ಅಮೇರಿಕಾದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟಿನ 34ನೇ ಘಟಕ ಉದ್ಘಾಟನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಮೇರಿಕಾದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟಿನ 34ನೇ ಘಟಕ ಉದ್ಘಾಟನೆ

Share This
BUNTS NEWS, USA: ಅಮೇರಿಕಾದ ನ್ಯೂಜರ್ಸಿಯ ಶ್ರೀ ಕೃಷ್ಣ ವೃಂದಾವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್  ಟ್ರಸ್ಟ್ 34ನೇ ಘಟಕವನ್ನು ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
2018 ಆಗಸ್ಟ್ 15ರಂದು ಅಮೇರಿಕಾ ಘಟಕ  ಸ್ಥಾಪನೆಗೆ ಅಮೇರಿಕಾ ಸರಕಾರವು  ಮಾನ್ಯತೆ ನೀಡಿದ್ದು  ಅದರ ಮೂಲ ಪ್ರಯತ್ನಗಾರರು ವಿದ್ವಾನ್ ಯೊಗೇಂದ್ರ ಭಟ್ ಸ್ವಾಗತಿಸಿ ಪ್ರಾಸ್ತಾವಿಕ  ಮಾತನ್ನಾಡಿದರು. ಪಟ್ಲ ಫೌಂಡೇಶನ್ ಟ್ರಸ್ಟ್ ನಡೆದು  ಬಂದ ದಾರಿಯನ್ನು ಸ್ಥಾಪಕಾಧ್ಯಕ್ಷ ಪಟ್ಲ  ಸತೀಶ್ ಶೆಟ್ಟಿ ಸಭೆಯಲ್ಲಿ ವಿವರಿಸಿದರು.
ನ್ಯೂಜರ್ಸಿಯ ಶ್ರೀಕೃಷ್ಣ  ವೃಂದಾವನಕ್ಕೆ ಅಮೇರಿಕಾ ಘಟಕದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಆದಿ ಚುಂಚನಗಿರಿ ಮಠದ ನಿರ್ಮಾಲಾನಂದ ಸ್ವಾಮೀಜಿಯವರು ಭಕ್ತಿಯ ದ್ಯೋತಕವಾಗಿ ಕೃಷ್ಣ  ಮಠದ  ಬಳಿ ಬಾಲವೃಕ್ಷವನ್ನು ನೆಟ್ಟು ಜಲಪ್ರೋಕ್ಷನ ಮಾಡಿದರು.

ಸಮಾರಂಭದಲ್ಲಿ ಶ್ರೀ ಪ್ರೇಮಾನಂದ ಸ್ವಾಮಿ, ಪ್ರಕಾಶ್ ಚಾರ, ವಾಸು ಐತಾಳ, ಶಾನಾಡಿ  ಅಜಿತ್  ಕುಮಾರ್ ಹೆಗ್ಡೆ  ಸವಣೂರು  ಸೀತಾರಾಮ ರೈ, ಕೇಂದ್ರಿಯ ಘಟಕದ ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಕೋಶಾಧಿಕಾರಿ  ಸಿಎ ಸುದೇಶ್ ರೈ, ಶ್ರೀಪತಿ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಸುಧಾಕರ ಪೂಂಜಾ ಹೊಸಬೆಟ್ಟು, ರವಿಚಂದ್ರ ಶೆಟ್ಟಿ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ತಿರುಪತಿ ಮಹಾತ್ಮೆ ಯಕ್ಷಗಾನ  ಕಾರ್ಯಕ್ರಮ ಜರಗಿತು

Pages