BUNTS NEWS, ಸುರತ್ಕಲ್: ಜೆಸಿಐ ಸುರತ್ಕಲ್ ನ
2019ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ
ಸಮಾರಂಭವು ಜ.9 ರಂದು ಬಂಟರ
ಸಂಘ ಸುರತ್ಕಲ್ ನಲ್ಲಿ ನಡೆಯಿತು.
ಸಮಾರಂಭದ ಮುಖ್ಯ
ಅಥಿತಿ ಜೆಸಿಐ 15ರ ವಲಯಾಧ್ಯಕ್ಷ
JEP ಅಶೋಕ್ ಚುಂತಾರ್ ಮಾತನಾಡಿ,
ತರಬೇತಿಯೇ ಜೀವಾಳವಾಗಿರುವ ಜೆಸಿಐ ಸಂಸ್ಥೆಯಲ್ಲಿ ಆಡಳಿತ
ನಿರ್ವಹಣೆ, ವ್ಯವಹಾರಿಕ ಜ್ಞಾನ, ವ್ಯಕ್ತಿತ್ವ ವಿಕಸನಕ್ಕೆ
ಪೂರಕವಾಗಿ ತರಬೇತಿಯನ್ನು ನೀಡಿ ವ್ಯವಹಾರಿಕಾಗಿ ಯಶಸ್ಸು
ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿದೆ ಈ ನಿಟ್ಟಿನಲ್ಲಿ ಕಳೆದ
ವರ್ಷ ನಡೆಸಿದ ಕಾರ್ಯಕ್ರಮಕ್ಕೆ ಶ್ಲಾಘಿಸಿ
ಹೊಸ ತಂಡಕ್ಕೆ ಶುಭಾಶಯಗಳನ್ನು ಕೋರಿದರು.
ಇನ್ನೋರ್ವ ಮುಖ್ಯ
ಅಥಿತಿ ಬಂಟರ ಸಂಘ
ಸುರತ್ಕಲ್ ಇದರ ಅಧ್ಯಕ್ಷ ಸುಧಾಕರ
ಎಸ್ ಪೂಂಜಾ ಮಾತನಾಡಿ, ಸುರತ್ಕಲ್ ಪರಿಸರದಲ್ಲಿ ಹಲವಾರು ಸಮಾಜಮುಖಿ ಕೆಲಸಗಳ
ಮೂಲಕ ಪರಿಚಿತವಾಗಿರುವ
ಜೆಸಿಐ ಸಂಸ್ಥೆಯ ಮುಂದಿನ ದಿನಗಳಲ್ಲಿ
ನಡೆಯುವ ಯೋಜನೆಗಳಿಗೆ
ಹಾಗೂ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ
ಶುಭ ಹಾರೈಸಿದರು.
ಗೌರವಾನ್ವಿತ
ಅತಿಥಿ ಎಂಆರ್’ಪಿಲ್ ಕಂಪನಿ ಪವರ್ ಪ್ಲಾಂಟ್
ವಿಭಾಗದ ಮುಖ್ಯ ಮಹಾ ಪ್ರಬಂಧಕ
ಸೀತಾರಾಮ್ ಕೆ.ಆರ್, ಜೆಸಿಐ
ಸುರತ್ಕಲ್ ಇನ್ನಷ್ಟು ಸಮಾಜಮುಖಿ ಕೆಲಸವನ್ನು ಮುಂದುವರಿಸಿ ಯಶಸ್ಸನ್ನು ಸಾಧಿಸಲಿ ಎಂದು ನೂತನ
ತಂಡಕ್ಕೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ
ವಹಿಸಿದ್ದ ಪ್ರವೀಣ್ ಶೆಟ್ಟಿ
ಅಥಿತಿಗಳನ್ನು ಸ್ವಾಗತಿಸಿದರು. ನಂತರ ನೂತನ ಅಧ್ಯಕ್ಷ
ಲೋಕೇಶ ರೈ ಕೆ ಅಧಿಕಾರ
ಸ್ವೀಕರಿಸಿ ಸಭೆಯನ್ನು ಮುಂದುವರಿಸಿದರು. ಉಪಾಧ್ಯಕರಾಗಿ ಸುಜೀರ್ ಶೆಟ್ಟಿ, ಯೋಗೀಶ್
ದೇವಾಡಿಗ, ಜ್ಯೋತಿ .ಜೆ ಶೆಟ್ಟಿ,
ರಾಕೇಶ್ ಹೊಸಬೆಟ್ಟು, ರಾಜೇಶ್ವರಿ ಡಿ ಶೆಟ್ಟಿ, ಕಾರ್ಯದರ್ಶಿಯಾಗಿ
ಶ್ರೀಶಯ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ
ಶಿಶಿರ್ ಶೆಟ್ಟಿ, ಕೋಶಾಧಿಯಾರಿಯಾಗಿ
ಹರಿಪ್ರಸಾದ್ ಶೆಟ್ಟಿ, ಜೆಸಿರೇಟ್ ಅಧ್ಯಕ್ಷೆಯಾಗಿ
ಅನಿತಾ ಎಸ್ ಶೆಟ್ಟಿ, ಜೂನಿಯರ್
ಜೆಸಿ ಅಧ್ಯಕ್ಷೆಯಾಗಿ ಅನನ್ಯ ಜೆ ಉಳ್ಳಾಲ್,
ನಿರ್ದೇಶಕರಾಗಿ ಶಶಿಕುಮಾರ್, ಪ್ರತಿಮಾ ಶೆಟ್ಟಿ, ಅನಂತಪದ್ಮನಾಭ
ಭಟ್, ದಿನೇಶ್ ದೇವಾಡಿಗ, ಗಿರೀಶ್
ಶೆಟ್ಟಿ ಪ್ರಮಾಣವಚನ ಸ್ವೀಕರಿಸಿದರು.
ಪದಗ್ರಹಣ
ಅಧಿಕಾರಿಯಾಗಿ ವಲಯ ಉಪಾಧ್ಯಕ್ಷ ರಾಯನ್
ಉದಯ್ ಕ್ರಾಸ್ತಾ ಭಾಗವಹಿಸಿ ನೂತನ ಅಧ್ಯಕ್ಷ ಮತ್ತು
ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ
ಸದಸ್ಯರಾಗಿ , ಸಂಪತ್ ಕುಮಾರ್, ಬಿಂದ್ಯಾ
ಶೆಟ್ಟಿ, ಭಬಿತಾ ಶೆಟ್ಟಿ, ಆರತಿ
ಶೆಟ್ಟಿ, ಸುಶಾಂತ್ ಶೆಟ್ಟಿ, ಅನೂಪ್
ಶೆಟ್ಟಿ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ 2018ನೇ ಸಾಲಿನ ದ.
ಕ ಜಿಲ್ಲಾ ರಾಜ್ಯೋತ್ಸವ
ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾನಿಲ್ ಮತ್ತು ಜೆಸಿ
ಸುರತ್ಕಲ್ 2018ರ ಸಾಲಿನ ಅಧ್ಯಕ್ಷ
ಪ್ರವೀಣ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ವಲಯಧಿಕಾರಿಗಳಾದ ರಕ್ಷಿತ್ ಕುಡುಪು, ಗಿರೀಶ್
ಎಸ್, ರಾಘವೇಂದ್ರ ಹೊಳ್ಳ, ಸ್ಮಿತಾ ಹೊಳ್ಳ,
ಇತರ ಘಟಕ ಮತ್ತು ಸಂಘ
ಸಂಸ್ಥೆಗಳ ಪದಾಧಿಕಾರಿಗಳು, ಜೆಸಿಐ ಸುರತ್ಕಲ್ ಪೂರ್ವಾಧ್ಯಕ್ಷರುಗಳು,
ಸದಸ್ಯರು ಉಪಸ್ಥಿತರಿದ್ದರು. ಜಯೇಶ್ ಗೋವಿಂದ್ ಅತಿಥಿಗಳನ್ನು
ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ಶ್ರೀಶಯ್ ಶೆಟ್ಟಿ ಧನ್ಯವಾದ
ಸಮರ್ಪಿಸಿದರು. ಬಿಂದ್ಯಾ ಶೆಟ್ಟಿ ಮತ್ತು
ಚಾರ್ವಿಯವರು ನೃತ್ಯ ಪ್ರದರ್ಶನ ನಡೆಸಿಕೊಟ್ಟರು.