BUNTS NEWS, ಮಂಗಳೂರು: ಸರಳತೆ, ಶಿಸ್ತು ಮತ್ತು
ಕಾರ್ಯದಕ್ಷತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಧುಕರ
ಶೆಟ್ಟಿ ಅವರು ಸರ್ಕಾರದ ವಿವಿಧ
ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ
ಅಧಿಕಾರಿಗಳಿಗೆ ಮಾದರಿಯಾಗಿದ್ದರು.
ನಾಗರಿಕ ಸೇವೆಗೆ ಅವರು ಆದರ್ಶಪ್ರಾಯರು.
ಅವರ ಅನುಪಸ್ಥಿತಿ ನಾಗರಿಕ ಸೇವಾ ವಲಯಕ್ಕಾದ
ಬಹುದೊಡ್ಡ ನಷ್ಟ ಎಂದು ಇಂಟರ್ನ್ಯಾಷನಲ್
ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.
ಅವರು ಇತ್ತೀಚೆಗೆ
ನಿಧನರಾದ ಹಿರಿಯ ಐಪಿಎಸ್ ಅಧಿಕಾರಿ
ಮಧುಕರ ಶೆಟ್ಟಿ ಅವರ ಸ್ಮರಣಾರ್ಥ
ಬಲ್ಮಠದ ಟ್ರಸ್ಟ್ ಕಚೇರಿಯಲ್ಲಿ ಏರ್ಪಡಿಸಿದ
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ
ಸಂದರ್ಭದಲ್ಲಿ ತುಳುನಾಡಿನ ಕಂಬಳ ಸಾಧಕ ವಿನು
ವಿಶ್ವನಾಥ ಶೆಟ್ಟಿ ಮತ್ರು ಕುಡ್ಲ
ಕ್ವಾಲಿಟಿ ಹೋಟೆಲ್ ನಲ್ಲಿ ಮೂರುವರೆ
ದಶಕಗಳಿಂದ ಸೇವೆ ಸಲ್ಲಿಸಿ, ಆಕಸ್ಮಕವಾಗಿ
ಅಗಲಿ ಹೋದ ರಾಜೇಂದ್ರರಿಗೂ ಸಂತಾಪ
ಸೂಚಿಸಲಾಯಿತು.
ಸದಾಶಯ ತ್ರೈಮಾಸಿಕದ ಪ್ರಧಾನ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ
ಮತ್ತು ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್
ರೈ ನುಡಿ ನಮನ ಸಲ್ಲಿಸಿದರು.
ಯುವ ವಿಭಾಗದ ದೇವಿಚರಣ್ ಶೆಟ್ಟಿ
ಸ್ವಾಗತಿಸಿ, ಮಹಿಳಾ ವಿಭಾಗದ ವಿಜಯಲಕ್ಷ್ಮಿ
ಬಿ. ಶೆಟ್ಟಿ ವಂದಿಸಿದರು.