ಮಾನವೀಯ ಸೇವೆಗೆ ರೆಡ್‍’ಕ್ರಾಸ್ ಬದ್ಧ: ಸಿ.ಎ ಶಾಂತರಾಮ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಾನವೀಯ ಸೇವೆಗೆ ರೆಡ್‍’ಕ್ರಾಸ್ ಬದ್ಧ: ಸಿ.ಎ ಶಾಂತರಾಮ ಶೆಟ್ಟಿ

Share This
ಸುರತ್ಕಲ್: ಭಾರತೀಯ ರೆಡ್‍ಕ್ರಾಸ್ ಕೇವಲ ರಕ್ತದಾನಕ್ಕೆ ಮಾತ್ರ ಸೀಮಿತವಾದ ಸಂಸ್ಥೆಯಲ್ಲ. ಇತರ ಅನೇಕ ಮಾನವೀಯ ಸೇವೆಗಳನ್ನು ರೆಡ್‍ಕ್ರಾಸ್ ಸಂಸ್ಥೆ ನಡೆಸುತ್ತಿದೆ ಎಂದು ಮಂಗಳೂರಿನ ರೆಡ್‍ಕ್ರಾಸ್ ಸಂಸ್ಥೆ ಅಧ್ಯಕ್ಷ ಸಿ.ಎ.ಶಾಂತರಾಮಶೆಟ್ಟಿ ಹೇಳಿದರು.
ಅವರು ಸುರತ್ಕಲ್ ಬಂಟರ ಸಂಘ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಮಂಗಳೂರು, ಜಿಸಿಐ ಸುರತ್ಕಲ್ ಸಹಭಾಗಿತ್ವದಲ್ಲಿ ಸುರತ್ಕಲ್ ಬಂಟರಭವನದಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಶಿಬಿರವನ್ನು ಉದ್ಘಾಟಿಸಿದ ಸುರತ್ಕಲ್ ಪದ್ಮಾವತಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಸತೀಶ್ ಶೆಟ್ಟಿ ಮಾತನಾಡಿ, ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ. ರಕ್ತದಾನದಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ರಕ್ತದಾನ ಮೊದಲಾದ ಸೇವಾ ಚಟುವಟಿಕೆಗಳಿಗೆ  ಸುರತ್ಕಲ್ ಬಂಟರ ಸಂಘ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್.ಪೂಂಜಾ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಜೆಎಸ್‍ಐ ಅಧ್ಯಕ್ಷ ಲೋಕೇಶ್ ರೈ ಶುಭ ಹಾರೈಸಿದರು. ದಿವಾಕರ ಸಾಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಪೆಡ್ರೆ ಉಪಸ್ಥಿತರಿದ್ದರು. ಸುಧಾಕರ್ ಪೂಂಜ ಸ್ವಾಗತಿಸಿದರು. ರಾಜೇಶ್ವರಿ ಡಿ ಶೆಟ್ಟಿ, ಸತೀಶ್ ಶೆಟ್ಟಿ ಬಾಳಿಕೆ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು.

Pages