ಮಂಗಳೂರು:
ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ
ಪ.ಪೂ ಕಾಲೇಜಿನ
ವತಿಯಿಂದ ಇತ್ತೀಚೆಗೆ ಶಾಲೆ ಹಾಗೂ ಕಾಲೇಜು
ವಿದ್ಯಾರ್ಥಿಗಳ ದಂತ ತಪಾಸಣಾ ಶಿಬಿರವನ್ನು
ಆಯೋಜಿಸಲಾಗಿತ್ತು.
ಈ ಶಿಬಿರವನ್ನು ಉದ್ದೇಶಿಸಿ ಓರೆಂಜ್ ಡೆಂಟಲ್ ಕ್ಲೀನಿಕ್ ಕುಲಶೇಖರ ದಂತ ವೈದ್ಯೆ ಡಾ. ಸ್ವಾತಿ ಅಡಾಪ ಮಾತನಾಡಿದರು. ನಾವೆಲ್ಲರೂ ಬಾಹ್ಯ ಆರೋಗ್ಯಕ್ಕೆ ಹೇಗೆ ಒತ್ತು ಕೊಡುತ್ತೇವೆ ಅದೇ ರೀತಿ ಆಂತರಿಕ ಆರೋಗ್ಯಕ್ಕೂ ಒತ್ತು ಕೊಡಬೇಕು. ನಾವು ಇವೆಲ್ಲವನ್ನು ಮರೆತು ನಾವು ಮಾಡುತ್ತಿರುವ
ತಪ್ಪಿನಿಂದಾಗಿ ಹಲ್ಲಿನ ಕಡೆಗೆ ಹೆಚ್ಚಿನ
ಗಮನ ಕೊಡುತ್ತಿಲ್ಲ. ಹಲ್ಲಿನ ಆರೋಗ್ಯವನ್ನು ಕಾಪಾಡಬೇಕಾದರೆ
ನಾವು ಹಲ್ಲನ್ನು ಶುಚಿಯಾಗಿಡಬೇಕು. ಆದ್ದರಿಂದ ಹಲ್ಲನ್ನು ದೇಹದ ಒಂದು ಭಾಗವೆಂದು
ತಿಳಿದುಕೊಂಡು ನಾವು ಅದಕ್ಕೆ ಗಮನಕೊಟ್ಟಾಗ
ಹಲ್ಲಿನ ರಕ್ಷಣೆ ಸಾಧ್ಯವಾಗುತ್ತದೆ. ನಾವು
ಸಣ್ಣ ವಯಸ್ಸಿನಿಂದಲೇ ಇದರ ಬಗ್ಗೆ ಕಾಳಜಿವಹಿಸಬೇಕೆಂದು
ತಿಳಿಸಿದರು. ಸಣ್ಣ ಪುಟ್ಟ ಹುಳುಕು
ಕಂಡಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು ಎಂದು ಹೇಳಿದರು.
ಡಾ. ಸ್ವಾತಿ ಅಡಾಪರವರು ಉಚಿತವಾಗಿ
ದಂತ ಶಿಬಿರ ಹಾಗೂ ಜಾಗೃತಿ
ಕಾರ್ಯವನ್ನು ಮಾಡುತ್ತಿರುವುದನ್ನು ಮನಗೊಂಡು ಶಕ್ತಿ ಎಜ್ಯುಕೇಶನ್
ಟ್ರಸ್ಟ್ನಿಂದ ಇವರಿಗೆ ಸನ್ಮಾನವನ್ನು
ಇದೆ ಸಂದರ್ಭದಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ
ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ
ಡಾ. ಮುರಳೀಧರ್ ನಾೈಕ್ ಡಾ.ಸ್ವಾತಿ
ಅಡಾಪರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಶಕ್ತಿ
ಎಜ್ಯುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ
ಬೈಕಾಡಿ ಜನಾರ್ದನ ಆಚಾರ್, ಪ್ರಧಾನ
ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ
ಅಧಿಕಾರಿ ನಸೀಮ್ ಬಾನು ಕಾಲೇಜು
ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್
ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ಶಾಲೆ ಪ್ರಾಂಶುಪಾಲೆ
ವಿದ್ಯಾ ಕಾಮತ್ ನೆರೆವೇರಿಸಿದರು. ಈ
ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.