ಸುರತ್ಕಲ್: ಜೆಸಿಐ ಸುರತ್ಕಲ್’ನ ಜೆಸಿರೇಟ್
ವಿಭಾಗ ಮತ್ತು ಮಹಿಳಾ ಮಂಡಲ
ಕುಳಾಯಿ (ರಿ) ಇವರ ಸಹಯೋಗದೊಂದಿಗೆ
ಜೆಸಿರೇಟ್ ಸಪ್ತಾಹದ ಅಂಗವಾಗಿ ಪರಿಣಾಮಕಾರಿ
ಭಾಷಣ ಕಲೆ ಎಂಬ ವಿಷಯದ
ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ
ಉದ್ಘಾಟಿಸಿ ಮಾತಾಡಿದ ಜೆಸಿಐ ಸುರತ್ಕಲ್’ನ
ಪೂರ್ವಾಧ್ಯಕ್ಷ ಯೋಗೀಶ್ ನಾಯಕ್ ಯಾವುದೇ
ವ್ಯಕ್ತಿ ಸಾರ್ವಜನಿಕಾಗಿ ಉತ್ತಮ ಭಾಷಣಕಾರಣದಾಗ ತನ್ನ
ಅನುಭವ ಮತ್ತು ಸಾಮರ್ಥ್ಯವನ್ನು ಸಮಾಜಕ್ಕೆ
ನೀಡಿ ಗುರುತಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ. ಈ
ಉದ್ದೇಶದಿಂದ ಇಲ್ಲಿ ಕಾರ್ಯಕ್ರಮ ಆಯೋಜಿಸಿದ
ಎರಡೂ ಸಂಸ್ಥೆಗಳ ಸೇವೆಯನ್ನು ಶ್ಲಾಘಿಸಿದರು.
ಅತಿಥಿಗಳಾಗಿದ್ದ
ಮಹಿಳಾ ಮಂಡಲ ಕುಳಾಯಿನ ಅಧ್ಯಕ್ಷೆ
ಮೀನಾಕ್ಷಿ ದೇವದಾಸ್ ಶುಭಹಾರೈಸಿದರು.
ಜೆಸಿಐನ ಅಧ್ಯಕ್ಷ ಲೋಕೇಶ ರೈ
ಕೆ ಪ್ರಸ್ತಾವಿಸಿದರು. ಕಾರ್ಯಕ್ರಮದಲ್ಲಿ ಜೆಸಿರೇಟ್ ಸಂಯೋಜಕಿ ಭಾರತಿ ನಿರಂಜನ್,
ಕಾರ್ಯಕ್ರಮದ ನಿರ್ದೇಶಕಿ ಲಾವಣ್ಯ, ಜೆಸಿಐ ಮತ್ತು
ಮಹಿಳಾ ಮಂಡಲ ಕುಳಾಯಿನ ಪಧಾದಿಕಾರಿಗಳು
ಮತ್ತು ಸದಸ್ಯರು ಉಪಸ್ಥಿತರಿದ್ದರು.
ಜೆಸಿಐ ವಲಯ ತರಬೇತುದಾರೆ ರಾಜೇಶ್ವರಿ
ಡಿ ಶೆಟ್ಟಿ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಜೆಸಿರೇಟ್ ಅಧ್ಯಕ್ಷೆ ಅನಿತಾ ಎಸ್ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರತಿಮಾ ಎಸ್ ಶೆಟ್ಟಿ
ವಂದಿಸಿದರು.