ಜಾಗತಿಕ ಬಂಟರ ಸಂಘಗಳ ಒಕ್ಕೂಟದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ

Share This
BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಗರದ ಹೋಟೆಲ್ ಗೋಲ್ಡ್ ಪಿಂಚ್’ನಲ್ಲಿ ಒಕ್ಕೂಟದ ಆಡಳಿತ ಮಂಡಳಿಯ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಜರಗಿತು.
ಒಕ್ಕೂಟದ ಕಾರ್ಯದರ್ಶಿ ವಿಜಯಪ್ರಸಾದ ಆಳ್ವ ಅವರು 2018-19ನೇ ಸಾಲಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಒಕ್ಕೂಟಕ್ಕೆ ಎಫ್.ಸಿ.ಆರ್.ಎ ನೋಂದಣಿ ಶೀಘ್ರವೇ ದೊರಕಲಿದೆ ಎಂದರು. ಒಕ್ಕೂಟದ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಅವರು ವೆಚ್ಚದ ವಿವರವನ್ನು ನೀಡಿದರು. ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಈವರೆಗೆ ಕೈಗೊಂಡ ಸಮಾಜಸೇವೆಯ ವಿವರವನ್ನು ಹಾಗೂ ಆರ್ಥಿಕವಾಗಿ ನೀಡಿದ ಸಹಾಯಧನ ಮೊತ್ತಕ್ಕೆ ಮಂಜೂರು ಪಡೆಯಲಾಯಿತು.

ಈ ಸಂದರ್ಭ ಒಕ್ಕೂಟದ ನಿರ್ದೇಶಕ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ತಾವು ದಾನವಾಗಿ ನೀಡಿದ ಬಳ್ಕುಂಜೆ ಗ್ರಾಮದ ಕರ್ನಿರೆಯ 1 ಎಕ್ರೆ ಜಾಗದಲ್ಲಿ ವಸತಿಯೋಜನೆ ಕಾಮಗಾರಿಯ ಮಾತನಾಡಿ, ಅರ್ಹ ಮಹಿಳಾ ಫಲಾನುಭವಿಗಳಿಗೆ ಈ ಯೋಜನೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಂಗಳೂರಿನ ಲೈಟ್ ಹೌಸ್ ರಸ್ತೆಗೆ ಸಾವಿರಾರು ಕುಟುಂಬಗಳಿಗೆ ಅನ್ನದಾತರಾದ ದಿ. ಮೂಲ್ಕಿ ಸುಂದರಾಂ ಶೆಟ್ಟಿ ಯವರ ಹೆಸರನ್ನಿಡಲು ಮನಪಾ ನಿರ್ಣಯದ ಅನುಷ್ಠಾನದ ಬಗ್ಗೆ ತಮ್ಮ ಎಲ್ಲ ಬಂಟರ ಸಂಘಗಳು ಹಾಗೂ ಒಕ್ಕೂಟವು ಕಾರ್ಯಗತವಾಗಲು ಸಂಬಂಧಪಟ್ಟ ಹಿತೈಷಿಗಳ ಸಹಕಾರದಿಂದ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು. ಇದಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡುವ ನಿರ್ಣಯ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು, ಈಗಾಗಲೇ ಬಂದ 170 ಅಶಕ್ತ ಕುಟುಂಬಗಳ ಫಲಾನುಭವಿಗಳ ಅರ್ಜಿಗಳನ್ನು ಮಂಜೂರು ಮಾಡಿ ಧನ ಸಹಾಯ ನೀಡಲಾಗಿದ್ದು (ಮದುವೆಗೆ-26 ವೈದ್ಯಕೀಯ ವೆಚ್ಚಕ್ಕೆ-76, ವಿದ್ಯಭ್ಯಾಸಕ್ಕೆ-42, ಕ್ರೀಡಾ ಪ್ರೋತ್ಸಾಹಕ್ಕೆ-9, ಇತರ ಸಂಘ ಸಂಸ್ಥೆಗಳಿಗೆ-14, ದತ್ತು ಪಡೆದ ವಿದ್ಯಾರ್ಥಿಗಳು-3) ಹಾಗೂ ಆಶ್ರಯ ಯೋಜನೆಯ ನೂರು ಮನೆಗಳ ಯೋಜನೆಯಡಿ ಈಗಾಗಲೇ 35 ಮನೆಗಳಿಗೆ ಮಂಜೂರಾತಿ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ ಉಳಿದ ಮನೆಗಳಿಗೆ ಶೀಘ್ರವೇ ಮಂಜೂರಾತಿ ನೀಡಲಾಗುವುದು. ಒಕ್ಕೂಟದ ಸಮಾಜಸೇವಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಕ್ಕೆ ಧನಸಹಾಯ ನೀಡಲಾಗುವುದು ಎಂದರು.

ಸಭೆಯಲ್ಲಿ ಪೋಷಕ ಸದಸ್ಯರಾದ ಆರ್ ಉಪೇಂದ್ರ ಶೆಟ್ಟಿ, ಜೆ.ಪಿ ಶೆಟ್ಟಿ ಮುಂಬೈ, ಆಡಳಿತ ಮಂಡಳಿ ಸದಸ್ಯರಾದ ಕರ್ನಲ್ ಶರತ್ ಭಂಡಾರಿ, ಉಳ್ತೂರು ಮೋಹನ್‍ದಾಸ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ವಸಂತ ಶೆಟ್ಟಿ, ರವೀಂದ್ರನಾಥ ಶೆಟ್ಟಿ, ಅಮರನಾಥ ಶೆಟ್ಟಿ, ಸುದರ್ಶನ್ ಶೆಟ್ಟಿ ಹಾಗೂ ಇತರ ಆಡಳಿತ ಮಂಡಳಿ ಸದಸ್ಯರು, ಆಡಳಿತಾಧಿಕಾರಿ, ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು. ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿಯವರು ವಂದಿಸಿದರು.

Pages