BUNTS NEWS, ಸುರತ್ಕಲ್: ಬೆಂಗಳೂರು ಬಂಟರ ಸಂಘದ ಆಶ್ರಯದಲ್ಲಿ
ಎ.14ರಂದು ಯುಗಾದಿ ಆಚರಣೆಯ
ಪ್ರಯುಕ್ತ ‘ಬಿಸು ಸಡಗರ’ ಅಂತರ್
ಬಂಟರ ಸಂಘ ಸಾಂಸ್ಕೃತಿಕ ಸ್ಪರ್ಧೆ
ನಡೆಯಲಿದ್ದು ಸುರತ್ಕಲ್ ಬಂಟರ ಸಂಘ ‘ಮುಡಿಪು’ ಕಿರುನಾಟಕ ಪ್ರದರ್ಶಿಸಲಿದೆ.
ಈ ಹಿನ್ನೆಲೆಯಲ್ಲಿ
ಮುಡಿಪು ಕಿರುನಾಟ ಕದ ಮುಹೂರ್ತ ಸಮಾರಂಭವು
ಇತ್ತೀಚೆಗೆ ಸುರತ್ಕಲ್ ಬಂಟರ ಭವನದಲ್ಲಿ ಜರಗಿತು.
ಸಮಾ ರಂಭವನ್ನು ಸಂಘದ ಅಧ್ಯಕ್ಷ ಸುಧಾಕರ
ಪೂಂಜ ಹೊಸಬೆಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು.
ಕದ್ರಿ ನವನೀತ ಶೆಟ್ಟಿ ರಚಿಸಿದ
ಶೀರ್ಷಿಕೆ ಗೀತೆ ‘ಮುಡಿಪು’ ಹಾಡನ್ನು
ಯಕ್ಷಗಾನ ಭಾಗವತ ಪಟ್ಲ ಸತೀಶ್
ಶೆಟ್ಟಿಯವರು ಹಾಡಿದ್ದಾರೆ. ಸುಧಾಕರ ಎಸ್. ಪೂಂಜ
ನೇತೃತ್ವದ ಸುರತ್ಕಲ್ ತಂಡದಲ್ಲಿ ಸುಮಾರು 75 ಮಂದಿ ಕಲಾವಿದರು ಭಾಗವಹಿಸುತ್ತಿದ್ದು,
ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ
ಕಿರುನಾಟಕವನ್ನು ನಿರ್ದೇಶಿಸುತ್ತಿದ್ದಾರೆ. ವಿನೋದ್ ಶೆಟ್ಟಿ, ಮಧು
ಸುರತ್ಕಲ್ ಸಹಕರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ
ಉಲ್ಲಾಸ್ ಶೆಟ್ಟಿ ಪೆರ್ಮುದೆ, ಮಧು
ಸುರತ್ಕಲ್, ಕಿರಣ್ ಪ್ರಸಾದ್ ರೈ,
ಗಿರೀಶ್ ಎಂ. ಶೆಟ್ಟಿ ಕಟೀಲು,
ರತ್ನಾಕರ ಶೆಟ್ಟಿ, ಪ್ರವೀಣ್ ಶೆಟ್ಟಿ,
ಯಶವಂತ ಶೆಟ್ಟಿ, ಆಶ್ರಯ್ ಶೆಟ್ಟಿ,
ಜಯರಾಮ ಶೆಟ್ಟಿ, ರತ್ನಶೇಖರ ಶೆಟ್ಟಿ,
ಲೀಲಾಧರ ಶೆಟ್ಟಿ, ವಿನೀತ್ ಶೆಟ್ಟಿ,
ಪ್ರದೀಪ್ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯಕ್ಷೆ
ಬೇಬಿ ಶೆಟ್ಟಿ, ಕಾರ್ಯದರ್ಶಿ ಚಿತ್ರಾ
ಜೆ. ಶೆಟ್ಟಿ, ಸುಜಾತ ಶೆಟ್ಟಿ,
ವೇದಾವತಿ ಶೆಟ್ಟಿ, ಭವ್ಯಾ ಶೆಟ್ಟಿ,
ವಜ್ರಾಕ್ಷಿ ಶೆಟ್ಟಿ, ಭಾರತಿ ಶೆಟ್ಟಿ,
ಸುಜಾತ ಶೆಟ್ಟಿ ಹೊಸಬೆಟ್ಟು, ಮಾಲತಿ
ಶೆಟ್ಟಿ, ಜ್ಯೋತಿ ಶೆಟ್ಟಿ, ಶೈಲಾ ಶೆಟ್ಟಿ, ಸಂಗೀತಾ ಶೆಟ್ಟಿ, ಸಂಧ್ಯಾ
ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.