BUNTS NEWS, ಬೆಂಗಳೂರು: ಬೆಂಗಳೂರು ಬಂಟರ ಸಂಘದ ಸಮಾಜ
ಸೇವಾ ವಿಭಾಗ ಮತ್ತು ಸೇವಾದಳ
ಸಮಿತಿಯ ಆಯೋಜಿಸಿದ್ದ ‘ಸೇವಾ ಚೇತನ’ ಸಾಮಾಜಿಕ ಕಳಕಳಿಯುಳ್ಳ
ವಿಶಿಷ್ಟ ಕಾರ್ಯಕ್ರಮದಲ್ಲಿ ಸಮಾಜ ಸೇವಕ, ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತ ವಿಶು ಶೆಟ್ಟಿ ಅಂಬಲಪಾಡಿ,
ಜಯಪ್ರಸಾದ್ ಶೆಟ್ಟಿ ಇರ್ಮಾಡಿ ಹಾಗೂ ಕರ್ನಾಟಕ ಸರ್ಕಾರದ ಪರಿಹಾರ ಸಂಸ್ಥೆಯ
ಉಸ್ತುವಾರಿ ಅಧಿಕಾರಿ ಶ್ರೀಮತಿ ರಾಣಿ
ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ
ಆರ್ಥಿಕವಾಗಿ ಹಿಂದುಳಿದ
ಅರ್ಹ ರೋಗಿಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ
ದರದಲ್ಲಿ ಚಿಕಿತ್ಸೆ ದೊರಕಿಸುವ ಸಲುವಾಗಿ ನಗರದ ಮಣಿಪಾಲ
ಆಸ್ಪತ್ರೆ, ರಾಮಯ್ಯ ಆಸ್ಪತ್ರೆ, ನಾರಾಯಣ
ನೇತ್ರಾಲಯ, ಎಸ್.ಎಸ್.ಎನ್.ಎಂ.ಸಿ ಸೂಪರ್
ಸ್ಪೆಷಿಯಾಲಿಟಿ ಆಸ್ಪತ್ರೆ, ಈಶಾ ಡಯಾಗ್ನೊಸ್ಟಿಕ್ಸ್, ಬೆಂಗಳೂರು
ಕ್ಯಾನ್ಸರ್ ಸೆಂಟರ್, ಕರ್ನಾಟಕ ಕ್ಯಾನ್ಸರ್
ಆಸ್ಪತ್ರೆ ಮೊದಲಾದ ಒಟ್ಟು 20ಕ್ಕೂ
ಹೆಚ್ಚು ಆಸ್ಪತ್ರೆಗಳೊಂದಿಗೆ ಬಂಟರ ಸಂಘವು ಮಾಡಿಕೊಂಡ
ಒಪ್ಪಂದವನ್ನುಈ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಯಿತು.
ರಾಷ್ಟ್ರೋತ್ತಾನ
ರಕ್ತ ನಿಧಿ ಸಂಸ್ಥೆಯ ಸಹಯೋಗದೊಂದಿಗೆ
ರಕ್ತದಾನ ಶಿಬಿರ, ಸುಜೋಕ್ ಮತ್ತು
ಅಕ್ಯುಪ್ರೆಷರ್ ಚಿಕಿತ್ಸೆ, ತಾರಸಿ ಕೈತೋಟ ತರಬೇತಿ,
ಮಾಹಿತಿ ಕಾರ್ಯಾಗಾರ, ಹಿರಿಯ ನಾಗರೀಕರ ಚೀಟಿ,
ಆಧಾರ್, ವಿಧವಾ ಕಾರ್ಡ್ಗಳ
ಸೇವಾ ಕೌಂಟರ್ ಮೊದಲಾದ ಕಾರ್ಯಕ್ರಮಗಳಲ್ಲಿ
ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ
ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ
ಶಿಬಿರದಲ್ಲಿ ಒಟ್ಟು 3000ಕ್ಕೂ ಹೆಚ್ಚಿನ ನಾಗರೀಕರು
ಭಾಗವಹಿಸಿ, ರಕ್ತದೊತ್ತಡ,
ಮಧುಮೇಹ ಆರೋಗ್ಯ ತಪಾಸಣೆ, ಕ್ಯಾನ್ಸರ್
ಸ್ಕ್ರೀನಿಂಗ್, ಮೂಳೆ ಸಾಂದ್ರತೆ, ಕಿವಿ,
ಗಂಟಲು ತಪಾಸಣೆ ಮೊದಲಾದ ಸೌಲಭ್ಯಗಳ
ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಜಯದೇವ
ಹೃದ್ರೋಗ ಸಂಸ್ಥೆಯ ಮೆಡಿಕಲ್ ಡೈರೆಕ್ಟರ್
ಡಾ.ಸಿ.ಎನ್. ಮಂಜುನಾಥ್,
ಕರ್ನಾಟಕ ರಾಜ್ಯ ಹಿಂದಿ ಮಜ್ದೂರ್
ಸಭಾ ಕಾರ್ಮಿಕ ಸಂಘಟನೆಯ ಅಧ್ಯಕ್ಷ
ಆರ್.ವಿ. ಹರೀಶ್, ಫರಂಗಿಪೇಟೆ
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್
ಪೂಂಜಾ, ಪುಣೆಯ ಖ್ಯಾತ ಸಮಾಜ
ಸೇವಕಿ ಶ್ರೀಮತಿ ಪುಷ್ಪಾ ಕುಶಲ
ಹೆಗ್ಡೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ
ಬೆಂಗಳೂರು ಬಂಟರ ಸಂಘದ ಅಧ್ಯಕ್ಷ
ಆರ್. ಉಪೇಂದ್ರ ಶೆಟ್ಟಿ, ಗೌರವ
ಕಾರ್ಯದರ್ಶಿ ಮಧುಕರ ಎಂ.ಶೆಟ್ಟಿ,
ಸಮಾಜ ಸೇವಾ ಸಮಿತಿ ಹಾಗೂ
ಸೇವಾದಳ ಸಮಿತಿಯ ಅಧ್ಯಕ್ಷ ಉಮೇಶ್
ಎಂ.ಬಿ. ಮತ್ತಿತರರು ಉಪಸ್ಥಿತರಿದ್ದರು.