ್ಸ್ ಅಸೋಸಿಯೇಶನ್ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ, ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುಂಬೈ ಬಂಟ್ಸ್ ಅಸೋಸಿಯೇಶನ್ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ, ಸನ್ಮಾನ

Share This
BUNTS NEWS, ಮುಂಬಯಿ: ಯಾರು ತಂದೆ-ತಾಯಂದಿರ ಮಾತನ್ನು ಗೌರವಿಸುತ್ತಾರೋ ಅಂತಹ ಮಕ್ಕಳು ಮುಂದೆ ಸಮಾಜದಲ್ಲಿ ಒರ್ವ ಗೌರವಾನ್ವಿತಿಯ ವ್ಯಕ್ತಿಯಾಗಿ ಮುಂದುವರಿಯಲು ಸಾದ್ಯ ಎಂದು ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಅವರು ಜು.21 ರಂದು ಬೋಂಬೆ ಬಂಟ್ಸ್ ಅಸೋಸಿಯೇಶನ್ ಶಿಕ್ಷಣ ಸಮಿತಿಯ ವತಿಯಿಂದ ಜೂಯಿನಗರ ಪಶ್ಚಿಮ ಬಂಟ್ಸ ಸೆಂಟರಿನ ಶಶಿಕಲಾ ಮನಮೋಹನ ಶೆಟ್ಟಿ ಕಾಂಪ್ಲೆಕ್ಷ್ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಜರಗಿದ ವಾರ್ಷಿಕ ಶೈಕ್ಷಣಿಕ ನೆರವು ವಿತರಣಾ ಸಮಾರಂಭದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರುಸಮಯಕ್ಕೆ ಸರಿಯಾಗಿ ಮಕ್ಕಳಿಗೆ ನೀಡುತ್ತಿರುವ ವಿದ್ಯಾಭ್ಯಾಸವನ್ನು ನಿರಂತರವಾಗಿ ಅವರಿಗೆ ನೀಡಬೇಕು. ಅದೇ ರೀತಿ ವಿದ್ಯೆ ಎಂಬ ಅಹಂಕಾರ ನಮ್ಮಲ್ಲಿರಬಾರದು. ವಿದ್ಯೆಗೆ ಯಾವುದೇ ಜಾತಿ ಯಾ ಕೊನೆ ಎಂಬುದಿಲ್ಲ ಎನ್ನುತ್ತಾ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ  ಸಮಾಜಸೇವೆ ಜಸ್ಮಿನ್ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಡಾ. ಸುರೇಂದ್ರ ಶೆಟ್ಟಿ ಮಾತನಾಡಿ, ಸಂಘ ಸಂಸ್ಥೆಯಿಂದ ದೊರೆಯುತ್ತಿರುವ ಆರ್ಥಿಕ ಸಹಾಯವನ್ನು ಮಕ್ಕಳು ಒಂದು ಪ್ರಸಾದವೆಂದು ಸ್ವೀಕರಿಸಿ ಶೈಕ್ಷಣಿಕವಾಗಿ ಯಶಸ್ವಿಯಾಗಿ ಮುಂದುವರಿಯಬೇಕು. ನಮ್ಮ ಸಮಾಜದಲ್ಲಿ ದಾನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂತವರನ್ನು ಕೂಡಾ ಸಂಪರ್ಕಿಸಿ ಅವರ ಮೂಲಕ ಶೈಕ್ಷಣಿಕ ನೆರವನ್ನು ನೀಡುವಂತಾಗಬೇಕು ಎಂದರು.

ತುಳು ಸಂಘ ಬರೋಡದ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ಮಾತನಾಡಿ, ಯಾವುದೇ ಸಮಾಜ ಅಭಿವೃದ್ಧಿಗೊಳ್ಳಬೇಕಾದರೆ ಸಂಘಟನೆಗಳು ಅಗತ್ಯವಿದೆ ಅಸೋಸಿಯೇಷನ್ ಬಂಟ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ನೆರವು ಪಡೆದ ವಿದ್ಯಾರ್ಥಿಗಳು ಅಸೋಸಿಯೇಷನ್ ಸೇವಾಕಾರ್ಯಗಳಿಗೆ ಸಾಕಾರದಂತೆ ಪಾಲಕರು ಮಾರ್ಗದರ್ಶಕರಾಗಬೇಕು ಎಂದರು.

ಗೌರವ ತಿಥಿ ತುಂಗ ಗ್ರೂಪ್ ಆಫ್ ಹೋಟೆಲ್ಸ್ ಇನ್ ಸಿಎಂ ಡಿ ಸುಧಾಕರ್ ಹೆಗಡೆ ಮಾತನಾಡಿ, ಅಸೋಸಿಯೇಷನ್ ಸ್ಥಾಪನೆ ದಿನದಲ್ಲಿ ನನ್ನ ಸದಸ್ವತ್ವ ಇದೆ 6,000 ರೂ.ಯಿಂದ ಪ್ರಾರಂಭಗೊಂಡ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ಇದೀಗ 40 ಲಕ್ಷದಷ್ಟು ವಿಸ್ತಾರವಾಗಿರುವ ಸಂತಸ ತಂದಿದೆ ಬಂಟರ ಸಂಘ ಇದೀಗ 2 ಎರಡು ಕೋಟಿ ರೂಪಾಯಿಯಷ್ಟು ನೆರವನ್ನು  ವಿತರಿಸುತ್ತಿದೆ ಸಮಾಜದ ಮಕ್ಕಳು ವಿದ್ಯೆಯಿಂದ ವಂಚಿತರಾಗದಂತೆ ಸಂಘಟನೆಗಳು ನೋಡಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿ  ಅಸೋಸಿಯೇಷನ್ ಮಾಜಿ ಅಧ್ಯಕ್ಷ ಜಯ ಕೆ ಶೆಟ್ಟಿ ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, ಸಂಘಟನೆ ಕಟ್ಟುವ ದಿನದಿಂದಲೇ ತುಂಬಾ ಜನ ಶ್ರಮವಹಿಸಿದ್ದಾರೆ ಇದರ ಅಧ್ಯಕ್ಷನಾಗಿ ಸೇವೆ ಮಾಡಿದ್ದೇನೆ ಬದುಕಿನಲ್ಲಿ ಗುರಿ  ಇರಬೇಕು ಉದ್ದೇಶ ಇರಬೇಕು ಸಾಧನೆಯಿಂದ ಗೆಲ್ಲಬಹುದು ನಾನ್ ಮಟ್ಟಕ್ಕೆ ಬೆಳೆಯಲು ಸಾಧನೆಯನ್ನು ಮಾಡಿದ್ದೇನೆ ನನ್ನೊಳಗೆ ಭಗವಂತನನ್ನು ಕಂಡಿದ್ದೇನೆ ಎಂಥ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ನೀಡುತ್ತಾನೆ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯನ್ನು ದೇವರ ಸಾಲಿನಲ್ಲಿ ಇಡಬೇಕು ಉತ್ತಮ ಶಿಕ್ಷಣವನ್ನು ಮಕ್ಕಳು ಗಳಿಸಬೇಕು. ಅಸೋಸಿಯೇಷನ್ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಒಂದು ಆರ್ಥಿಕ ಸಹಾಯ ಅಸಕ್ತ ವಿದ್ಯಾರ್ಥಿಗಳಿಗೆ ಸಾಕಾರದ ಆಗುತ್ತಿದೆ ಎಂದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಭಾರತ್ ಕೋಚ್ ಬಿಲ್ಡರ್ ಸಿಎಂಡಿ ಸದಾಶಿವ ಶೆಟ್ಟಿ, ವಿದ್ಯೆ ಮನುಷ್ಯನ ಬದುಕನ್ನು ಬದಲಾಯಿಸಬಲ್ಲದು ರಾತ್ರಿ ಶಾಲೆಯಲ್ಲಿ ಕಲಿತ ಸಂಜೀವ ಶೆಟ್ಟಿ ಎಂಬ ಸಾಮಾನ್ಯ ಜ್ಞಾನಿಯಾಗಿ ದೊಡ್ಡ ಸಾಧನೆಯನ್ನೇ ಮಾಡಿರುವುದನ್ನು ನಾವು ಗಮನಿಸಿದ್ದೇವೆ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲಾಗದು ನಾವು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಅವರನ್ನು ಸ್ವ ಪ್ರಜೆಗಳನ್ನಾಗಿ ಮಾಡುವಂತೆ ಶಕ್ತಿ ತುಂಬುವ ಸೇವೆ ಮಾಡೋಣ ಎಂದು ನುಡಿದರು.

ಸಂದರ್ಭದಲ್ಲಿ ಅಸೋಸಿಯೇಷನ್ ಟ್ರಸ್ಟಿ ಅವಿನ್ಯೂ ಹೋಟೆಲ್ ಮಾಲಕರಾದ ರಘುರಾಮ ಶೆಟ್ಟಿ ಫಸ್ಟ್ ಮಾಸಿಎಂಡಿ. ಜೆ ಪಿ ಶೆಟ್ಟಿ ಭಾರತ್ ಕೋಶ ಬಿಲ್ಡರ್ಸ್ ಇನ್ ಸಿಎಂಡಿ ಸದಾಶಿವ ಶೆಟ್ಟಿ ಇವರನ್ನು ವೇದಿಕೆಯ ಗಣ್ಯರು ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಪ್ರಾರಂಭದಲ್ಲಿ ಗೀತಾ ಶೆಟ್ಟಿಯವರು ಪ್ರಾರ್ಥನೆಗೈದರು ಶಿಕ್ಷಕಿ. ಅಮೃತಾ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ ಅಪಾರ ಮಣಿಸಿದರು ಅತಿಥಿಗಳನ್ನು ಸನ್ಮಾನಿತರನ್ನು ಮುರಳಿ ಕೆ ಶೆಟ್ಟಿ ನ್ಯಾಯವಾದಿ ಗುಣಕರ್ ಶೆಟ್ಟಿ ಸಿಎ ವಿಶ್ವನಾಥ್ ಶೆಟ್ಟಿ ಸಿಎ ಸುರೆಂದ್ರ ಶೆಟ್ಟಿ ರತ್ನಾಕರ ಶೆಟ್ಟಿ ಉಪ್ಕರ್. ಶ್ರೀಮತಿ ತೇಜಸ್ವಿ ಶೆಟ್ಟಿ ಪರಿಚಯಿಸಿದರು ಸಭಾಕಾರ್ಯಕ್ರಮದ ಬಳಿಕ ಅಸೋಸಿಯೇಷನ್ನ ಸದಸ್ಯರು ಹಾಗೂ ಅತಿಥಿ ಕಲಾವಿದರಿಂದ ಬಾಲಕೃಷ್ಣ ಶೆಟ್ಟಿ ಅಜೆಕಾರ್ ಅವರ ನಿರ್ದೇಶನದಲ್ಲಿ ಶನೀಶ್ವರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಮಾಜಿ ಅಧ್ಯಕ್ಷರುಗಳು  ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷರ ಗಳು ಅಪಾರ ಸಂಖ್ಯೆಯಲ್ಲಿ ಸಮಾಜಬಾಂಧವರು ಯಕ್ಷಗಾನ ಅಭಿಮಾನಿಗಳು ಪಾಲ್ಗೊಂಡಿದ್ದರು.

ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಸರಳಾ ಬಿ. ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಕೃಷ್ಣ ಪ್ಯಾಲೇಸ್ ಸಿಎಂಡಿ ಕೃಷ್ಣ ವೈ ಶೆಟ್ಟಿ ಅಸೋಸಿಯೇಶನ್ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ಶೆಟ್ಟಿ, ಜತೆ ಕಾರ್ಯದರ್ಶಿ ಅಡ್ವೊಕೇಟ್ಗುಣಾಕರ್ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಮ ಸುಂದರ್ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್. ಶೆಟ್ಟಿ, ವಿಭಾಗದ ಕಾರ್ಯಧ್ಯಕ್ಷೆ ಚರಣ್ ಆರ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. (ವರದಿ: ಈಶ್ವರ ಎಂ. ಐಲ್ ಚಿತ್ರ: ದಿನೇಶ್ ಕುಲಾಲ್)

Pages