ಉಡುಪಿಯಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಉಡುಪಿಯಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ

Share This
BUNTS NEWS, ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) ಮಂಗಳೂರು ಇದರ ಆಡಳಿತ ಮಂಡಳಿ ಸಭೆಯು ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜೂ.15ರಂದು ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಉಡುಪಿಯಲ್ಲಿ ಒಕ್ಕೂಟದ ಸಿಬ್ಬಂದಿ ಕುಮಾರಿ ಸಿಂದಿಯಾ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಜರಗಿತು.
ಒಕ್ಕೂಟದ ಗೌ. ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕ ಭಾಷಣದಲ್ಲಿ, ಒಕ್ಕೂಟದ ವತಿಯಿಂದ ಈಗಾಗಲೇ ಹಮ್ಮಿಕೊಂಡ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಧನಸಹಾಯ ನೀಡಿದ ಬಗ್ಗೆ ಅಂಕಿ ಅಂಶಗಳನ್ನು ಸಭೆಗೆ ತಿಳಿಸಿದರು. ನಂತರ ಲೆಕ್ಕ ಪರಿಶೋಧಕರ 2018-2019 ನೇ ಅವಧಿಯ ಕ್ರೋಢಿಕೃತ ಲೆಕ್ಕಪತ್ರವನ್ನು ಕೋಶಾಧಿಕಾರಿ ಉಳ್ತೂರು ಮೋಹನ್‍ದಾಸ್ ಶೆಟ್ಟಿಯವರು ಸಭೆಯಲ್ಲಿ ಮಂಡಿಸಿದರು. ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಮುಂದಿನ ವಾರ್ಷಿಕ ಮಹಾಸಭೆಯನ್ನು ಸೆ.31ರಂದು ಮುಂಬೈಯಲ್ಲಿ ನಡೆಸುವ ಪ್ರಸ್ತಾವನೆಗೆ ಆಡಳಿತ ಮಂಡಳಿ ಸಭೆಯು ಒಪ್ಪಿಗೆ ನೀಡಿತು.

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪ್ರಕಾಶ್ ಶೆಟ್ಟಿ ಅಧ್ಯಕ್ಷರು ಎಂ.ಆರ್.ಜಿ ಗ್ರೂಪ್, ಇವರು ನಿರ್ದೇಶಕರಾಗಿಯೂ ಮತ್ತು ಸದಾನಂದ ಶೆಟ್ಟಿ ರಿಲೈಬೆಲ್ ಬ್ಯುಲ್ಡರ್ಸ್ ಆಂಡ್ ಡೆವೆಲಪರ್ಸ್ ಮುಂಬೈ, ರತ್ನಾಕರ್ ಎಮ್.ಶೆಟ್ಟಿ ವಸೈ ಮುಂಬೈ, ಅಶೋಕ್ ಎಸ್.ಶೆಟ್ಟಿ ಮೆರಿಟ್ ಹಾಸ್ಪಿಟಲಿಟಿ ಸರ್ವಿಸಸ್ ಪ್ರೈವೆಟ್ ಲಿ. ಮುಂಬೈ ಇವರು ಪೋಷಕ ಸದಸ್ಯರಾಗಿ ಆಡಳಿತ ಮಂಡಳಿ ಸಭೆಗೆ ಸೇರ್ಪಡೆಗೊಂಡಿರುತ್ತಾರೆ. ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ನೂತನವಾಗಿ ಸೇರ್ಪಡೆಗೊಂಡ ನಿರ್ದೇಶಕರು ಹಾಗೂ ಪೋಷಕರುಗಳನ್ನು ಅಭಿನಂದಿಸಿದರು. ಅಲ್ಲದೇ ನಮ್ಮ ಒಕ್ಕೂಟದ ವತಿಯಿಂದ ಅಶಕ್ತ ಕುಟುಂಬಗಳಿಗೆ ನಿರಂತರವಾಗಿ ಧನಸಹಾಯ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ 17 ಫಲಾನುಭವಿಗಳಿಗೆ (ಮದುವೆಗೆ-01, ವೈದ್ಯಕೀಯ ಚಿಕಿತ್ಸೆಗೆ-05, ವಸತಿಯೋಜನೆಗೆ-06, ಹಾಗೂ ಇತರೆ ಯೋಜನೆಗೆ-05) ಒಕ್ಕೂಟದ ಅಧ್ಯಕ್ಷರು ಶ್ರೀ ಐಕಳ ಹರೀಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಆರ್ಥಿಕ ಸಹಾಯ ಧನ ಚೆಕ್‍ಗಳನ್ನು ವಿತರಿಸಿದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಕರ್ನಿರೆ ನಿವೇಶನದಲ್ಲಿ ಒಂದು ಎಕ್ರೆ ಜಾಗದಲ್ಲಿ ನಿರ್ಮಾಣಗೊಳ್ಳುವ ವಸತಿಯೋಜನೆ ಬಗ್ಗೆ ಕಾಮಗಾರಿ ಪ್ರಗತಿಯಲ್ಲಿದ್ದು ಅಗೋಸ್ಟ್ ನಂತರ ಮುಂದಿನ ಕ್ರಮ ತೆಗೆದುಕೊಂಡು ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಒಕ್ಕೂಟದ ಹಿರಿಯ ಆಡಳಿತ ಮಂಡಳಿ ಸದಸ್ಯ.ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷರು ಬಂಟರ ಯಾನೆ ನಾಡವರ ಸಂಘದ ಬೈಂದೂರು ಇವರನ್ನು ಸನ್ಮಾಯಿಸಲಾಯಿತು. ಹಾಗೂ ನೂತನವಾಗಿ ಆಯ್ಕೆಯಾದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರು ಎ.ದೇವಿಪ್ರಸಾದ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರು ಸುಧಾಕರ್.ಎಸ್.ಪೂಂಜ ಹಾಗೂ ಇನ್ನಿತರ ಬಂಟರ ಸಂಘದ ಅಧ್ಯಕ್ಷರನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು.

ಉಳ್ಳಾಲ ಬಂಟರ ಸಂಘದ ವತಿಯಿಂದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೌ.ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಮೋಹನ್‍ದಾಸ್ ಶೆಟ್ಟಿ ಉಳ್ತೂರು ಇವರನ್ನು ಉಳ್ಳಾಲ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪದಾಧಿಕಾರಿಗಳು, ಹಾಗೂ ಇತರ ಸದಸ್ಯರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸಿಬ್ಬಂದಿವರ್ಗದವರು, ಫಲಾನುಭವಿಗಳು ಮತ್ತು ಪೋಷಕರು, ಸಂಬಂಧಿಕರು, ಇತರ ಗಣ್ಯರು ಉಪಸ್ಥಿತರಿದ್ದರು. ಒಕ್ಕೂಟದ ಜೊತೆ-ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ಇವರ ವಂದಿಸಿದರು.

Pages