BUNTS NEWS, ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನೀಡಿದ
ಆರ್ಥಿಕ ನೆರವಿನೊಂದಿಗೆ ನಿರ್ಮಾಣಗೊಂಡ ಅಂಗರಗುಡ್ಡೆ
ಶಿಮಂತೂರು ಗ್ರಾಮದ ಶ್ರೀಮತಿ ಪುಷ್ಪ
ರಘರಾಮ್ ಶೆಟ್ಟಿ ಅವರ ನೂತನ
ಮನೆಯ ಗೃಹಪ್ರವೇಶವು ಡಿ.24ರಂದು
ನಡೆಯಿತು.
ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ
ಅವರು ನೂತನ ಮನೆಗೆ ಭೇಟಿ ನೀಡಿ ಶ್ರೀಮತಿ ಪುಷ್ಪ
ರಘರಾಮ್ ಶೆಟ್ಟಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಶ್ರೀ ಕೊಲ್ಲಾಡಿ ಬಾಲಕೃಷ್ಣ
ರೈ, ಮೂಲ್ಕಿ ಬಂಟರ ಸಂಘ
ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ
ಸದಸ್ಯ ಶ್ರೀ ರವಿರಾಜ್ ಶೆಟ್ಟಿ,
ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ
ಕೊಳ್ಕೆಬೈಲ್, ಡಾ.ಹರ್ಷಿತ್ ಶೆಟ್ಟಿ,
ಪುಷ್ಪ ರಘುರಾಮ್ ಶೆಟ್ಟಿಯವರ ಕುಟುಂಬಸ್ಥರು
ಇನ್ನಿತರ ಆಹ್ವಾನಿತರು ಉಪಸ್ಥಿತರಿದ್ದರು.
ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ವತಿಯಿಂದ
ಆಶ್ರಯ ಯೋಜನೆಯಡಿ ಈಗಾಗಲೇ 32 ಮನೆಗಳಿಗೆ ಘೋಷಣೆ ಪತ್ರ ನೀಡಿದ್ದು
15ಕ್ಕೂ ಮಿಕ್ಕಿ ಮನೆಗಳ ಕಾಮಗಾರಿ
ಪ್ರಗತಿಯಲ್ಲಿದೆ.