ಎಲ್ಲರೂ ಒಂದೇ ಮನಸ್ಸಿಂದ ಸಮಾಜದ ಏಳಿಗೆಗೆ ದುಡಿಯಬೇಕು : ಕೆ. ಸಂತೋಷ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎಲ್ಲರೂ ಒಂದೇ ಮನಸ್ಸಿಂದ ಸಮಾಜದ ಏಳಿಗೆಗೆ ದುಡಿಯಬೇಕು : ಕೆ. ಸಂತೋಷ್ ಶೆಟ್ಟಿ

Share This

ನಾಸಿಕ್ ಬಂಟರ ಸಂಘದ 13ನೇ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ

BUNTS NEWS, ನಾಸಿಕ್:  ಸಂಘ ಸಂಸ್ಥೆಗಳು ಕೇವಲ ಉತ್ಸವಾಚರಣೆಗಳಿಂದ ತೃಪ್ತಿ ಪಟ್ಟುಕೊಂಡರೆ ಸಾಲದು. ಎಲ್ಲರೂ ಒಂದೇ ಮನಸ್ಸಿನಿಂದ ದುಡಿದು ತಮ್ಮವರ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಬೇಕಾದ ಶಾಶ್ವತ ಯೋಜನೆಗಳನ್ನು ರೂಪಿಸಬೇಕು ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲಬೆಟ್ಟು ಸಂತೋಷ್ ಶೆಟ್ಟಿ ಅವರು ಹೇಳಿದರು.
ಅವರು ನಾಸಿಕ್ ಬಂಟರ ಸಂಘದ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ವರ್ಷದ ಹಿಂದೆ ಪುಣೆ ಬಂಟರ ಭವನ ನಿರ್ಮಾಣವಾದ ಬಗ್ಗೆ ತಮ್ಮ ಸ್ವಾನುಭವವನ್ನು ಅವರು ವಿವರಿಸಿದರು.

ನಾಸಿಕ್ ಬಂಟರ ಸಂಘದ ಅಧ್ಯಕ್ಷ . ಭಾಸ್ಕರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸಂತೋಷ್ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ರವಿರಾಜ ಶೆಟ್ಟಿ ಮತ್ತು ಲಾವಣ್ಯ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಸಂಘದ ಸ್ಥಾಪಕಾಧ್ಯಕ್ಷ  ಲಿಂಗಪ್ಪ ಶೆಟ್ಟಿ, ಪೂರ್ವಾಧ್ಯಕ್ಷರುಗಳಾದ ರಾಜಗೋಪಾಲ್ ಶೆಟ್ಟಿ, ಕರುಣಾಕರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಜೆ.ಶೆಟ್ಟಿ ಉಪಸ್ಥಿತರಿದ್ದರು.

ಬಂಟರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿದರುಪ್ರಧಾನ ಕಾರ್ಯದರ್ಶಿ ಅಶಿತ್ ಶೆಟ್ಟಿ ಪ್ರಸ್ತಾವನೆಗೈದು ವಂದಿಸಿದರುಪ್ರದೀಪ್ ರೈ ಮತ್ತು ಸುಚಿತ್ರ ರೈ  ನಿರೂಪಿಸಿದರು. ಪ್ರತಿ ರೈ, ಪ್ರಭಾ ಆರ್. ಶೆಟ್ಟಿ, ಅಮಿತ್ ಶೆಟ್ಟಿ ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀಕಟೀಲು ತಂಡ, ಕುಶಿ ಡಿ.ಶೆಟ್ಟಿ, ಹರ್ಷಿತ ಆಳ್ವ, ರಕ್ಷಾ ಶೆಟ್ಟಿ ಮತ್ತು ಬಳಗದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನವಿತ್ತು. ಅಲ್ಲದೆ ಐರೋಲಿ ತುಳುಕೂಟದವರಿಂದ 'ಭೂತಾಳಪಾಂಡ್ಯ' ನಾಟಕ ಹಾಗೂ ನಟ ಸಾಮ್ರಾಟ್ ನಾಸಿಕ್ ತಂಡದಿಂದ ಪುಣ್ಯಕೋಟಿ ಕಥೆಯನ್ನಾಧರಿಸಿದ 'ಸತ್ಯಮೇವ ಜಯತೇ' ಯಕ್ಷಗಾನ ಜರಗಿತು.

Pages