ಯುಎಇ: ಶಾರ್ಜಾದಲ್ಲಿ ಮಂಗಳೂರು ಮೂಲದವರ ಒಡೆತನದ
ಗೋಲ್ಡನ್ ಸ್ಟಾರ್ಸ್ ನೂತನ ಮ್ಯೂಸಿಕ್ ಆಂಡ್
ಫೈನ್ ಆರ್ಟ್ಸ್ ಸ್ಕೂಲ್’ನ್ನು ಏ.6ರಂದು ಶಾರ್ಜಾ ಇಂಡಿಯನ್
ಸ್ಕೂಲ್ ಪೂರ್ವ ಅಧ್ಯಕ್ಷರಾದ ಶ್ರೀ
ಕೆ. ಬಾಲಕೃಷ್ಣನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಗೌರವ ಅತಿಥಿಗಳಾಗಿ ಶಾರ್ಜಾ ಕರ್ನಾಟಕ ಸಂಘದ
ಪೂರ್ವ ಅಧ್ಯಕ್ಷರಾದ ಬಿ. ಕೆ. ಗಣೇಶ್
ರೈ ಮತ್ತು ಎಲಿಗೆಂಟ್ ಗ್ರೂಪಿನ
ವ್ಯವಸ್ಥಾಪಕ ನಿರ್ದೇಶಕರಾದ ದಿನೇಶ್ ಸಿ ದೇವಾಡಿಗ
ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗೋಲ್ಡನ್ ಸ್ಟಾರ್ಸ್ ಮ್ಯೂಸಿಕ್
ಅಂಡ್ ಫೈನ್ ಆರ್ಟ್ಸ್ ಪ್ರಾಂಶುಪಾಲರಾದ
ಸುರೇಶ್ ಎನ್. ಶೆಟ್ಟಿ ಸರ್ವರನ್ನು
ಸ್ವಾಗತಿಸಿದರು.
ಸಮಾರಂಭದಲ್ಲಿ
ಕರ್ನಾಟಕ ಎನ್.ಆರ್.ಐ.
ಫೋರಂ ಯುಎಇ ಪ್ರಧಾನ ಕಾರ್ಯದರ್ಶಿ
ಪ್ರಭಾಕರ ಅಂಬಲತೆರೆ ಹಾಗೂ ಶಾರ್ಜಾ ಕರ್ನಾಟಕ
ಸಂಘದ ಪೂರ್ವ ಅಧ್ಯಕ್ಷರಾದ ನೋವೆಲ್
ಡಿ ಅಲ್ಮೇಡಾ ಹಾಗೂ ಸೌಹಾರ್ದ
ಲಹರಿಯ ದಿನೇಶ್, ಮಂಗಳೂರಿನಿಂದ ವಿ4
ವಾಹಿನಿಯ ಲಕ್ಷ್ಮಣ್ ಹಾಗೂ ಇನ್ನಿತರ ಹಲವಾರು
ಅತಿಥಿಗಳು ಭಾಗವಹಿಸಿದ್ದರು.
ಹನೀಫ್ ಪರ್ಲಿಯಾರ್ ಕಾವ್ಯದ ಮೂಲಕ ಶುಭವನ್ನು
ಹಾರೈಸಿದರು. ಕಲಾಶಾಲೆಯ ವಿದ್ಯಾರ್ಥಿಗಳೊಂದಿಗೆ ಪೋಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವ್ಯವಸ್ಥಾಪಕ ಪಾಲುದಾರರಾಗಿರುವ ಶ್ರೀಮತಿ ಸೌಮ್ಯ ಸುರೇಶ್
ಶೆಟ್ಟಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ
ಮುಕ್ತಾಯವಾಯಿತು.
ನೂತನ ಕಲಾಶಾಲೆಯಲ್ಲಿ ನುರಿತ ವಾದ್ಯ ಸಂಗೀತ
ಅಧ್ಯಾಪಕರು ಚಿತ್ರ ಕಲಾವಿದರ ಮಾರ್ಗದರ್ಶನದಲ್ಲಿ
ವಿದ್ಯಾರ್ಥಿಗಳಿಗೆ ಕಲಾತರಗತಿಗಳು ಭಾರತೀಯ ಮತ್ತು ಪಾಶ್ಚಾತ್ಯ
ಸಂಗೀತ ಅಭ್ಯಾಸಕ್ಕೆ ವೇದಿಕೆಯನ್ನು ಕಲ್ಪಿಸಲಾಗಿದೆ.