BUNTS NEWS, ಬಂಟ್ವಾಳ: ವಿದ್ಯುತ್ ಇಲಾಖೆಯ ನಿವೃತ್ತ ಸಹಾಯಕ
ಎಂಜಿನಿಯರ್ ಕುಂಬ್ರ ಕಿಟ್ಟಣ್ಣ ರೈ
(78) ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.15ರಂದು ನಿಧನರಾದರು.
ಸುದೀರ್ಘ
ಅವಧಿಯಲ್ಲಿ ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್ ಆಗಿ ದ.ಕ.
ಜಿಲ್ಲೆಯ ನಾನಾ ಕಡೆಗಳಲ್ಲಿ ಕರ್ತವ್ಯ
ಸಲ್ಲಿಸಿದ್ದ ಕಿಟ್ಟಣ್ಣ ರೈ ಅವರು, ಪ್ರಗತಿಪರ ಕೃಷಿಕರೂ
ಆಗಿದ್ದರು. ಅವರು ಪತ್ನಿ, ಮೂವರು
ಪುತ್ರರು ಮತ್ತು ಓರ್ವ ಪುತ್ರಿ
ಹಾಗೂ ಅಪಾರ ಬಂಧು ಮಿತ್ರರನ್ನು
ಅಗಲಿದ್ದಾರೆ.