ಎ.19ರಂದು ‘ಗೋಲ್‍ಮಾಲ್’ ತುಳುಸಿನಿಮಾ: ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎ.19ರಂದು ‘ಗೋಲ್‍ಮಾಲ್’ ತುಳುಸಿನಿಮಾ: ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

Share This
ಮಂಗಳೂರು: ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರ್ ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದಲ್ಲಿ ತಯಾರಾದ ತುಳುವಿನ ಅದ್ದೂರಿ ಬಜೆಟ್‍ನ 'ಗೋಲ್‍ಮಾಲ್’ ಸಿನಿಮಾ ಎ.19ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
‘ಗೋಲ್‍ಮಾಲ್’ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಮಂಗಳೂರು, ಕಾರ್ಕಳ, ಉಡುಪಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ತುಳುವಿನಲ್ಲಿ ನಿರ್ಮಾಣ ಗೊಂಡ ಭಾರೀ ಬಜೆಟ್‍ನ ಸಿನಿಮಾ ಇದಾಗಿದ್ದು, ಕನ್ನಡದ ಖ್ಯಾತ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್  ಬಂದಲೆ, ಸುನೀಲ್ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ ಮೊದಲಾದವರ ತಾರಾ ಬಳಗವೇ ಇಲ್ಲಿದೆ. ‘ಪಿಲಿಬೈಲ್ ಯಮುನಕ್ಕ’ ಖ್ಯಾತಿಯ ಪೃಥ್ವಿ ಅಂಬಾರ್ ಸಿನಿಮಾದಲ್ಲಿ ನಾಯನಟ ರಾಗಿದ್ದಾರೆ. ಶ್ರೇಯಾ ಆಂಚನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾಕ್ಕೆ ಸುನಾದ್ ಗೌತಮ್ ಸಂಗೀತದೊಂದಿಗೆ ಛಾಯಾಗ್ರಹಣ ದಲ್ಲಿ ದುಡಿದಿದ್ದಾರೆ. ಶಂಕರ್ ನಾರಾಯಣ್ ಪೆರ್ಡೂರು ಸಂಕಲನ ಮಾಡಿದ್ದಾರೆ. ಶಿವು ಸಾಹಸ ದೃಶ್ಯ ಸಂಯೋಜಿಸಿದ್ದಾರೆ. ಕಲಾ ನಿರ್ದೇಶಕರಾಗಿ ದಿನೇಶ್ ಜೋಗಿ ದುಡಿದಿದ್ದಾರೆ.

ಕೊಲೆ ಪ್ರಕರಣದ ಕಥೆಯ ಸುತ್ತ ನಿರ್ಮಾಣವಾಗಿದೆ ಎಂಬ ನಂಬಲು ಕಾರಣವಾಗಿರುವಂಥ ಇದರ ಹಿಂದಿನ ಒಂದು ಟೀಸರ್ ಕೂಡ ಭಾರೀ ವೈರಲ್ ಆಗಿ ಸುದ್ದಿ ಮಾಡಿತ್ತು.  ಈಗ ಒಂದು ಹೊಸ ಪ್ರೇಮದೃಶ್ಯವಿರುವ ಈ ವಿಡಿಯೋ ತುಣುಕು  ಚಿತ್ರದ ಮೇಲೆ ಅಪಾರ ನಿರೀಕ್ಷೆ ಮೂಡುವಂತೆ ಮಾಡಿದೆ. ಗೋಲ್‍ಮಾಲ್ ಚಿತ್ರದ ಟೀಸರನ್ನು ಈಗಾಗಲೇ 2 ಲಕ್ಷ  ಜನ ವೀಕ್ಷಿಸಿದ್ದಾರೆ. ಇದೊಂದು ತುಳು ಚಿತ್ರರಂಗದ ಮಟ್ಟಿಗೆ  ದಾಖಲೆಯಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ  ಸಾಯಿ ಕುಮಾರ್ ಅವರು ನಟಿಸಿದ್ದಾರೆ.

Pages