BUNTS NEWS, ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನೂತನ
ಸಭಾಪತಿಯಾಗಿ ಪ್ರತಾಪ ಚಂದ್ರ ಶೆಟ್ಟಿಯವರು
ಆಯ್ಕೆಯಾಗಿದ್ದಾರೆ.
ಉಭಯ ಸದನಗಳಲ್ಲಿಯೇ ಅತ್ಯಂತ ಹಿರಿಯರಾದ ಪ್ರತಾಪಚಂದ್ರ ಶೆಟ್ಟಿ ಅವರು ಸದಾಕಾಲ ಜನಪರ ಚಿಂತನೆಗಳನ್ನೇ
ಯೋಚಿಸಿ ಅವುಗಳ ಕಾರ್ಯರೂಪಕ್ಕಾಗಿ ಶ್ರಮಿಸುತ್ತಿರುವ
ನೈಜ ಜನಪ್ರತಿನಿಧಿಯಾಗಿದ್ದು ವಿಧಾನ ಪರಿಷತ್ ನ
ಸಭಾಪತಿಯಾಗಿ ಆಯ್ಕೆಯಾಗಿರುವುದು ಬಂಟ ಸಮಾಜಕ್ಕೆ ಹೆಮ್ಮೆಯ ಸಂಗತಿ.
ಪ್ರತಾಪ ಚಂದ್ರ ಶೆಟ್ಟಿ
ಅವರ ಕಿರು ಪರಿಚಯ: 1949ರ
ಸೆ.4ರಂದು ದಿ.ಹುಯ್ಯಾರು
ಪಟೇಲ್ ಹಿರಿಯಣ್ಣ ಶೆಟ್ಟಿ - ದಿ.ಕೊಳ್ಕೆಬೈಲ್ ಗುಲಾಬಿ
ಶೆಟ್ಟಿ ಅವರ ಮಗನಾಗಿ ಜನಿಸಿದರು. ಬಿ.ಎ ಪದವಿಧರರಾದ ಪ್ರತಾಪಚಂದ್ರ ಶೆಟ್ಟಿ ಅವರು ವಿಜಯಾ ಬ್ಯಾಂಕ್ ಉದ್ಯೋಗಿಯಾಗಿ ಪೂನಾ
ಹಾಗೂ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ. ತಂದೆಯ ನಿಧನದ ನಂತರ
ಬ್ಯಾಂಕ್ ಉದ್ಯೋಗ ತ್ಯಜಿಸಿ ಕೃಷಿ
ಕ್ಷೇತ್ರದಲ್ಲಿ ಭಾಗಿ. ಪತ್ನಿ ಶ್ರೀಮತಿ
ಲಕ್ಷ್ಮೀ ಶೆಟ್ಟಿ ಹಾಗೂ ಮಗಳು ಕು.ತ್ರಯಾಂಬಿಕಾ
ಶೆಟ್ಟಿ.
ರಾಜಕೀಯ ಕ್ಷೇತ್ರದಲ್ಲಿ
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕುಂದಾಪುರ
ಯುವ ಕಾಂಗ್ರೆಸ್ ಅಧ್ಯಕ್ಷ, ಉಡುಪಿ ಜಿಲ್ಲಾ
ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಉಪಾಧ್ಯಕ್ಷ, ಏಐಸಿಸಿ ಸದಸ್ಯ, 1983-1999ರ
ವರೆಗೆ 4 ಭಾರಿ ಕುಂದಾಪುರ ಶಾಸಕರಾಗಿ, 3 ಭಾರಿ ದ.ಕ
ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ
ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.