BUNTS NEWS, ಮಂಗಳೂರು: ಥಾಯಿಲ್ಯಾಂಡಿನ ಬ್ಯಾಂಕಾಕಿನಲ್ಲಿ ಜು.20-30ರ ವರೆಗೆ ನಡೆಯುವ ಐಎಫ್’ಎಂಎ ಸೀನಿಯರ್ ವಲ್ಡ್ ಮುಯೆಥೈ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಪ್ರಥಮ ಮಹಿಳಾ ಮುಯೆಥೈ ಆಟಗಾರ್ತಿ ಅನ್ವಿತಾ ಆಳ್ವ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಶಾಲು ಹೊದಿಸಿ ಗೌರವಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ 25 ಸಾವಿರ ರೂ. ಸಹಾಯಧನ ನೀಡಿದರು.
ಮುಯೆಥೈ ಚಾಂಪಿಯನ್ ಷಿಪ್ ನಲ್ಲಿ ಗೆದ್ದು ದೇಶಕ್ಕೆ ಕೀರ್ತಿ ತರುವಂತೆ ಐಕಳ ಹರೀಶ್ ಶೆಟ್ಟಿ ಅವರು ಅನ್ವಿತಾ ಆಳ್ವರಿಗೆ ಶುಭ ಹಾರೈಸಿದರು. ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆಕಾರ್ಯದರ್ಶಿ ಸತೀಶ ಶೆಟ್ಟಿ ಅಡಪ, ಮಾಜಿ ಕೋಶಾಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಸಚ್ಚೀದಾನಂದ ಹೆಗ್ಡೆ, ಸುರೇಶ್ ಶೆಟ್ಟಿ ಪುಚ್ಚಾಡಿ, ಜಯರಾಮ ಆಳ್ವ ತಡಂಬೈಲ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನ ಪ್ರಥಮ ಮಹಿಳಾ ಮುಯೆಥೈ ಆಟಗಾರರಾಗಿರುವ ಅನ್ವಿತಾ ಆಳ್ವ ಎರಡು ಬಾರಿ ರಾಷ್ಟ್ರೀಯ ಮುಯೆಥೈ ಚಾಂಪಿಯನ್ ಆಗಿದ್ದಾರೆ. ಪ್ಲೈವೆಟ್ ವುಮೆನ್ಸ್ ಮುಯೆಥೈ ಲೀಗ್ ಚಾಂಪಿಯನ್ 2018 ಮತ್ತು ಇಂಟರ್ ನ್ಯಾಷನಲ್ ಸಿಲ್ವರ್ ಮೆಡಲಿಸ್ಟ್ ಇನ್ ಡಬ್ಲ್ಯು ಡಬ್ಲ್ಯು ಎಫ್ ಚಾಂಪಿಯನ್ 2017 ಆಗಿದ್ದಾರೆ. ಇವರು ತಡಂಬೈಲ್ ಜಯರಾಮ ಆಳ್ವರ ಪುತ್ರಿಯಾಗಿದ್ದಾಳೆ.