BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು 13 ಮಂದಿ ಫಲಾನುಭವಿಗಳಿಗೆ (ಮದುವೆಗೆ-4, ವೈದ್ಯಕೀಯ ಚಿಕಿತ್ಸೆಗೆ-4, ವಸತಿ ಯೊಜನೆಗೆ-5) ಸಹಾಯಧನ ಮಂಜೂರು ಮಾಡಿದ ಚೆಕ್‍ಗಳನ್ನು ಎ.9ರಂದು ಒಕ್ಕೂಟದ ಆಡಳಿತ ಕಚೇರಿ ಮಂಗಳೂರು ಇಲ್ಲಿ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ಅವರು ಫಲಾನುಭವಿಗಳಿಗೆ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಬಟ್ಟೆಮಲ್ಲಪ್ಪ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಮತ್ತು ಇತರರು, ಒಕ್ಕೂಟದ ಆಡಳಿತ ಮಂಡಳಿ ಸದಸ್ಯರುಗಳಾದ ಜಯರಾಮ ಸಾಂತ, ಚಂದ್ರಶೇಖರ್ ಹೆಗ್ಡೆ ಶಾನಾಡಿ ಹಾಗೂ ಆಡಳಿತಾಧಿಕಾರಿ, ಸಿಬ್ಬಂದಿವರ್ಗದವರು, ಫಲಾನುಭವಿಗಳ ಪೋಷಕರು ಮತ್ತು ಸಂಬಂಧಿಕರು ಉಪಸ್ಥಿತರಿದ್ದರು.