ಸುರತ್ಕಲ್: ಜೆಸಿಐ ಸುರತ್ಕಲ್’ನ ಜೆಸಿರೇಟ್
ವಿಭಾಗ ಮತ್ತು ವಿದ್ಯಾದಾಯಿನಿ ಗ್ರಾಮೀಣ
ಅಭಿವೃದ್ಧಿ ಮತ್ತು ಕೃಷಿ ಕೇಂದ್ರ
ಸುರತ್ಕಲ್ ಇವರ ಸಹಯೋಗದೊಂದಿಗೆ ಇಲ್ಲಿನ
ವಿರಾಟ್ ಸಭಾಂಗಣದಲ್ಲಿ ಜೆಸಿರೇಟ್ ಸಪ್ತಾಹದ ಉದ್ಘಾಟನೆ ಮತ್ತು
ತಾರಸಿಯಲ್ಲಿ ತರಕಾರಿಗಳ ಬೆಳೆಯ ನಿರ್ವಹಣೆ ಬಗ್ಗೆ
ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ
ಉದ್ಘಾಟಿಸಿ ಮಾತಾಡಿದ ಜೆಸಿಐ ವಲಯ15ರ ಮಹಿಳಾ ಜೆಸಿ
ಮತ್ತು ಜೆಸಿರೇಟ್ ನಿರ್ದೇಶಕಿ ಸಂಗೀತಾ ಎಂ. ಪ್ರಭು,
ಮಹಿಳೆಯರಿಗೆ ಜೆಸಿಐ ನಲ್ಲಿ ವ್ಯಕ್ತಿತ್ವ
ವಿಕಸನಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮವಿದ್ದರೂ, ಪ್ರತ್ಯೇಕವಾಗಿ
ಜೆಸಿರೇಟ್ ಸಪ್ತಾಹ ಎಂಬ ಶೀರ್ಷಿಕೆಯಲ್ಲಿ
ಏಳು ದಿನಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿರುವ
ಕಾರ್ಯಕ್ರಮವನ್ನು ದೇಶ ಮಟ್ಟದಲ್ಲಿ ನಡೆಸುತ್ತಿದ್ದು,
ಈ ನಿಟ್ಟಿನಲ್ಲಿ ಜೆಸಿಐ
ಸುರತ್ಕಲ್ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ
ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಅತಿಥಿಗಳಾಗಿ
ವಿರಾಟ್ ನ ನಿರ್ದೇಶಕಾರದ ಡಾ.
ರಾಜ್ ಮೋಹನ್ ರಾವ್, ಮತ್ತು
ಬಾಲಕೃಷ್ಣ ಯಚ್ ಸಂಧರ್ಬೋಚಿತವಾಗಿ ಮಾತಾಡಿ
ಶುಭಹಾರೈಸಿದರು. ಜೆಸಿಐ ನ ಅಧ್ಯಕ್ಷ
ಲೋಕೇಶ ರೈ ಕೆ ಪ್ರಸ್ತಾವಿಸಿದರು.
ಕಾರ್ಯಕ್ರಮದಲ್ಲಿ ಜೆಸಿರೇಟ್ ಸಂಯೋಜಕಿ ಭಾರತಿ ನಿರಂಜನ್,
ಕಾರ್ಯಕ್ರಮದ ನಿರ್ದೇಶಕಿ ಜ್ಯೋತಿ ಪಿ ಶೆಟ್ಟಿ,
ನಿಕಟಪೂರ್ವಧ್ಯಕ್ಷ ಪ್ರವೀಣ್ ಶೆಟ್ಟಿ, ಜೆಸಿಐ
ಮತ್ತು ವಿವಿಧ ಸಂಘ ಸಂಸ್ಥೆಗಳ
ಪಧಾದಿಕಾರಿಗಳು ಮತ್ತು ಸದಸ್ಯರು ಹಾಗೂ
ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ಆರ್ಯಭಟ
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೃಷ್ಣಪ್ಪ ಗೌಡ ಪಡ್ಡಂಬೈಲು ಇವರು ತಾರಸಿಯಲ್ಲಿ ತರಕಾರಿ
ಬೆಳೆಗಳ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ
ನಡೆಸಿಕೊಟ್ಟರು. ಜೆಸಿರೇಟ್ ಅಧ್ಯಕ್ಷೆ ಅನಿತಾ ಎಸ್ ಶೆಟ್ಟಿ
ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿ ಪ್ರತಿಮಾ
ಎಸ್ ಶೆಟ್ಟಿ ವಂದಿಸಿದರು.