BUNTS NEWS, ಮಂಗಳೂರು: ಪುಳಿಂಚ ಸೇವಾ ಪ್ರತಿಷ್ಠಾನದ
ದಿ. ಪುಳಿಂಚ ರಾಮಯ್ಯ ಶೆಟ್ಟಿ
ಸ್ಮರಣಾರ್ಥ ನಡೆದ ಪುಳಿಂಚ ಸಂಸ್ಮರಣೆ ಸಮಾರಂಬದಲ್ಲಿ
ಹಿರಿಯ ಕಲಾವಿದರಾದ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ
ಅವರಿಗೆ 'ಸ್ವರ ಸಿಂಧೂರ', ಹಿರಿಯ
ಸ್ತ್ರೀ ವೇಷಧಾರಿ ಪುಂಡರೀಕಾಕ್ಷ ಉಪಾಧ್ಯಾಯರಿಗೆ
'ಯಕ್ಷ ಕೌಮುದಿ' ಹಾಗೂ ಪ್ರಸಿದ್ಧ
ವೇಷಧಾರಿ ಶಿವರಾಮ ಜೋಗಿ ಅವರನ್ನು'ಯಕ್ಷ ಮಾರ್ತಾಂಡ' ಬಿರುದಿನೊಂದಿಗೆ
25 ಸಾವಿರ ರೂ. ನಗದು ನೀಡಿ ಸಮ್ಮಾನಿಸಲಾಯಿತು.
ಅನೇಕ ಹಿರಿಯ ಕಲಾ ವಿದರು
ತಮ್ಮ ವಿಶಿಷ್ಟ ಕೊಡುಗೆಯಿಂದ ಯಕ್ಷಗಾನವನ್ನು
ಕಟ್ಟಿ ಬೆಳೆಸಿದ್ದಾರೆ. ಪುಳಿಂಚ ರಾಮಯ್ಯ ಶೆಟ್ಟರಂತಹ
ಶ್ರೇಷ್ಠ ಸಾಧಕರು ಯಕ್ಷಗಾನ ರಂಗದಲ್ಲಿ
ಮೆರೆದು ತಮ್ಮದೇ ಆದ ಛಾಪು
ಮೂಡಿಸಿ ಕಲಾಭಿಮಾನಿಗಳ ಮನ ಸೆಳೆದಿದ್ದಾರೆ. ಆ
ಪರಂಪರೆ ಇಂದಿಗೂ ಉಳಿದಿರುವುದರಿಂದ ಯಕ್ಷಗಾನಕ್ಕೆ
ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ ಎಂದು
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಮಾಜಿ ಸದಸ್ಯ ಹಾಗೂ ಪಂಚಮೇಳಗಳ
ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ
ಹೇಳಿದರು.
ಮಂಗಳೂರಿನ
ಪುಳಿಂಚ ಸೇವಾ ಪ್ರತಿಷ್ಠಾನವು ಯಕ್ಷಗಾನ
ದಶಾವತಾರಿ ದಿ| ಪುಳಿಂಚ ರಾಮಯ್ಯ
ಶೆಟ್ಟಿ ಸ್ಮರಣಾರ್ಥ ಬಾಳ್ತಿಲ ಗ್ರಾಮದ ಕಶೆಕೋಡಿ
ಶ್ರೀ ವೆಂಕಟ್ರ ಮಣ ದೇವಸ್ಥಾನದ
ಬಳಿಯ ಚೆಂಡೆ ಶ್ರೀ ಕಾರಣಿಕದ
ಕಲ್ಲುರ್ಟಿ ದೈವಸ್ಥಾನ ವಠಾರದಲ್ಲಿ ನಿರ್ಮಿಸಲಾದ ದಿ. ಕಲ್ಲಾಡಿ ವಿಠಲ
ಶೆಟ್ಟಿ ವೇದಿಕೆಯಲ್ಲಿ ಏರ್ಪಡಿಸಿದ ಪುಳಿಂಚ ಸಂಸ್ಮರಣೆ ಮತ್ತು
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು.
ಗುರುಪುರ
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ
ಸ್ವಾಮೀಜಿ ಮಾತನಾಡಿ, ಎಂತಹ ಶ್ರೇಷ್ಠ ಕಲಾವಿದರಾದರೂ
ಮರಣಾನಂತರ ಅವರನ್ನು ಸ್ಮರಿಸಿಕೊಳ್ಳುವವರು ವಿರಳ.
ಆದರೆ ಪುಳಿಂಚ ಶ್ರೀಧರ ಶೆಟ್ಟರು
ತಂದೆಯವರ ಹೆಸರಿನಲ್ಲಿ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ
ಯಾವುದೇ ದೇಣಿಗೆ ಇಲ್ಲದೆ ಅದ್ದೂರಿ
ಯಾಗಿ ಅವರ ಸಂಸ್ಮರಣೆ ಮತ್ತು
ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಟೀಲು ಮೇಳದ ಸಂಚಾಲಕ ಕಲ್ಲಾಡಿ
ದೇವಿಪ್ರಸಾದ್ ಶೆಟ್ಟಿ ಸಂಸ್ಮರಣಾ ಜ್ಯೋತಿ
ಬೆಳಗಿ ಉದ್ಘಾಟಿಸಿದರು. ಅನಾರೋಗ್ಯ ಪೀಡಿತ ಸಂಜೀವ ಸಪಲ್ಯ ಚೆಂಡೆ ಅವರಿಗೆ ಪ್ರತಿಷ್ಠಾನದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತ ಸೀತಾರಾಮ ಕುಮಾರ್ ಕಟೀಲು
ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ಯಕ್ಷಗಾನ
ಅರ್ಥಧಾರಿ ಅಶೋಕ ಭಟ್ ಉಜಿರೆ
ಸಂಸ್ಮರಣ ಭಾಷಣ ಮಾಡಿದರು. ಯಕ್ಷಾಂಗಣ
ಮಂಗಳೂರು ಯಕ್ಷಗಾನ ಚಿಂತನ ಮಂಥನ
ಮತ್ತು ಪ್ರದರ್ಶನ ವೇದಿಕೆ ಕಾರ್ಯಾಧ್ಯಕ್ಷ ಪ್ರೊ.
ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನ
ಭಾಷಣ ಮಾಡಿದರು. ಉದ್ಯಮಿ ಎಂ. ಸಂಜೀವ
ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ
ಮುನ್ನ ಯಕ್ಷಗಾನ ಹಾಸ್ಯ ವೈಭವ,
ನಿಧಿ ಶೆಟ್ಟಿ ಪುಳಿಂಚ ಅವರಿಂದ
ಭರತನಾಟ್ಯ ಹಾಗೂ ಸಭಾ ಕಾರ್ಯಕ್ರಮದ
ಬಳಿಕ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಬಳಿಕ ಶ್ರೀ ಕಲ್ಲುರ್ಟಿ ದೈವದ
ತ್ತೈಮಾಸಿಕ ಕೋಲ ದೊಂದಿ ಬೆಳಕಿನೊಂದಿಗೆ
ಜರಗಿತು.
ಪುಳಿಂಚ
ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪುಳಿಂಚ ಶ್ರೀಧರ
ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರತಿಭಾ ಶ್ರೀಧರ ಶೆಟ್ಟಿ
ವಂದಿಸಿದರು. ಮಮತಾ ರೈ ಪುಳಿಂಚ,
ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್
ಮತ್ತು ಸತೀಶ್ ರೈ ಸಮ್ಮಾನಪತ್ರ
ವಾಚಿಸಿದರು. ದಯಾನಂದ ಕತ್ತಲ್ಸಾರ್
ಕಾರ್ಯಕ್ರಮ ನಿರೂಪಿಸಿದರು.