BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ 18 ವೈದ್ಯಕೀಯ,
7 ಬಡ ಹೆಣ್ಮಕ್ಕಳ ವಿವಾಹ ಹಾಗೂ ಒರ್ವ ಕ್ರೀಡಾಪಟುವಿಗೆ ಸುಮಾರು 6 ಲಕ್ಷದ 35 ಸಾವಿರ ರೂ. ಆರ್ಥಿಕ
ಸಹಾಯಧನ ವಿತರಿಸಿತು.
ಬಂಟ್ಸ್ ಹಾಸ್ಟೆಲ್’ನಲ್ಲಿರುವ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟಕ್ಕೆ ಆರ್ಥಿಕ ಸಹಾಯವನ್ನು ಕೋರಿದ
ಅರ್ಜಿಗಳನ್ನು ವಿಲೇವಾರಿಗೊಳಿಸಿ ಅದರಂತೆ 18 ಮಂದಿ ವೈದ್ಯಕೀಯ, 7 ಮಂದಿ
ವಿವಾಹ ಅಪೇಕ್ಷಿತ ಹೆಣ್ಣುಮಕ್ಕಳ ಕುಟುಂಬಕ್ಕೆ ಹಾಗೂ ಓರ್ವ ಕ್ರೀಡಾಳುವಿಗೆ
ಆರ್ಥಿಕ ಸಹಾಯದ ಚೆಕ್’ಗಳನ್ನು (ಒಟ್ಟು
ಮೊತ್ತ ರೂ. 6,35,000)ವಿತರಿಸಿದರು.