ಸಂಸದ ಗೋಪಾಲ್ ಶೆಟ್ಟಿಯವರಿಗೆ ತುಳು ಕನ್ನಡಿಗರಿಂದ ಅಭಿನಂದನಾ ಸಮಾರಂಭ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಂಸದ ಗೋಪಾಲ್ ಶೆಟ್ಟಿಯವರಿಗೆ ತುಳು ಕನ್ನಡಿಗರಿಂದ ಅಭಿನಂದನಾ ಸಮಾರಂಭ

Share This
BUNTS NEWS, ಮುಂಬಯಿ: ರಾಜಕೀಯದಲ್ಲಿ ಸೋಲನ್ನರಿಯದ ಮುಂಬಯಿ ಕನ್ನಡಿಗ ಉತ್ತರ ಮುಂಬಯಿಯ ಸಂಸದ ‘ಶ್ರೇಷ್ಠ  ಸಂಸದ ಅವಾರ್ಡ್ 2019’ ನಿಂದ ಗೌರವಿಸಲ್ಪಟ್ಟ ಗೋಪಾಲ್‌ ಸಿ. ಶೆಟ್ಟಿ ಅವರಿಗೆ ಮಾರ್ಚ್ 2ರಂದು ಬೊರಿವಲಿ ಪಶ್ಚಿಮದ ಪುಷ್ಪಾಂಜಲಿ ಗಾರ್ಡನ್‌ನಲ್ಲಿ ಉದ್ಯಮಿ ಎರ್ಮಾಳ್‌ ಹರೀಶ್‌ ಶೆಟ್ಟಿ ನೇತೃತ್ವದಲ್ಲಿ ತುಳುಕನ್ನಡಿಗ ಅಭಿಮಾನಿ ಬಳಗದಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಚಂದ್ರಕಾಂತ್‌ ಪಾಟೀಲ್‌, ನಗರ ಸೇವಕಿ ಮನೀಷಾ ತಾಯಿ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನೆರವೇರಿತು. ಬೊರಿವಲಿ ಪಶ್ಚಿಮದ ಡೊನ್‌ಬೊಸ್ಕೊ ಬಳಿಯಿಂದ ಚೆಂಡೆ, ವಾದ್ಯ, ವಿವಿಧ ವೇಶ ಭೂಷಣ, ಹೂವಿನಿಂದ ಅಲಂಕರಿಸಿದ ಭವ್ಯ ರಥದಲ್ಲಿ ಗೋಪಾಲ ಶೆಟ್ಟಿಯವರನ್ನು ತುಳುಕನ್ನಡಿಗರ ಉಪಸ್ಥಿತಿಯಲ್ಲಿ ಬರಮಾಡಿಕೊಳ್ಳಲಾಯಿತು.
ಅತಿಥಿಗಳಾಗಿ ತುಳು ಕನ್ನಡಿಗ ಸಂಘಟನೆಗಳ ಪ್ರಮುಖರಾದ ಜಯ ಸಿ. ಸುವರ್ಣ, ಚಂದ್ರಶೇಖರ ಎಸ್‌. ಪೂಜಾರಿ, ಕೆ. ಎಲ್‌. ಬಂಗೇರ, ಕರ್ನಿರೆ ವಿಶ್ವನಾಥ ಶೆಟ್ಟಿ, ಡಾ| ಪಿ. ವಿ. ಶೆಟ್ಟಿ, ಚಂದ್ರಹಾಸ ಕೆ. ಶೆಟ್ಟಿ, ರವಿ ಎಸ್‌. ದೇವಾಡಿಗ, ದೇವದಾಸ್‌ ಎಲ್‌. ಕುಲಾಲ್‌, ಸದಾನಂದ ಆಚಾರ್ಯ, ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ನ್ಯಾ. ಆರ್‌. ಎಂ. ಭಂಡಾರಿ, ಜಿತೇಂದ್ರ ಎಲ್‌. ಗೌಡ, ಶ್ರೀನಿವಾಸ ಪಿ. ಸಫಲ್ಯ, ಸತೀಶ್‌ ಎಸ್‌. ಸಾಲ್ಯಾನ್‌, ರಾಜ್‌’ಕುಮಾರ್‌ ಕಾರ್ನಾಡ್‌, ಸಂಜಯ್‌ ಭಟ್‌, ಜಯಂತ್‌ ಎನ್‌. ಶೆಟ್ಟಿ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಪತ್ರಕರ್ತ ಚಂದ್ರಶೇಖರ್‌ ಪಾಲೆತ್ತಾಡಿ, ವಿರಾರ್ ಶಂಕರ್‌ ಬಿ. ಶೆಟ್ಟಿ,  ಶಿಮಂತೂರು ಉದಯ ಶೆಟ್ಟಿ,  ಹರೀಶ್‌ ಎನ್‌. ಶೆಟ್ಟಿ, ಪ್ರೇಮನಾಥ ಪಿ. ಕೋಟ್ಯಾನ್‌, ಶೀಲಾ ಶೆಟ್ಟಿ, ರಜಿತ್‌ ಎಂ. ಸುವರ್ಣ, ಮಂಜುನಾಥ್‌ ಬನ್ನೂರು, ಪ್ರವೀಣ್‌ ಎ. ಶೆಟ್ಟಿ ಶಿಮಂತೂರು, ಪ್ರಕಾಶ್‌ ಎ. ಶೆಟ್ಟಿ, ರವೀಂದ್ರ ಎಸ್‌. ಶೆಟ್ಟಿ, ಭಾಸ್ಕರ ಎಂ. ಸಾಲ್ಯಾನ್‌, ಗಂಗಾಧರ ಜೆ. ಪೂಜಾರಿ, ಕೆ. ರಘುರಾಮ ಶೆಟ್ಟಿ, ವಿಜಯಕುಮಾರ್‌ ಶೆಟ್ಟಿ ತೋನ್ಸೆ, ದಿವಾಕರ ಶೆಟ್ಟಿ ಅಡ್ಯಾರ್‌, ಕೃಷ್ಣ ವೈ. ಶೆಟ್ಟಿ, ಕರುಣಾಕರ ಶೆಟ್ಟಿ, ಸಂತೋಷ್‌ ಶೆಟ್ಟಿ ಆಹಾರ್‌, ರಮೇಶ್‌ ಬಂಗೇರ, ವೇಣುಗೋಪಾಲ್‌ ಶೆಟ್ಟಿ  ಹಾಗೂ ಸಾವಿರಾರು ತುಳು ಕನ್ನಡಿಗರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶೋಕ ಪಕ್ಕಳ, ಅಮೃತ ಶೆಟ್ಟಿ, ರಘುನಾಥ ಶೆಟ್ಟಿ, ಅಶೋಕ ಶೆಟ್ಟಿ, ಪ್ರವೀಣ್ ಶೆಟ್ಟಿ ನಿರ್ವಹಿಸಿದರು.

ಮನೋರಂಜನೆಯ ಅಂಗವಾಗಿ ವಿಕಲಚೇತನ  ಕಲಾವಿದರಿಂದ ದೇಶಭಕ್ತಿ ಗೀತೆಗಳು ಸಾದರಗೊಂಡವು ವರದಿ: ಈಶ್ವರ ಎಂ. ಐಲ್, ಚಿತ್ರ: ದಿನೇಶ್ ಕುಲಾಲ್

Pages