BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ
ಒಕ್ಕೂಟದ 2019-22ರ
ಸಾಲಿನ ಅಧ್ಯಕ್ಷರಾಗಿ ಐಕಳ
ಹರೀಶ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಶ್ವ ಮಟ್ಟದ ಬಂಟರ ಸಂಘಗಳ
ಸದಸ್ಯತ್ವ ಹೊಂದಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮುಂಬಾಯಿಯ ಕುರ್ಲಾ ಪೂರ್ವದ ಬಂಟರ
ಸಂಘದ ಎನೆಕ್ಸ್ ಸಂಕೀರ್ಣದ ಸಭಾಂಗಣದಲ್ಲಿ
ಒಕ್ಕೂಟದ ಆಡಳಿತ ಪದಾಧಿಕಾರಿಗಳು ಮತ್ತು
ವಿಶ್ವ ಬಂಟ ಬಂಧುಗಳ ಸಮ್ಮುಖದಲ್ಲಿ
ನಡೆಯಿತು.
ಒಕ್ಕೂಟದ ಉಪಾಧ್ಯಕ್ಷರಾಗಿ
ಮುಂಬಯಿ ಬಂಟರ ಸಂಘದ ಮಾಜಿ
ಅಧ್ಯಕ್ಷ ಕರ್ನಿರೆ ಫೌಂಡೇಶನ್ನ
ಅಧ್ಯಕ್ಷ ಕರ್ನಿರೆ
ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ
ಕಾರ್ಯದರ್ಶಿಯಾಗಿ ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ
ಜಯಕರ್ ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ
ಮುಂಬಯಿ ಬಂಟರ ಸಂಘದ ಶಿಕ್ಷಣ
ಮತ್ತು ಸಮಾಜ ಕಲ್ಯಾಣ ಸಮಿತಿಯ
ಕಾರ್ಯಾಧ್ಯಕ್ಷ ಉಳ್ತೂರು ಮೋಹನದಾಸ್
ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿಯಾಗಿ
ದಕ್ಷಿಣ ಕನ್ನಡ ಬಂಟರ ಯಾನೆ
ನಾಡವರ ಮಾತೃ ಸಂಘದ ಕಾಸರಗೋಡಿನ
ಕಾರ್ಯಕಾರಿ ಸಮಿತಿಯ ಸದಸ್ಯ ಸತೀಶ್ ಅಡಪ
ಸಂಕಬೈಲ್ ಅವರನ್ನು ಆಯ್ಕೆಯಾಗಿದ್ದಾರೆ.
ನ್ಯಾಯವಾದಿ
ಕೆ. ಪೃಥ್ವಿರಾಜ್ ರೈ ಚುನಾವಣಾಧಿಕಾರಿಯಾಗಿ ನೂತನ
ಪದಾಧಿಕಾರಿಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಒಕ್ಕೂಟದ ಲೆಕ್ಕ ಪರಿಶೋಧಕ
ಸಿಎ ದಯಾಶರಣ್ ಶೆಟ್ಟಿ, ಮುಂಬಯಿ,
ಮಂಗಳೂರು, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಿಂದ
ವಿವಿಧ ಬಂಟರ
ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.