BUNTS NEWS, ಗುರುಪುರ: ಕುಪ್ಪೆಪದವು ದೊಡ್ಡಳಿಕೆಯ ಶ್ರೀಮತಿ ಲೋಲಾಕ್ಷಿ
ಅವರ ಬಡತನವನ್ನು ಮನಗಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಆರ್ಥಿಕ ಸಹಾಯ ನೀಡುವ ಭರವಸೆ ನೀಡಿದೆ.
ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ
ಐಕಳ ಹರೀಶ್ ಶೆಟ್ಟಿ ಹಾಗೂ ಪದಾಧಿಕಾರಿಗಳನ್ನು
ಭೇಟಿಯಾಗಿ ಲೋಲಾಕ್ಷಿ ಅವರು ತಮ್ಮ ಅಳಲನ್ನು ನಿವೇದಿಸಿಕೊಂಡ ಹಿನ್ನೆಲೆಯಲ್ಲಿ ಡಿ.31ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ
ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವರು
ಮನೆಗೆ ಭೇಟಿ ನೀಡಿದರು.
ಲೋಲಾಕ್ಷಿ ಅವರ ಕುಟುಂಬದ
ಪರಿಸ್ಥಿತಿಯು ಚಿಂತಾಜನಕವಾಗಿದ್ದು ಮನೆ ನಿವೇಶನವು 5 ಸೆಂಟ್ಸ್
ಜಾಗವಾಗಿದ್ದು ಸರಕಾರ ನೀಡಿದ್ದಾಗಿರುತ್ತದೆ. ಇದ್ದ
ಮನೆಯು ಶಿಥಿಲಾವಸ್ಥೆಯಲ್ಲಿದ್ದು, ಶ್ರೀಮತಿ ಲೋಲಾಕ್ಷಿಯವರ ಇನ್ನೊಂದು
ಮಗಳಿಗೂ ವಿವಾಹದ ನಿಶ್ಚಿತಾರ್ಥವು ಆಗಿದ್ದು
ಇದೇ ಬರುವ ಎಪ್ರಿಲ್ ತಿಂಗಳಿನಲ್ಲಿ
ಮದುವೆ ದಿನವು ತೀರ್ಮಾನಿಸಲ್ಪಟ್ಟಿರುತ್ತದೆ. ಒಬ್ಬ ಮಗ
ಡ್ರೈವರ್ ಕೆಲಸ ಮಾಡುತ್ತಿದ್ದು ಹಾಗೂ
ಉಳಿದಂತೆ ಬೀಡಿ ಕಟ್ಟಿ ಜೀವನ
ಸಾಗಿಸುತ್ತಿರುವುದು ಕಂಡು ಬಂದ ನಿಜ
ಸ್ಥಿತಿ.
ಈ ಎಲ್ಲಾ ವಿಚಾರಗಳ ಅವಲೋಕನದ
ನಂತರ ಸದ್ಯದ ಪರಿಸ್ಥಿತಿಗೆ ಸಂತ್ರಸ್ತ
ಕುಟುಂಬದ ಹುಡುಗಿ ವಿನೀತಾಳ ಔಷಧ
ಖರ್ಚು ಮತ್ತು ಇತರ ಅವಶ್ಯಕತೆಗಳಿಗೆ
ಪೂರಕವಾಗಿ ತಿಂಗಳಿಗೆ ಆರ್ಥಿಕ ಸಹಾಯ ಮಾಡುವುದು
ನಂತರ ಇನ್ನೊಂದು ಮಗಳ ಮದುವೆಯ ಸಂದರ್ಭ
ಸಹಾಯ ಮಾಡುವುದಲ್ಲದೆ ಕ್ರಮೇಣ ಶಿಥಿಲಾವಸ್ಥೆಯ ಮನೆಯ
ನವೀಕರಣವನ್ನು ಮಾಡುವುದು ಉತ್ತಮ ಎಂದು ಅಧ್ಯಕ್ಷ
ಐಕಳ ಹರೀಶ್ ಶೆಟ್ಟಿಯವರು ಕಾರ್ಯದರ್ಶಿಯವರಾದ
ಆಳ್ವರಲ್ಲಿ ಸಮಾಲೋಚನೆಯನ್ನು ಮಾಡಿದ ಪ್ರಯುಕ್ತ ಅರ್ಜಿಯನ್ನು
ಸಂತ್ರಸ್ತ ಕುಟುಂಬದಿಂದ ಪಡೆಯಲಾಗಿದೆ.
ಈ ಸಂದರ್ಭ
ಗುರುಪುರ ಬಂಟರ ಮಾತೃ ಸಂಘದ
ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಗುರುಪುರ ಬಂಟರ
ಮಾತೃ ಸಂಘದ ಒಕ್ಕೂಟದ ಪ್ರತಿನಿಧಿ
ಸುದರ್ಶನ್ ಶೆಟ್ಟಿ ಪೆರ್ಮಂಕಿ, ಉಮಾಶಂಕರ್
ಸುಲಾಯ ಮಳಲಿ ಹಾಗೂ ಪ್ರವೀಣ್
ಆಳ್ವ ಕುಪ್ಪೆಪದವು ಇದ್ದರು.