BUNTS NEWS, ಮಂಗಳೂರು/ಮುಂಬೈ: ಜಾಗತಿಕ ಬಂಟರ ಸಂಘಗಳ
ಒಕ್ಕೂಟದ 23ನೇ ವಾರ್ಷಿಕ ಮಹಾಸಭೆಯು ಆ.31ರ ಶನಿವಾರ ಸಂಜೆ
6ಕ್ಕೆ ಮುಂಬೈ ಬಂಟ್ಸ್ ಸಂಘದ
ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ
(ತುಂಗಾ), ಸೊಶಿಯಲ್ ವೆಲ್ಫೆರ್, ಅನೆಕ್ಷ್
ಕಟ್ಟಡ, ಬಂಟರ ಭವನ , ಕುರ್ಲಾ(ಪೂರ್ವ)ದಲ್ಲಿ ಜರಗಲಿದೆ.
ಈ ವಾರ್ಷಿಕ ಮಹಾಸಭೆಗೆ
ಆಡಳಿತ ಮಂಡಳಿಯ ಸರ್ವ ಸದಸ್ಯರು
ಸದಸ್ಯ ಸಂಘಗಳ ಪದಾದಿಕಾರಿಗಳು ಹಾಗೂ
ಆಹ್ವಾನಿತ ಎಲ್ಲಾ ಸದಸ್ಯರು ಸಭೆಯಲ್ಲಿ
ಭಾಗವಹಿಸಿ ಸಲಹೆ ಸೂಚನೆ ನೀಡಿ
ಸಭಾಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಬೇಕಾಗಿ ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ,
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ,
ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೊಹನ್‍ದಾಸ್ ಶೆಟ್ಟಿ, ಜೊತೆ- ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.