ಯೋಗಶಿಕ್ಷಕ ನಾರಾಯಣ ಶೆಟ್ಟರದು ಮಾದರಿ ವ್ಯಕ್ತಿತ್ವ: ಭಾಸ್ಕರ ರೈ ಕುಕ್ಕುವಳ್ಳಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯೋಗಶಿಕ್ಷಕ ನಾರಾಯಣ ಶೆಟ್ಟರದು ಮಾದರಿ ವ್ಯಕ್ತಿತ್ವ: ಭಾಸ್ಕರ ರೈ ಕುಕ್ಕುವಳ್ಳಿ

Share This
BUNTS NEWS, ಮಂಗಳೂರು: ಯೋಗಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಯೋಗ ಶಿಕ್ಷಕ ದಿ. ನಾರಾಯಣ ಶೆಟ್ಟರದು ಮಾದರಿ ವ್ಯಕ್ತಿತ್ವವಾಗಿದ್ದು ಅನಾರೋಗ್ಯವನ್ನು ಮೆಟ್ಟಿ ನಿಂತು ನೂರಾರು ಯೋಗ ಪಟುಗಳನ್ನು ಸಮಾಜಕ್ಕೆ ಅರ್ಪಿಸಿದ ಅವರಿಂದು ಕೀರ್ತಿಕಾಯರಾಗಿ ಜನಮಾನಸದಲ್ಲಿ ಅಮರರಾಗಿದ್ದಾರೆ ಎಂದು 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಅವರು ದಿ.ಕೆ. ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ (ರಿ.) ಮಂಗಳೂರು ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ಜರಗಿದ 'ಕೆ.ಎನ್.ಶೆಟ್ಟಿ ಸ್ಮರಣಾಂಜಲಿ' ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಸಂಸ್ಮರಣಾ ಭಾಷಣ ಮಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ನ್ಯೂಸ್ ಬ್ಯೂರೋ ಚೀಫ್ ಮನೋಹರ ಪ್ರಸಾದ್  ಮಾತನಾಡಿ , ದಿ.ಕೆ.ಎನ್.ಶೆಟ್ಟಿ ಅವರು ಅಧ್ಯಾಪಕರಾಗಿ, ಯೋಗ ಗುರುವಾಗಿ, ಸಾಮಾಜಿಕ ಸಂಘಟಕರಾಗಿ ಅತ್ಯಮೂಲ್ಯ ಸೇವೆ ಸಲ್ಲಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಯೋಗ ಗುರು ಡಾ. ಜ್ಞಾನೇಶ್ವರ್ ನಾಯಕ್ ಅವರಿಗೆ 2018-19ನೇ ಸಾಲಿನ 'ಕೆ.ಎನ್.ಶೆಟ್ಟಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಸರೆ ಚ್ಯಾರಿಟೇಬಲ್ ಟ್ರಸ್ಟ್ ಡಾ. ಆಶಾಜ್ಯೋತಿ ರೈ ಮತ್ತು ಬಾಯಾರಿನ ಕೆ. ಮೋನಪ್ಪ ಶೆಟ್ಟಿಭಾಗವಹಿಸಿದ್ದರು. ಭಾರತಿ ಎನ್.ಶೆಟ್ಟಿ ಮತ್ತು ಅಭಿಷೇಕ್ ಉಪಸ್ಥಿತರಿದ್ದರು.

ಏಕನಾಥ ಬಾಳಿಗಾ ಸ್ವಾಗತಿಸಿದರು. ಸನಾತನ ನಾಟ್ಯಾಲಯದ ಕೆ.ಚಂದ್ರಶೇಖರ ಶೆಟ್ಟಿ ಪ್ರಸ್ತಾವನೆಗೈದರು. ಧನಂಜಯ್ ವಂದಿಸಿದರು. ಸುಕೇಶ್ ಚೌಟ ನಿರೂಪಿಸಿದರು. ಬಳಿಕ ಪತಂಜಲಿ ಯೋಗ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಹಾಗೂ ಅಯನಪೆರ್ಲ ಅವರಿಂದ ಶಾಸ್ತ್ರೀಯ ಭರತನಾಟ್ಯ ಜರಗಿತು.

Pages