ಶಿಥಿಲಾವಸ್ಥೆಯ ಮನೆ ರಿಪೇರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಹಸ್ತ - BUNTS NEWS WORLD

ಶಿಥಿಲಾವಸ್ಥೆಯ ಮನೆ ರಿಪೇರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಹಸ್ತ

Share This
BUNTS NEWS, ತಲಪಾಡಿ: ತಲಪಾಡಿ ದೇವಿಪುರದ ನಾರಾಯಣ ಶೆಟ್ಟಿಯವರ ಶಿಥಿಲಾವಸ್ಥೆಯ ಮನೆ ರಿಪೇರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಹಾಯ ಹಸ್ತ ನೀಡಲು ಮುಂದಾಗಿದೆ.
ಮಳೆಗಾಲದಲ್ಲಿ ಸೋರುವ ಸ್ಥಿತಿಯಲ್ಲಿರುವ ನಾರಾಯಣ ಶೆಟ್ಟಿ ಅವರ ಮನೆಯ ಪರಿಸ್ಥಿತಿ ಹಾಗೂ ಕುಟುಂಬದ ಆರ್ಥಿಕ ಸ್ಥಿತಿಯನ್ನು ಮನ:ಗಂಡು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ರಿಪೇರಿ ಮಾಡಲು ನಿಶಾನೆಯನ್ನು ತೋರಿದೆ.

ಈ ಸಂಬಂಧ ಒಕ್ಕೂಟದ ಗೌರವ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋಮೇಶ್ವರ ಬಂಟರ ಸಂಘದ ಒಕ್ಕೂಟದ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ, ಉಳ್ಳಾಲದ ಗಂಗಾಧರ ಶೆಟ್ಟಿ, ಸೋಮೇಶ್ವರ ಬಂಟರ ಸಂಘದ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ, ತಲಪಾಡಿಯ ರಾಜಾರಾಮ ಅಡ್ಯಂತಾಯ, ಪ್ರದೀಪ್ ಕಿಲ್ಲೆ, ರಮೇಶ್ ಆಳ್ವ, ಜಯರಾಮ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಹಾಗೂ ಯುವ ಬಂಟರ ಸಂಘಟಕ ಯಶು ಪಕ್ಕಳ ತಲಪಾಡಿ ಜೊತೆಗಿದ್ದರು.

Pages