ಮೇರಮಜಲು ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಕಟ್ಟಿ ಬೆಳೆಸಿದ ಸಾಧನೆ ದೊಡ್ಡದು': ಒಡಿಯೂರು ಶ್ರೀ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೇರಮಜಲು ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಕಟ್ಟಿ ಬೆಳೆಸಿದ ಸಾಧನೆ ದೊಡ್ಡದು': ಒಡಿಯೂರು ಶ್ರೀ

Share This
BUNTS NEWS, ಮಂಗಳೂರು:  ಕಳೆದೊಂದು ದಶಕದಿಂದ ನೊಂದ ಜೀವಿಗಳಿಗೆ ಬೆಳಕಾಗಿ ವೃದ್ಧರ ಹಾಗೂ ರೋಗಿಗಳ ಸೇವೆಯನ್ನು ಕೈಗೊಂಡಿರುವ ಕಾಂತಾಡಿಗುತ್ತು ಹರೀಶ್ಪೆರ್ಗಡೆ ಅವರ ಮಾನವ ಪ್ರೀತಿಗಾಗಿ ನಾವೆಲ್ಲ ಅವರೊಂದಿಗೆ ಇದ್ದೆವೆಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಇತ್ತೀಚೆಗೆ ಮೇರಮಜಲು ಶ್ರೀ ಮಾತಾ ಲಕ್ಷಣಿ ಶಾಂತಿಧಾಮದ ದಶಮಾನೋತ್ಸವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಶಾಂತಿಧಾಮವನ್ನು ಕಟ್ಟಿ ಬೆಳೆಸುವಲ್ಲಿ ಹರೀಶ್ಪೆರ್ಗಡೆ ಅವರ ಶ್ರಮ ಸಾಧನೆಗೆ ಯಾವುದೂ ಸಾಟಿ ಆಗದು. ನಿರ್ಗತಿಕರಿಗೆ ಆಶ್ರಯ, ಕಾಲಕ್ಕೆ ತಕ್ಕಂತೆ ಊಟೋಪಚಾರ ವ್ಯವಸ್ಥೆ, ಆರೋಗ್ಯದ ಕಾಳಜಿಯನ್ನು ಉಚಿತವಾಗಿ ಒದಗಿಸುವ ಸೇವೆಯು ಅಭಿನಂದನೀಯ ಎಂದು ಶ್ಲಾಘೀಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದುಬಾಯಿ ವಿಶ್ವ ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುದಾಬಿ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿ, ಪೆರ್ಗಡೆ ಅವರು ದುಃಖಿತರಿಗೆ ಸಾಂತ್ವನ, ನೋವುಂಡವರಿಗೆ ಪ್ರೀತಿ ತೋರುವ ಮೂಲಕ ಮಾನವ ಸೇವೆಯ ನಿಜವಾದ ಕಾಳಜಿ ತೋರಿದ್ದಾರೆ. ದುಃಖಿತರ ಸೇವೆ ಮಾಡುವ ಪೆರ್ಗಡೆಯವರ ನಿಸ್ವಾರ್ಥ ಕೆಲಸ ಇತರರಿಗೆ ಆದರ್ಶಪ್ರಾಯವಾದುದು ಎಂದರು.

ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಸಂಸ್ಥಾಪಕ ಕಾಂತಾಡಿಗುತ್ತು ಹರೀಶ್ಪೆರ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ನನ್ನ ಕುಟುಂಬದ ಸಹಕಾರದಿಂದ ಶಾಂತಿಧಾಮ ಕಟ್ಟಿ ಬೆಳೆಸಲು ಸಾಧ್ಯವಾಗಿದ್ದು ಮಕ್ಕಳಿಂದ ಮತ್ತು ಬಂಧುಗಳಿಂದ ತಿರಸ್ಕರಿಸಲ್ಪಟ್ಟ, ಜೀವನದ ಸಂಧ್ಯಾ ಕಾಲದಲ್ಲಿ ಅನಾಥರಾದ ಜೀವಗಳಿಗೆ ಇಲ್ಲಿ ಉಚಿತ ಆಶ್ರಯ ನೀಡಿ ಸೇವೆ ಮಾಡುತ್ತಾ ಹತ್ತು ವರ್ಷಗಳನ್ನು ಪೂರೈಸಲಾಗಿದೆ. ದಶಮಾನೋತ್ಸವ ಅಂಗವಾಗಿ ದಿ| ಕಲ್ಲಾಡಿ ದರ್ಬೆ ನಾರಾಯಣ ಅಡಪ ಮತ್ತು ದಿ| ಕಡ್ವಾಯಿ ಮಹಾಬಲ ಶೆಟ್ಟರ ಸ್ಮರಣಾರ್ಥ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.

ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಂಚಾಲಕ ಕೃಷ್ಣ ಕುಮಾರ್ಪೂಂಜರನ್ನು ಸ್ವಾಮೀಜಿ ಸಮ್ಮಾನಿಸಿದರು. ಸಮಾರಂಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜ, ಕತಾರ್ಕನ್ನಡ ಸಂಘದ ಉಪಾಧ್ಯಕ್ಷ ಮೂಡಂಬೈಲ್ರವಿ ಶೆಟ್ಟಿ ಕತಾರ್‌, ಉದ್ಯಮಿ ಜಗದೀಶ ಅಡಪ ಚೆನ್ನೈ, ಅಜಿತ್ಶೆಟ್ಟಿ ಕಡಬ, ಮೇರಮಜಲು ಗ್ರಾ.ಪಂ.ಅಧ್ಯಕ್ಷ ಸತೀಶ್ ನಾಯಕ್, ಮಾಜಿ ಅಧ್ಯಕ್ಷ ಯೋಗೀಶ ಪ್ರಭು, ಗಣ್ಯರಾದ ಶಿವಪ್ಪ ಸುವರ್ಣ ಪಕ್ಕಳಪಾದೆ ಮೊದಲಾದವರು ಉಪಸ್ಥಿತರಿದ್ದರುಸಾಹಿತಿ-ಸಂಘಟಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಶಿ ಪೆರ್ಗಡೆ ವಂದಿಸಿದರು.

ಪ್ರಸಿದ್ಧ ಕಲಾವಿದರಿಂದ 'ಮಾಯಕೊದ ಬಿನ್ನೆದಿ' ತುಳು ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಪ್ರಸಂಗಕರ್ತ ಹರೀಶ ಶೆಟ್ಟಿ ಸೂಡ (ಭಾಗವತರು), ರಾಮ ಹೊಳ್ಳ ಸುರತ್ಕಲ್, ಸುದಾಸ್ ಕಾವೂರು ಮತ್ತು ಚೇತನ್ ಸಚ್ಚರಿಪೇಟೆ ಇದ್ದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ), ಜಬ್ಬಾರ್ ಸಮೊ(ಶೂರ್ಪನಖಿ), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ಸೀತೆ), ಗಣೇಶ್ ಶೆಟ್ಟಿ ಕನ್ನಡಿಕಟ್ಟೆ(ಲಕ್ಷ್ಮಣ) ಅರ್ಥಧಾರಿಗಳಾಗಿದ್ದರು. ರಾತ್ರಿ ಅನ್ನಸಂತರ್ಪಣೆ, ಉಮೇಶ್ ಮಿಜಾರು ತಂಡದಿಂದ ತುಳು ಹಾಸ್ಯ ನಾಟಕ, ತಡರಾತ್ರಿ ಗುಳಿಗ ಕೋಲ ನಡೆಯಿತು.

Pages