ಮಂಗಳೂರು: ಕರ್ನಾಟಕ ತುಳು ಸಾಹಿತ್ಯ
ಅಕಾಡೆಮಿಯ ವತಿಯಿಂದ ತುಳುಭವನದ ‘ಸಿರಿಚಾವಡಿ’ಯಲ್ಲಿ ಜೂನ್ 29ರ
ಶನಿವಾರದಂದು ಅಪರಾಹ್ನ 3ರಕ್ಕೆ ಅಕಾಡೆಮಿ ಪ್ರಕಟಿತ
ಡಾ.ರಾಧಾಕೃಷ್ಣ ಬೆಳ್ಳೂರು ಅವರ ‘ತುಳು ಲಿಪಿ
ಪರಿಚಯ’ (ಪರಿಷ್ಕೃತ) ಮತ್ತು ತುಳು ಸಾಹಿತ್ಯ
ಅಕಾಡೆಮಿ ಮಾಜಿ ಅಧ್ಯಕ್ಷರಾದ ಶ್ರೀಮತಿ
ಎಂ.ಜಾನಕಿ ಬ್ರಹ್ಮಾವರ ಅವರ
‘ದೂಲೊಪ್ಪ’ (ಅಮ್ಮ ಪ್ರಕಾಶನ ಕಟಪಾಡಿ)
ಕೃತಿ ಬಿಡುಗಡೆ ಸಮಾರಂಭವು ನಡೆಯಲಿರುವುದು.
ಈ ಸಂದರ್ಭ ಅಕಾಡೆಮಿಯು ಬೆಳ್ಳಿಹಬ್ಬದ
ಸವಿನೆನಪಿಗಾಗಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧೆಯಲ್ಲಿ
ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.
ಸಮಾರಂಭದ
ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ
ಅಕಾಡೆಮಿಯ ಅಧ್ಯಕ್ಷರಾದ ಎ. ಸಿ. ಭಂಡಾರಿ
ವಹಿಸಲಿದ್ದಾರೆ. ಹಿರಿಯ ವಿದ್ವಾಂಸರಾದ ಡಾ.ಪಾದೆಕಲ್ಲು ವಿಷ್ಣುಭಟ್ ಮತ್ತು ಹಿರಿಯ ಸಾಹಿತಿ
ಶ್ರೀಮತಿ ಬಿ. ರೋಹಿಣಿ ಕೃತಿಗಳನ್ನು
ಬಿಡುಗಡೆ ಮಾಡಲಿರುವರು.
ಸಾರ್ವಜನಿಕರು
ಹಾಗೂ ಪುಸ್ತಕಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಅಧಿಕ
ಸಂಖ್ಯೆಯಲ್ಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ ಅವರು
ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.