ಮುಂಬೈ ಬಂಟರ ‘ಚಿಣ್ಣರ ಚಿಲಿಪಿಲಿ’ಯಲ್ಲಿ ತಮ್ಮಿಷ್ಟದಂತೆ ತೀರ್ಪು ಬದಲಿಸಿದ ಕಾಣದ ಕೈಗಳು: ಪೋಷಕರ ಆರೋಪ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುಂಬೈ ಬಂಟರ ‘ಚಿಣ್ಣರ ಚಿಲಿಪಿಲಿ’ಯಲ್ಲಿ ತಮ್ಮಿಷ್ಟದಂತೆ ತೀರ್ಪು ಬದಲಿಸಿದ ಕಾಣದ ಕೈಗಳು: ಪೋಷಕರ ಆರೋಪ

Share This

ಯಾವ ಪುರುಷಾರ್ಥಕ್ಕಾಗಿ ಬಂಟರ ಸಂಘದ ಸ್ಪರ್ಧೆಗಳು...? : ಡಾ.ದಿನೇಶ್ ಶೆಟ್ಟಿ , ರೆಂಜಾಳ

BUNTS NEWS, ಮುಂಬೈ: ಬಂಟರ ಸಂಘ ಮುಂಬೈ ಪ್ರತಿವರ್ಷ ಹಲವಾರು ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಬಹಳ ಸಂತೋಷದ ವಿಷಯ. ಪ್ರತಿ ಸ್ಪರ್ಧೆಗಳು ನಡೆದಾಗಲೂ ಮರುದಿವಸ ಪತ್ರಿಕಾಲಯಕ್ಕೆ ಪಾರ್ಶ್ಯಾಲಿಟಿ ಎಂಬ ದೂರನ್ನು ಹೊತ್ತ ಒಂದಷ್ಟು ಪತ್ರಗಳು, ಫೊನ್ ಕರೆಗಳು ಬರುತ್ತಿದ್ದವು.
ಇದರ ಹಿಂದಿನ ಮರ್ಮವನ್ನು ಅರಿಯಲು ಫೆ. 2 ರಂದು ನಡೆದ ಚಿಣ್ಣರ ಚಿಲಿಪಿಲಿ ಫ್ಯಾಷನ್ ಶೊ ಸ್ಫರ್ಧೆಯಲ್ಲಿ ಒಲ್ಲದ ಮನಸಿನಿಂದ ನನ್ನ ಸೊಸೆಯನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದೆ. ಇದಕ್ಕೆ ನನ್ನ ಸ್ನೇಹಿತರು ಮತ್ತು ಸಂಘದ ಹಿಂದಿನ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪಾರ್ಶ್ಯಾಲಿಟಿ ಎಂಬ ಗುಮ್ಮಕ್ಕೆ ತುತ್ತಾದ ಹಲವಾರು ಮಂದಿ ಕೈ ಜೋಡಿಸಿದರು.
ಎಲ್ಲರ ಸಹಕಾರದಿಂದ ಸ್ಪರ್ಧೆಯ ನಿಯಮದಂತೆ ಫೇಸ್’ಬುಕ್ ಮುಖಾಂತರ ಅತಿ ಹೆಚ್ಚು ಲೈಕ್ ಪಡೆಯುವಲ್ಲಿ ಮಗು ಯಶಸ್ವಿಯಾಗಿದ್ದಳು. ಆದರೆ ಕೊನೆಯ ಹಂತದಲ್ಲಿ ಸ್ಫರ್ಧೆಯ ಫೇಸ್’ಬುಕ್ ಲೈಕ್ನ್ನು ಕಾರಣಾಂತರದಿಂದ ಎಂಬ ನೆಪವೊಡ್ಡಿ ಆಯೋಜಕರು ಕೈಬಿಟ್ಟರು. ಅದರಲ್ಲೂ ಅವರಿಗೆ ಬೇಕಾದವರ ಮಕ್ಕಳಿರಲಿಲ್ಲವೋ ಏನೋ. ಇರಲಿ ಬಿಡಿ ಎಂದು ಅದಕ್ಕೂ ಸುಮ್ಮನಾಗಿ ಸ್ಪರ್ಧೆಯಲ್ಲಿ ಮುಂದುವರಿಯುವಂತೆ ನಾವು ಪ್ರೋತ್ಸಾಹಿಸಿದೆವು.

ಸ್ಪರ್ಧೆಯ ದಿನ ಅಂತಿಮ ಹಂತದ ತರಬೇತಿ ಶಿಬಿರದ ಸಂದರ್ಭದಲ್ಲಿ ಅವಳ ಹೆಸರನ್ನು ಕೈಬಿಡಲಾಗಿತ್ತು. ಸ್ಪರ್ಧಿಗಳ ಪಟ್ಟಿಯಲ್ಲಿ ಅವಳ ಹೆಸರೇ ಇಲ್ಲದಷ್ಟು negelegency? (ಅವಳಿಗೆ ಕೊಟ್ಟ ಮೊಮೆಂಟೋದಲ್ಲಿ ಹೆಸರೂ ಇಲ್ಲ. ಹಳೆಯದಾದ ಏನೂ ಬರೆಯದೇ ಇದ್ದ ಮೊಮೆಂಟೋ ಇಲ್ಲಿ ಹಾಕಿರುವೆ. ತಾವೇ ನೋಡಿ)
ತಪ್ಪು ಯಾರದ್ದೆಂದು ಯಾರಲ್ಲಿ ಕೇಳಬೇಕು?. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಹಕರಿಸಿದವರಲ್ಲಿ ವಿಚಾರಿಸಿದಾಗಲೂ ಅವರಿಂದ ಉತ್ತಮ ಪ್ರತಿಕ್ರಿಯೆ ದೊರೆತಾಗ ನನಗೆ ಮತ್ತಷ್ಟು ದು:ಖವಾದದ್ದು ಸಹಜ. ಅವರೆಲ್ಲರೂ ಮಗುವಿನಲ್ಲಿ ಅಂತಿಮ ಸುತ್ತಿಗೆ ಬರುವ ಎಲ್ಲ ಲಕ್ಷಣಗಳೂ ಇದ್ದವು. ಅವಳು ಆಯ್ಕೆಯಾಗದಿರುವುದು ನಮಗೂ ಆಶ್ಚರ್ಯ ತಂದಿದೆ ಎಂದಿದ್ದಾರೆ. ಸೇರಿದ್ದ ಸಭಿಕರಲ್ಲಿ ಕೆಲವರು ಇದೇ ಮಾತನ್ನು ಆಡಿದ್ದರು.

ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕೋ ಅಥವಾ ರೀತಿ ಎಳವೆಯಲ್ಲಿ ಚಿಗುರುವ ಮುನ್ನ ಅವರಲ್ಲಿನ ಆತ್ಮವಿಶ್ವಾಸವನ್ನು ಮುರುಟಿಹಾಕಬೇಕೋ...ತಾವೇ ತಿಳಿಸಿ.

ತೀರ್ಪನ್ನು ಪ್ರಭಾವಿ ಮೈಕಾಸುರರು ಬದಲಾಯಿಸುತ್ತಾರೆ ಎನ್ನುವುದು ಸಂಸ್ಥೆಯಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಸಂಗತಿ. ಹಕ್ಕನ್ನು ಅವರಿಗೆ ಕೊಟ್ಟವರಾರು..? ಸಂಘದ ಅಧ್ಯಕ್ಷರೇ..? ಆಯೋಜಕರೇ ಅಥವಾ ತನ್ನೊಳಗಿನ ಸರ್ವಾಧಿಕಾರವೇ..? ನಮ್ಮವರು ಪ್ರತಿ ಸ್ಪರ್ಧೆಯಾದಾಗಲೂ ನೋವಿನಿಂದ ಮರಳುತ್ತಾರೆಯೇ ಹೊರತೂ ಯಾರೂ ಬಾಯಿ ಬಿಡುವುದಿಲ್ಲ. ಯಾಕೆ? ಭಯವಿರಬಹುದೇ..?

ಬಂಟರಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿದ್ದಾರೆ. ಆದರೆ ಇಲ್ಲಿ ಅಂತಹ ಪ್ರತಿಭೆಗಳಿಗೆ ಅವಕಾಶ ಸಿಗುವುದು ವಿರಳವಾಗಿದೆ. ಸ್ಪರ್ಧೆಯ ಮೂಲಕವಾದರೂ ಪ್ರತಿಭೆ ಹೊರ ತರೋಣವೆಂದರೆ ಇಂತಹ ಆರೋಪಗಳು ಆಗಾಗ ಕೇಳಿ ಬರುತ್ತವೆ.

ಮಕ್ಕಳನ್ನು ಬೆಳೆಸುವ ಬದಲಿಗೆ ಮನಸ್ಸಿಗೆ ನೋವನ್ನುಂಟು ಮಾಡುವ ಇಂತಹ ಸ್ಪರ್ಧೆಗಳು ಬೇಕೇ?. ಮುಗ್ಧ ಮಕ್ಕಳ ಪ್ರತಿಭೆಯೊಂದಿಗೆ ಆಟ ಆಡುವ ಷಂಡರನ್ನು ದೇವರೆಂದು ಕ್ಷಮಿಸಲಾರ. ನನಗೆ ಸಂಘದ ಮೇಲೆ ಬಹಳಷ್ಟು ಗೌರವವಿದೆ. ವೈಯಕ್ತಿಕವಾಗಿ ಯಾರ ಮೇಲೆಯೂ ಬೇಸರವಿಲ್ಲ. ಆದರೆ ಮುಂದೆ ಹೀಗಾಗಬಾರದು ಎನ್ನುವ ಉದ್ದೇಶ ನನ್ನ ಲೇಖನಿಯದ್ದು.

ನನ್ನ ತ್ರಿಶಾಳ ಜೊತೆಯಲ್ಲಿ ನಾನಿದ್ದೇನೆ. ಅವಳಲ್ಲಿ ಧೈರ್ಯ ತುಂಬ ಬಲ್ಲೆ. ಆದರೆ ಅವಳಂತಹ ಅದೆಷ್ಟೋ ಪ್ರತಿಭೆಗಳು ಮತ್ತೆ ವೇದಿಕೆಗೆ ಬರುವ ಧೈರ್ಯ ತೋರಲಾರವು. ಜಾಗೃತಿ ಮೂಡಿಸುವುದಷ್ಟೇ ನನ್ನ ಉದ್ದೇಶ.  ಬರಹ: ಡಾ.ದಿನೇಶ್ ಶೆಟ್ಟಿ , ರೆಂಜಾಳ

Pages