ಮಾ.17ರಂದು ಮುಂಬೈನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಚುನಾವಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಾ.17ರಂದು ಮುಂಬೈನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಚುನಾವಣೆ

Share This
BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಗರದ ಹೋಟೆಲ್ ಗೋಲ್ಡ್ ಪಿಂಚ್’ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾ.17ರಂದು ಒಕ್ಕೂಟದ ಚುನಾವಣೆ ನಡೆಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಒಕ್ಕೂಟದ ಆಡಳಿತ ಮಂಡಳಿ ಸದಸ್ಯರು, ನಿರ್ದೇಶಕರು, ಮಹಾಪೋಷಕರು, ಪೋಷಕರು ಹಾಗೂ ಇತರ ಆಡಳಿತ ಮಂಡಳಿ ಸದಸ್ಯರಲ್ಲಿ ಹೆಚ್ಚಿನ ಸದಸ್ಯರು ಮುಂಬೈ ಹಾಗೂ ಆಸುಪಾಸಿನ ನಗರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಮುಂಬೈಯಲ್ಲಿ  ಚುನಾವಣೆ ನಡೆಸುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತವಾಯಿತು.

ಈ ಕುರಿತಂತೆ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಆಡಳಿತ ಮಂಡಳಿ ಸದಸ್ಯರಲ್ಲಿ ಸಮಾಲೋಚನೆ ಮಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಚುನಾವಣೆಯ ಮಾ.17,2019ರ ಭಾನುವಾರ ಸಂಜೆ 4 ರಿಂದ 6ರ ವರೆಗೆ ಬಂಟರ ಸಂಘದ, ಅನೆಕ್ಸ್ ಬಿಲ್ಡಿಂಗ್, ಬಂಟರಭವನ, ಕುರ್ಲಾ ಈಸ್ಟ್ ಮುಂಬೈ ಇಲ್ಲಿ ನಡೆಸಲಾಗುವುದೆಂದು ಘೋಷಿಸಿದರು.

ವಕೀಲ ಕೆ.ಪೃಥ್ವಿರಾಜ್ ರೈ ಅವರು ಈಗಾಗಲೇ ಚುನಾವಣಾ ಅಧಿಕಾರಿಯಾಗಿ ನೇಮಕವಾಗಿದ್ದು ಅವರಿಗೆ ಚುನಾವಣಾ ಪ್ರಕ್ರಿಯು ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳ ಕಡತವನ್ನು ಕಾರ್ಯದರ್ಶಿಯವರು ನೀಡಿ ಆಡಳಿತ ಕಚೇರಿಯಿಂದ ಅವರಿಗೆ ಸಂಪೂರ್ಣ ಸಹಕಾರವನ್ನು ನೀಡಲು ತಿಳಿಸಿದರು. ಅದೇ ದಿನ ಸಂಜೆ 6 ಗಂಟೆಯ ನಂತರ ಆಡಳಿತ ಮಂಡಳಿ ಸಭೆಯು ನಡೆಯಲಿದ್ದು ತದನಂತರ ಸಭಾಕಾರ್ಯಕ್ರಮವು ನಡೆಯುವುದೆಂದು ಪ್ರಕಟಿಸಿದರು.

Pages