BUNTS NEWS, ಮಂಗಳೂರು: ಯಕ್ಷಗಾನದ ಬೆಳವಣಿಗೆಗೆ ಹಿರಿಯ ಕಲಾವಿದರ ಕೊಡುಗೆ
ಅನನ್ಯವಾಗಿದ್ದು ಅವರಲ್ಲಿ ಅಳಿಕೆ ರಾಮಯ್ಯ
ರೈ ಪ್ರಧಾನರಾಗಿದ್ದು ಅವರು ಯಕ್ಷರಂಗದಲ್ಲಿ ಎಂದೆಂದಿಗೂ ಅಜರಾಮರರು ಎಂದು ಮಹತೋಭಾರ ಶ್ರೀ
ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಹೇಳಿದ್ದಾರೆ.
ಅವರು ಅಳಿಕೆ ರಾಮಯ್ಯ ರೈ
ಸ್ಮಾರಕ ಟ್ರಸ್ಟ್ ಬೆಂಗಳೂರು ಹಾಗೂ
ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ
ವೇದಿಕೆ ಆಶ್ರಯದಲ್ಲಿ ಎ.13ರಂದು ಮಂಗಳಾದೇವಿ
ದೇವಸ್ಥಾನದ ಕಲಾಮಂಟಪದಲ್ಲಿ ನಡೆಯುವ 'ದಿ.ಅಳಿಕೆ
ರಾಮಯ್ಯ ರೈ ಸಂಸ್ಮರಣೆ ಮತ್ತು
ಪ್ರಶಸ್ತಿ ಪ್ರದಾನ' ಸಮಾರಂಭದ ಕರೆಯೋಲೆ
ಬಿಡುಗಡೆಗೊಳಿಸಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ
ಬೋಳಾರ ಶ್ರೀ ಮಾರಿಯಮ್ಮ ಮಹಿಷಮರ್ದಿನಿ
ದೇವಸ್ಥಾನದ ಆಡಳಿತ ಮೊಕ್ತೇಸರ ಲ.ತಾರಾನಾಥ ಶೆಟ್ಟಿ ಬೋಳಾರ
ಮತ್ತು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ
ಕುಕ್ಕುವಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುರೇಶ್
ದೇವಾಡಿಗ ಸ್ವಾಗತಿಸಿದರು. ರಂಜಿತ್ ವಂದಿಸಿದರು. ವಿಜೇಶ್
ದೇವಾಡಿಗ ಮಂಗಳಾದೇವಿ ನಿರೂಪಿಸಿದರು.