ಜೆಸಿಐ ಸುರತ್ಕಲ್’ನಿಂದ ವಿಶ್ವ ಮಹಿಳಾ ದಿನಾಚರಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜೆಸಿಐ ಸುರತ್ಕಲ್’ನಿಂದ ವಿಶ್ವ ಮಹಿಳಾ ದಿನಾಚರಣೆ

Share This
ಸುರತ್ಕಲ್: ಜೆಸಿಐ ಸುರತ್ಕಲ್  ಜೆಸಿರೇಟ್ ವಿಭಾಗ, ಶಾರದಾ ಮಾತೃ ಮಂಡಳಿ ಸುರತ್ಕಲ್, ಯುವವಾಹಿನಿ ಸುರತ್ಕಲ್ ಇವರ ಜಂಟಿ ಆಶ್ರಯದಲ್ಲಿ ಇಲ್ಲಿನ ಶಾರದಾ ಮಂದಿರದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅಚರಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ಆರು ಜನ ವಿವಿಧ ಕ್ಷೇತ್ರದಲ್ಲಿನ ಸಾಧಕಿಯಾರಾದ  ಶ್ರೀಮತಿ ಮೀನಾಕ್ಷಿ ದೇವದಾಸ್ ಇವರ  ವ್ಯವಹಾರ ಮತ್ತು ಸಮಾಜ ಸೇವೆಗಳನ್ನು ಗುರುತಿಸಿ ಜೇಸಿ ಸೇವಾ ರತ್ನಶ್ರೀಮತಿ ಶಕುಂತಲಾ ಪ್ರಸಾದ್ ಇವರ ಸಮಾಜ ಸೇವೆಯನ್ನು ಗುರುತಿಸಿ ಜೇಸಿ  ಸಮಾಜ ರತ್ನಶ್ರೀಮತಿ ಜಯಂತಿ ದೇವಾಡಿಗ ಇವರ ಶೈಕ್ಷಣಿಕ ಮತ್ತು ಸಮಾಜ ಸೇವೆಗಾಗಿ ಜೇಸಿ  ವಿದ್ಯಾ ರತ್ನ, ಶ್ರೀಮತಿ ಶ್ವೇತಾ ಸಂತೋಷ್ ಇವರ ಕಲಾ ಮತ್ತು ವ್ಯವಹಾರದಲ್ಲಿ ಸಾಧನೆಗೆ   ಜೇಸಿ ಸಾಧನ ರತ್ನ, ಶ್ರೀಮತಿ ವಿದ್ಯಾ ಶೆಟ್ಟಿ ಇವರ ಪ್ರಗತಿಪರ ಮತ್ತು ಸಾವಯುವ ಕೃಷಿಯಲ್ಲಿನ  ಸಾಧನೆಗೆ ಜೇಸಿ ಕಿಸಾನ್ ರತ್ನ, ಶ್ರೀಮತಿ ಬಬಿತಾ ಶೆಟ್ಟಿ ಇವರ ಕ್ರೀಡಾ ಕ್ಷೇತ್ರದ ಸಾಧನೆ ಪರಿಗಣಿಸಿ  ಜೇಸಿ ಕ್ರೀಡಾ ರತ್ನ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು  ಶಾರದಾ ಮಾತೃ ಮಂಡಳಿ ಮತ್ತು ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ಗುಣವತಿ ರಮೇಶ್ ದೀಪ ಬೆಳಗಿಸಿ     ಉದ್ಘಾಟಿಸಿ, ಕಾರ್ಯಕ್ರಮದ ಅಯೋಜನೆಯ ಮೂರೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ನನ್ನನ್ನು ಉದ್ಘಾಟಕರನ್ನಾಗಿ ಮಾಡಿದಕ್ಕೆ ಕೃತಜ್ಞತೆ ಸಲ್ಲಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೆಸಿಐ ವಲಯ 15 ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಸೌಮ್ಯ ರಾಕೇಶ್ ಸನ್ಮಾನಿತ ಮಹಿಳಾ ಸಾಧಕರಿಗೆ ಅಭಿನಂದನೆ ಸಲ್ಲಿಸಿ, ಮಹಿಳೆಯರು ತಮಗೆ ಸಮಾಜದಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ  ಸಾಮಾಜಿಕವಾಗಿ ಸದೃಢವಾಗಲು ಸಾಧ್ಯವೆಂದರು.

ಅತಿಥಿಗಳಾಗಿದ್ದ ಶಾರದಾ ಮಾತೃ ಮಂಡಳಿಯ ಜೊತೆ ಕಾರ್ಯದರ್ಶಿ ಶಕುಂತಲಾ ಭಟ್ ಇಡ್ಯಾ , ಜೆಸಿಐ ಸುರತ್ಕಲ್ ಅಧ್ಯಕ್ಷ ಲೋಕೇಶ ರೈ ಕೆ, ನಿಕಟಪೂರ್ವಾಧ್ಯಕ್ಷ ಪ್ರವೀಣ್ ಶೆಟ್ಟಿ ಸಂಧರ್ಬೋಚಿತವಾಗಿ ಮಾತಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ನಂತರ ಜೆಸಿಐ ರಾಷ್ಟ್ರೀಯ ಕಾರ್ಯಕ್ರಮಪ್ರಯಾಸ್’ ಬಗ್ಗೆ ರಾಜೇಶ್ವರಿ ಶೆಟ್ಟಿ ಮತ್ತು ಮಹಿಳಾ ಸಬಲೀಕರಣ ವಿಷಯದ ಬಗ್ಗೆ ಗುಣವತಿ ರಮೇಶ್ ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ  ತಾಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ ಪಿ ಶೆಟ್ಟಿ, ಶಾರದಾ ಸೇವಾ ಟ್ರಸ್ಟ್ (ರಿ) ಸ್ಥಾಪಕಾಧ್ಯಕ್ಷ ಪಡುಪಣಂಬೂರು ರಾಮ್ ರಾವ್ , ಮನಪಾ ಮಾಜಿ ಮೇಯರ್ ರಜನಿ ದುಗ್ಗಣ, ಜೆಸಿಐ, ಜೆಸಿರೇಟ್, ಶಾರದಾ ಮಾತೃ ಮಂಡಳಿ, ಯುವವಾಹಿನಿಯ ಪದಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ರಾಜೇಶ್ವರಿ ಡಿ ಶೆಟ್ಟಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.  ಜೆಸಿರೇಟ್ ಅಧ್ಯಕ್ಷೆ ಅನಿತಾ ಎಸ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಶಾರದಾ ಮಾತೃ ಮಂಡಳಿಯ ಕಾರ್ಯದರ್ಶಿ ತಾರಾ ಧನರಾಜ್ ವಂದಿಸಿದರು.

Pages