ವರ್ಕಾಡಿ ಲಕ್ಷ್ಮಿ ಅವರ ಮನೆ ನಿರ್ಮಾಣಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಕಾರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವರ್ಕಾಡಿ ಲಕ್ಷ್ಮಿ ಅವರ ಮನೆ ನಿರ್ಮಾಣಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಕಾರ

Share This
BUNTS NEWS, ತಲಪಾಡಿ: ವರ್ಕಾಡಿ ಗ್ರಾಮದ ಹಳೆಮನೆ ನಿವಾಸಿ ಕಡು ಬಡತನದ ಲಕ್ಷ್ಮಿ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 4 ಲಕ್ಷ ರೂ. ಮಂಜೂರಾಗಿದ್ದು ಮನೆ ಕಟ್ಟಲು ಜಾಗವಿಲ್ಲದ ಕಾರಣ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಧ್ಯಸ್ಥಿಕೆಯಲ್ಲಿ ಅವರ ಕುಟುಂಬಿಕರ ಜತೆ ನಡೆದ ಚರ್ಚೆಯು ಡಿ.23ರಂದು ನಡೆಯಿತು.
ಸತೀಶ ಮಳಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ ಇವರಿಗೆ ಕುಟುಂಬದ  ಪರಿಸ್ಥಿತಿಯನ್ನು ತಿಳಿಸಿ ಅವರ ಸೂಚನೆ ಮೇರೆಗೆ ಅವರ ಕುಟುಂಬಸ್ಥರನ್ನೆಲ್ಲ ಒಟ್ಟು ಸೇರಿಸಿ ನಡೆದ ಚರ್ಚೆಯಲ್ಲಿ ಲಕ್ಷ್ಮಿ ಅವರಿಗೆ 10 ಸೆಂಟ್ಸ್ ಜಾಗ ಮತ್ತು ಮನೆಗೆ ಹೋಗುವ ದಾರಿ ಮತ್ತು ಜಾಗವನ್ನು ಸಮತಟ್ಟುಗೊಳಿಸಲು ತಗಲುವ ವೆಚ್ಚವನ್ನು ಕುಟುಂಬಿಕರು ನೀಡುವುದಾಗಿ ಹತ್ತು ಸಮಸ್ತರ ಸಮಕ್ಷಮ ತೀರ್ಮಾನಿಸಲಾಯಿತು.

ಈ ಸಂದರ್ಭ ಊರವರ ಪರವಾಗಿ ಹರೀಶ ಕನ್ನೀಗುಲಿ, ಸದಾಶಿವ ಶೆಟ್ಟಿ ಭಂಡಾರಮನೆ, ಸತೀಶ ಮಳಿ, ಸುಧಾಕರ ಶೆಟ್ಟಿ ಭಂಡಾರಮನೆ, ಪ್ರಕಾಶ ಶೆಟ್ಟಿ ಭಂಡಾರಮನೆ, ವೆಂಕಟೇಶ ಶೆಟ್ಟಿ ನೀರೊಳಿಕೆ, ಚಂದ್ರಹಾಸ ಕನ್ನೀಗುಲಿ ಮತ್ತು ಕುಟುಂಬದವರು  ಜತ್ತಪ್ಪ ಶೆಟ್ಟಿ, ದಾಮೋದರ ಆಳ್ವ, ಕೃಷ್ಣ ಶೆಟ್ಟಿ, ಚಂದ್ರಹಾಸ ಶೆಟ್ಟಿ, ನವೀನ ಶೆಟ್ಟಿ, ಸುಂದರ ಶೆಟ್ಟಿ, ದಿನೇಶ ಶೆಟ್ಟಿ, ರವಿ ಶೆಟ್ಟಿ ಉಪಸ್ಥಿತರಿದ್ದರು.

Pages