ಕ್ರೀಡೆಯಲ್ಲಿ ಯುವ ಜನಾಂಗ ಹೆಚ್ಚಾಗಿ ತೊಡಗಿಸಿ ದೇಶದ ಕೀರ್ತಿ ಬೆಳಗಿಸಿ : ಶ್ರೀಕಾಂತ್ ಶೆಟ್ಟಿ ಬಾಳ - BUNTS NEWS WORLD

ಕ್ರೀಡೆಯಲ್ಲಿ ಯುವ ಜನಾಂಗ ಹೆಚ್ಚಾಗಿ ತೊಡಗಿಸಿ ದೇಶದ ಕೀರ್ತಿ ಬೆಳಗಿಸಿ : ಶ್ರೀಕಾಂತ್ ಶೆಟ್ಟಿ ಬಾಳ

Share This
BUNTS NEWS, ಸುರತ್ಕಲ್: ಇಂದಿನ ಯುವ ಜನಾಂಗವು ಕ್ರೀಡೆಯಲ್ಲಿ ಅತಿ ಹೆಚ್ಚಾಗಿ ತೊಡಗಿಸಿ ಭವ್ಯ ಭಾರತದ ಕೀರ್ತಿ ಯನ್ನು, ಹಿರಿಮೆಯನ್ನು ಬೆಳಗಿಸಬೇಕೆಂದು ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ರೋಟನ್ ಶ್ರೀಕಾಂತ್ ಶೆಟ್ಟಿ ಬಾಳ ಹೇಳಿದರು.
ಅವರು ಬಂಟರ ಸಂಘ ಸುರತ್ಕಲ್ ಮತ್ತು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ ಇದರ ಸಹಯೋಗದೊಂದಿಗೆ ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ನಡೆದ ಬಂಟರ ಕ್ರೀಡೋತ್ಸವದ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಿಂದ ದೇಹದ ಆರೋಗ್ಯ, ಶಾರೀರಿಕ ಸಮಸ್ಯೆಗಳೆಲ್ಲವೂ ದೂರವಾಗಿ ದೇಹವನ್ನು ಸದೃಡರಾಗಿ, ಆರೋಗ್ಯ ಪೂರ್ಣವನ್ನಾಗಿಸಲು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಇಂದು ವಿಫುಲ ಅವಕಾಶವಿದ್ದು ಯುವಜನಾಂಗವು ಇದರಲ್ಲಿ ಸಾಕಷ್ಟು ತೊಡಗಿಸಿಕೊಳ್ಳ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್  ಎಸ್ ಪೂಂಜ ಅವರು ವಹಿಸಿದ್ದರುಕಾರ್ಯಕ್ರಮದಲ್ಲಿ  ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ವೈಷ್ಣವಿ ಟ್ರಾನ್ಸ್ಪೋರ್ಟ್  ಕುಳಾಯಿ ಹೊಸಬೆಟ್ಟು ಸುರೇಶ್ ಶೆಟ್ಟಿ, ವಿಜಯ ವಿಠಲ ಭಜನಾ ಮಂಡಳಿ ಜೋಕಟ್ಟೆ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಆಳ್ವ ತೋಕೂರು, ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ಬೇಬಿ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ ಶೆಟ್ಟಿ, ಉಪಾಧ್ಯಕ್ಷ ನವೀನ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶಟ್ಟಿ ಕುಡುಂಬೂರು ಉಪಸ್ಥಿತರಿದ್ದರು.

ರಾಜೇಶ್ವರಿ ಶೆಟ್ಟಿ  ನಿರೂಪಿಸಿದರು. ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ವಂದಿಸಿದರು.

Pages