ನಾಸಿಕ್ ಬಂಟರ ಸಂಘದ 13ನೇ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ
BUNTS NEWS, ನಾಸಿಕ್ : ವ್ಯಕ್ತಿಯು ಸತತ ಪರಿಶ್ರಮದಿಂದ ಎಷ್ಟೇ
ಸಂಪತ್ತು, ಸ್ಥಾನಮಾನ,ಕೀರ್ತಿ ಸಂಪಾದಿಸಿದರೂ ಅದರಿಂದ
ವೈಯಕ್ತಿಕ ಏಳ್ಗೆ ಸಾಧ್ಯವೇ ಹೊರತು
ಸಮಾಜಕ್ಕೆ ದೊಡ್ಡ ಲಾಭವಾಗದು. ಆದರೆ
ನಿಸ್ವಾರ್ಥ ಭಾವದಿಂದ ತನ್ನ ಸಮುದಾಯದ
ಅಭಿವೃದ್ಧಿಗೆ ಕಿಂಚಿತ್ತಾದರೂ ದುಡಿದಾಗ ಆತ ಜನರಿಂದ
ಗುರುತಿಸಲ್ಪಡುತ್ತಾನೆ. ಅಂತಹ ಸಾಧಕರಿಂದ ಸಮಾಜಕ್ಕೆ
ಗೌರವ ಪ್ರಾಪ್ತವಾಗುವುದು ಎಂದು ವೀರರಾಣಿ ಅಬ್ಬಕ್ಕ
ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೇಖಕ
ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ
ಹೇಳಿದ್ದಾರೆ.
ನಗರದ ಶಾಲಿಮಾರ್ ಸಾಲ್ಖೇಡ್ಕರ್ ನಾಟ್ಯ ಮಂದಿರದಲ್ಲಿ ಇತ್ತೀಚೆಗೆ
ಜರಗಿದ ನಾಸಿಕ್ ಬಂಟರ ಸಂಘದ
13ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಅತಿಥಿಯಾಗಿ ಅವರು
ಮಾತನಾಡಿದರು. ತವರೂರಿಂದ ಬರಿಗೈಯಲ್ಲಿ ಹೋದ ಮಂದಿ ಹೊರನಾಡಲ್ಲಿ
ಹೊಟ್ಟೆ ಪಾಡಿಗಾಗಿ ದುಡಿದು ತಮ್ಮ ಸಂಪಾದನೆಯ
ಒಂದು ಭಾಗವನ್ನು ತಾಯ್ನಾಡಿನ ಸಂಸ್ಕೃತಿಯ ಪ್ರಸರಣಕ್ಕಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯ. ತಾವು ಹೋದಲ್ಲೆಲ್ಲಾ ಸಂಘಟನೆಗಳ
ಮೂಲಕ ತಮ್ಮ ಮೂಲ ನೆಲೆಗಳನ್ನು
ಗಟ್ಟಿಗೊಳಿಸಿ ಒಗ್ಗಟ್ಟಿನಿಂದ ಬಾಳುವ ಬಂಟ ಬಂಧುಗಳು
ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸಮಾರಂಭವನ್ನು ಬಂಟರ
ಸಂಘದ ಅಧ್ಯಕ್ಷ ಇನ್ನ ಕುರ್ಕಿಲಬೆಟ್ಟು
ಸಂತೋಷ್ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ನಾಸಿಕ್ ಬಂಟರ ಸಂಘದ ಅಧ್ಯಕ್ಷ ಇ.
ಭಾಸ್ಕರ ಶೆಟ್ಟಿ ಸಭೆಯ ವಹಿಸಿದ್ದರು.
ಬಂಟರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ
ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶಿತ್
ಶೆಟ್ಟಿ ಪ್ರಸ್ತಾವನೆಗೈದು ವಂದಿಸಿದರು. ಪ್ರದೀಪ್ ರೈ ಮತ್ತು
ಸುಚಿತ್ರ ರೈ ನಿರೂಪಿಸಿದರು. ಪ್ರತಿ
ರೈ, ಪ್ರಭಾ ಆರ್. ಶೆಟ್ಟಿ,
ಅಮಿತ್ ಶೆಟ್ಟಿ ಸಹಕರಿಸಿದರು.