BUNTS NEWS, ಮಂಗಳೂರು: ಉದ್ಯಮಿ ಮೂಡಂಬೈಲ್ ರವಿಶೆಟ್ಟಿಯವರ
ಸಮಾಜಸೇವೆ ಹಾಗೂ ಉದ್ಯಮಶೀಲತೆಯನ್ನು ಪರಿಗಣಿಸಿ
ಕಿಂಗ್ಸ್ ಯುನಿವರ್ಸಿಟಿ ಅವರಿಗೆ ಡಾಕ್ಟರೇಟ್ ಪದವಿ
ನೀಡಿ ಗೌರವಿಸಿದೆ.
ಹಲವಾರು
ಸಂಘ ಸಂಸ್ಥೆಗಳನ್ನು ಮುನ್ನೆಡೆಸಿ, ಹಲವಾರು ಜನರಿಗೆ ಉದ್ಯೋಗ
ಕಲ್ಪಿಸಿ, ಸಾಮಾಜಿಕ, ಕ್ರೀಡೆ ಮತ್ತು ಸಾಂಸ್ಕøತಿಕ ಕ್ಷೇತ್ರಗಳನ್ನು ಪ್ರೋತ್ಸಾಹಿಸಿ
ಹಲವು ಜನರ ಜೀವನವನ್ನು ಹಸನುಗೊಳಿಸುವಲ್ಲಿ ರವಿಶೆಟ್ಟಿಯವರು
ಪಟ್ಟ ಶ್ರಮವನ್ನು ಗುರುತಿಸಿ ಕಿಂಗ್ಸ್
ಯುನಿವರ್ಸಿಟಿ ಕತಾರ್ನಲ್ಲಿ ನಡೆದ
ಅದ್ದೂರಿ ಸಮಾರಂಭದಲ್ಲಿ ಡಾ. ಎಸ್ ಸೆಲ್ವಿನ್ಕುಮಾರ್ ಅವರು ಭಾರತೀಯ
ರಾಯಭಾರಿ ಕುಮಾರ್ ಪಿ. ಅವರ
ಉಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿ
ಪ್ರಧಾನ ಮಾಡಲಾಯಿತು.
ರವಿಶೆಟ್ಟಿಯವರು
ಎಟಿಎಸ್ ಸಮೂಹ ಸಂಸ್ಥೆಗಳಲ್ಲಿ ಆಡಳಿತ
ನಿರ್ದೇಶಕರಾಗಿ ಪ್ರಸ್ತುತ ಕರ್ನಾಟಕ ಸಂಘ ಕತಾರ್ನ ಉಪಾಧ್ಯಕ್ಷರಾಗಿ, ತುಳುಕೂಟ
ಕತಾರ್ನ ಮಹಾಪೋಷಕರಾಗಿ ಸೇವೆ
ಸಲ್ಲಿಸುತ್ತಿದ್ದಾರೆ. ಅಲ್ಲದೇ
ಬಂಟ್ಸ್ ಕತಾರ್ನ ಸ್ಥಾಪಕ
ಅಧ್ಯಕ್ಷರಾಗಿ ಮೂರು ಬಾರಿ ತುಳು
ಕೂಟದ ಕತಾರ್ನ ಅಧ್ಯಕ್ಷರಾಗಿ,
ಸುಬ್ರಾಯ ದೇವಸ್ಥಾನ ಪುತ್ತೂರಿನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ
ಸಲ್ಲಿಸಿದ್ದಾರೆ.
ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ
2016ನೇ ಸಾಲಿನ ದ.ಕ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕತಾರ್
ಎಂಸಿಸಿ ಯಿಂದ ಮದರ್ಥೆರೆಸಾ
ಸೋಶಿಯಲ್ ಹಾರ್ಮೋನಿ ಪ್ರಶಸ್ತಿ, ಕರ್ನಾಟಕ ರಕ್ಷಣ ವೇದಿಕೆಯಿಂದ
ಕಡಂಬ ಪ್ರಶಸ್ತಿ, ಪತಂಜಲಿ ಯೋಗ ಸಮಿತಿಯಿಂದ
ಕಡಲಾಚೆಯ ಕಣ್ಮಣಿ ಪ್ರಶಸ್ತಿ, ಕೈರಳಿ
ಟಿವಿ ಪ್ರಶಸ್ತಿ, ಗ್ಲೋಬಲ್ ಮೀಡಿಯಾ ಪ್ರಶಸ್ತಿ,
ಸೃಷ್ಟಿ ಕಲಾಭೂಮಿಯವರ ತುಳುನಾಡ ಬೊಳ್ಳಿ ಪ್ರಶಸ್ತಿ, ಕರ್ನಾಟಕ
ಸಂಘ ಕತಾರ್ನಿಂದ ಅಭಿಯಂತರರ
ಕಲಾಸಂಪದ ಮುಂಬಯಿಂದ ರಜತರಂಗ ಮುಂತಾದ ಹಲವಾರು
ಪ್ರಶಸ್ತಿಗಳು ಒಲಿದು ಬಂದಿವೆ.
ಇವರು
ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ ಮತ್ತು ದೋಣಿಂಜೆಗುತ್ತು
ಸರೋಜಿನಿ ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ.