ಬಂಟರ ಸಂಘ ಸೋಮೇಶ್ವರದ ಮಧ್ಯಸ್ಥಿಕೆಯಲ್ಲಿ ಭೂ ವಿವಾದ ಸುಖಾಂತ್ಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಸಂಘ ಸೋಮೇಶ್ವರದ ಮಧ್ಯಸ್ಥಿಕೆಯಲ್ಲಿ ಭೂ ವಿವಾದ ಸುಖಾಂತ್ಯ

Share This
BUNTS NEWS, ತಲಪಾಡಿ: ತಲಪಾಡಿ ಗ್ರಾಮದ ದಿ. ರಘುನಾಥ ಪಕ್ಕಳರ ಮಕ್ಕಳು  ಮತ್ತು ತಿಮ್ಮಪ್ಪ ಪಕ್ಕಳರು ಅವರುಗಳ ಜಮೀನಿನ ಸಮಸ್ಯೆಗಳ ಇತ್ಯರ್ಥದ ಬಗ್ಗೆ ಮಾಡಿದ ಮನವಿಗೆ ಸ್ಪಂದಿಸಿದ ವಿಜಯ ಪ್ರಸಾದ್ ಆಳ್ವರು ಮತ್ತು ಸೋಮೇಶ್ವರ ಬಂಟರ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ ಅವರು ಮನೆಗೆ ಭೇಟಿಕೊಟ್ಟು ಜಮೀನಿನ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಗ್ರವಾಗಿ ಚರ್ಚೆಯನ್ನು ನಡೆಸಿದರು.
ಅಂತಿಮವಾಗಿ ಎರಡೂ ಕಡೆಯವರು ಕಾನೂನಾತ್ಮಕವಾಗಿ ಸಾಮರಸ್ಯಕ್ಕನುಗುಣವಾಗಿ ಹಾಗೂ ಸಮಾನವಾಗಿ ವಿಭಜಿಸಲು ಒಪ್ಪಿಕೊಂಡರು. ನಂತರ ಸರ್ವೆಯನ್ನು ನಡೆಸಿ ಸಮಂಜಸವಾದ ದಾಖಲಾತಿಗಳನ್ನು ಪಡೆದು ಪರಸ್ಪರ ಒಪ್ಪಂದದ ಪ್ರಕಾರ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಆಳ್ವರು ಸೂಚಿಸಿದನ್ವಯ ಎರಡೂ ಕಡೆಯವರು ಒಪ್ಪಿಕೊಂಡರು. ಸಂಬಂಧ ಪಟ್ಟಂತೆ ಎಲ್ಲಾ ದಾಖಲಾತಿಗಳೊಂದಿಗೆ ಹಾಗೂ ಪರಸ್ಪರ ಒಪ್ಪಂದದ ದಸ್ತಾವೇಜಿನಂತೆ ವಿಭಜನೆಗಾಗಿ ನ್ಯಾಯಾಲಯಕ್ಕೆ ಮಂಡಿಸಲಾಗಿದೆ.

ಹಾಗೆಯೇ ಮಿಕ್ಕುಳಿದ ಇಡೀ ಕುಟುಂಬದ ಆಸ್ತಿಗಳ ಸಮಸ್ಯೆಗಳನ್ನು ವಿಜಯ ಪ್ರಸಾದ್ ಆಳ್ವರ ಸಮಕ್ಷಮ ಹಾಗೂ ನ್ಯಾಯ ತೀರ್ಮಾನಕ್ಕೆ ಬದ್ಧರಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಒಪ್ಪಿಕೊಳ್ಳಲಾಗಿ ಸದ್ಯ ಒಂದು ಹಂತದ ಚರ್ಚೆಯನ್ನು ನಡೆಸಲಾಗಿದೆ. ಎಲ್ಲಾ ಹಂತದಲ್ಲಿ ಸದ್ರಿ ಕುಟುಂಬದ ಸಕ್ರೀಯ ಸದಸ್ಯ ಹಾಗೂ ಸೋಮೇಶ್ವರ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಯಶು ಪಕ್ಕಳರ ಸಹಕಾರ ಪ್ರಶಂಸನಾರ್ಹವಾಗಿದೆ.

Pages