BUNTS NEWS, ಸುರತ್ಕಲ್: ಕೇಂದ್ರ ಸರ್ಕಾರದ ಯುವಜನ
ಸೇವಾ ಹಾಗೂ ಕ್ರೀಡಾ ಮಂತ್ರಾಲಯದ
ಸಾಂಸ್ಕ್ರತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ಭಾರತ
ದೇಶವನ್ನು ಪ್ರತಿನಿಧಿಸುವ ನಿಯೋಗಕ್ಕೆ ಕುಮಾರಿ ದೀಕ್ಷಾ ಎಂ
ಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ನಿಯೋಗ ಜು.2ರಿಂದ
ಜು9ರವರೆಗೆ ಚೀನಾಕ್ಕೆ ಭೇಟಿಕೊಡಲಿದೆ.
ಭಾರತದ ವಿವಿಧ ಭಾಗಗಳಿಂದ, ವಿವಿಧ
ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಈ ನಿಯೋಗದಲ್ಲಿ ಪಾಲುಗೊಳ್ಳಲಿದ್ದಾರೆ.
ಚೀನಾದ ಯುವ ಜನತೆಗೆ ದೀಕ್ಷಾ
ರಾಜ್ಯದ ಜಾನಪದ ನೃತ್ಯ ಪ್ರಕಾರವಾದ
ಪೂಜಾ ಕುಣಿತ ಹಾಗೂ ಕರಾವಳಿಯ
ಹೆಮ್ಮೆಯ ಯಕ್ಷಗಾನದ ಪರಿಚಯ ಮಾಡಿಕೊಡಲಿದ್ದಾರೆ. ಕುಮಾರಿ
ದೀಕ್ಷಾ ಸುರತ್ಕಲ್ಲಿನ ಗೋವಿಂದ ದಾಸ್ ಕಾಲೇಜಿನ
ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಮೈಸೂರಿನ ಜೆ.ಎಸ್.ಎಸ್ ಅಕಾಡೆಮಿ ಆಫ್
ಹೈಯರ್ ಎಜುಕೇಶನ್ ಮತ್ತು ರಿಸರ್ಚ್ (ಡೀಮ್ಡ್
ಟು ಬಿ ಯೂನಿವರ್ಸಿಟಿ) ಅಲ್ಲಿ
ಹಾಸ್ಪಿಟಲ್ ಆಡ್ಮಿನಿಸ್ಟ್ರೇಶನ್ ಅಧ್ಯಯನ ನಡೆಸುತ್ತಿದ್ದಾರೆ.
ಈಕೆ ಯಕ್ಷ ಕಲಾವಿದ, ಯಕ್ಷಗಾನ
ಸಂಘಟಕ ಮಾಧವ ಎಸ್ ಶೆಟ್ಟಿ
ಬಾಳ ಹಾಗೂ ಮೀರವಾಣಿ ಎಂ
ಶೆಟ್ಟಿ ಅವರ ಪುತ್ರಿ.