ನ್ಯಾ. ಎಮ್ ದಾಮೋದರ ಶೆಟ್ರ 43ನೇ ಸೇವಾರೂಪದ ಯಕ್ಷಗಾನ ತಾಳಮದ್ದಲೆ, ಸನ್ಮಾನ ಸಮಾರಂಭ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನ್ಯಾ. ಎಮ್ ದಾಮೋದರ ಶೆಟ್ರ 43ನೇ ಸೇವಾರೂಪದ ಯಕ್ಷಗಾನ ತಾಳಮದ್ದಲೆ, ಸನ್ಮಾನ ಸಮಾರಂಭ

Share This
BUNTS NEWS, ಮಜಿಬೈಲ್: ಬಲ್ಲಂಗುಡೇಲು ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನ್ಯಾಯವಾದಿ ಎಮ್ ದಾಮೋದರ ಶೆಟ್ಟಿಯವರ 43ನೇ ವರ್ಷದ ಸೇವರೂಪದ ಯಕ್ಷಗಾನ ತಾಳಮದ್ದಲೆಯು ಮಾ. 4 ರಂದು ಕ್ಷೇತ್ರದ ವಠಾರದಲ್ಲಿ ಯಶಸ್ವಿಯಾಗಿ ಜರಗಿತು.
ಯಕ್ಷಗಾನ ತಾಳಮದ್ದಲೆಯ ಮುಂಚೆ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಶೇಖರ ಸೊಇಪಕಲ್ಲು, ಕೆ. ಜಯರಾಮ ಬಲ್ಲಂಗುಡೇಲು, ಬಶೀರ್ ಝಮ್ ಝಮ್ ಮುಡಂಬೈಲ್  ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಮ್ ಪ್ರಕಾಶ್ ಆಳ್ವ ಪಟ್ಟತಮೋಗರು, ಅಶ್ವಥ್ ಪೂಜಾರಿ ಲಾಲ್ ಬಾಗ್, ಚಂದ್ರಹಾಸ ಆಳ್ವ ಕೊಡ್ಡೆ, ಸುಕುಮಾರ ಶೆಟ್ಟಿ ಕಂಗುಮೆ, ಹರಿಜೀವನ್ ದಾಸ್ ನೀರಹಳ್ಳಿ, ರಮೇಶ್ ಸುವರ್ಣ ಮಜ್ಜೆಲ್, ಮುತ್ತು ಶೆಟ್ಟಿ ಬಾಳ್ಯೂರು, ರವೀಂದ್ರ ಶೆಟ್ಟಿ ಕರಿಬೈಲ್, ಕಾರ್ತಿಕ್ ಶೆಟ್ಟಿ ಮಜಿಬೈಲ್ವಿಜಯಕುಮಾರ್ ಶೆಟ್ಟಿ ಗಾಣದಮುಲೆ ಉಪಸ್ಥಿತರಿದ್ದರು. ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಕಾರ್ಯಕ್ರಮ ನಿರೂಪಿಸಿದರು.

ಭಾಗವತರಾಗಿ ಮುರಳಿಕೃಷ್ಣ ಶಾಸ್ತ್ರೀ, ಶುಭನಂದ ಶೆಟ್ಟಿ ಕೂಳೂರು, ಧೀರಾಜ್ ರೈ ಸಂಪಾಜೆ, ಚೆಂಡೆ ಮದ್ದಳೆಯಲ್ಲಿ ಚಿಪ್ಪಾರ್ ರಾಜರಾಮ ಬಲ್ಲಾಳ, ವಾಸುದೇವ ಮಯ್ಯ ವರ್ಕಾಡಿ, ಅರ್ಥದಾರಿಗಳಾಗಿ ವಿನಯ್ ಆಚಾರ್ಯ ಸುರತ್ಕಲ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಅಳ್ವ ತಲಪಾಡಿ, ರಮೇಶ್ ಶೆಟ್ಟಿ ಕುಂಜತ್ತೂರು, ದಾಮೋದರ ಶೆಟ್ಟಿ ಮಜಿಬೈಲ್ ಭಾಗವಹಿಸಿದ್ದರು. ದಾಮೋದರ ಶೆಟ್ಟಿ ಮಜಿಬೈಲ್  ಸ್ವಾಗತಿಸಿ ಧನ್ಯವಾದವಿತ್ತರು. ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮುಲೆ

Pages