ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಜಾಗದ ತಕರಾರು ಇತ್ಯರ್ಥ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಜಾಗದ ತಕರಾರು ಇತ್ಯರ್ಥ

Share This
BUNTS NEWS, ಉಳ್ಳಾಲ: ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಶ್ರೀಮತಿ ನಾಗಮ್ಮ ಬಡ್ಡು ಶೆಟ್ಟಿ ಮತ್ತು ಅವರ 6 ಮಕ್ಕಳ ಜಾಗದ ತಕರಾರು ಇತ್ಯರ್ಥ ಪಡಿಸುವ ಬಗ್ಗೆ ಮಾಡಿದ ಮನವಿಗೆ ಸ್ಪಂದಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವರು ಮಾ.3ರಂದು ಅವರ ಮನೆಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಸರಿಯಾಗಿ ಆಲಿಸಿ ಕಾನೂನಾತ್ಮಕವಾದ ನಿಲುವಿನೊಂದಿಗೆ ತಾಯಿ, 3 ಗಂಡು ಮಕ್ಕಳು ಹಾಗೂ 3 ಹೆಣ್ಣು ಮಕ್ಕಳಿಗೆ ಸಮಂಜಸವಾದ ಪರಿಹಾರದೊಂದಿಗೆ ನೆರೆದ ಗಣ್ಯರ ಉಪಸ್ಥಿತಿಯಲ್ಲಿ ನ್ಯಾಯವನ್ನು ಒದಗಿಸಿದರು.
ಸಂದರ್ಭ ಸೋಮೇಶ್ವರ ಬಂಟರ ಸಂಘದ ಒಕ್ಕೂಟದ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ, ಸೋಮೇಶ್ವರ ಬಂಟರ ಸಂಘದ ಪ್ರಧಾನ ಸಂಚಾಲಕ ಗಂಗಾಧರ ಶೆಟ್ಟಿ, ಮಾಜಿ . ಜಿಲ್ಲಾ ಪಂಚಾಯತ್  ಸದಸ್ಯೆ ಪದ್ಮಾವತಿ ಶೆಟ್ಟಿ, ಸೋಮೇಶ್ವರ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಯಶು ಪಕ್ಕಳ ತಲಪಾಡಿ, ಆನಂದ ಶೆಟ್ಟಿ ಉಳ್ಳಾಲ ಹಾಗೂ ಗೋಪಾಲ ಶೆಟ್ಟಿ ಉಳ್ಳಾಲ ಇವರೆಲ್ಲರೂ ಆಳ್ವರ ಜೊತೆಯಲ್ಲಿದ್ದು ತಮ್ಮದಾದಂತಹ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳನ್ನು ನೀಡಿ ನ್ಯಾಯ ತೀರ್ಮಾನವಾಗಲು ಸಹಕರಿಸಿದರು. ಸದ್ರಿ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತ ಬಂಧುಗಳೆಲ್ಲರೂ ಈ ಅವಧಿಯಲ್ಲಿ ಉಪಸ್ಥಿತರಿದ್ದರು.

Pages