ಒಮನ್ ಬಂಟ್ಸ್ ವತಿಯಿಂದ ವರ್ಕಾಡಿ ರಾಜೇಶ ಆಳ್ವರ ಚಿಕಿತ್ಸೆಗೆ 50 ಸಾವಿರ ರೂ. ಧನ ಸಹಾಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಒಮನ್ ಬಂಟ್ಸ್ ವತಿಯಿಂದ ವರ್ಕಾಡಿ ರಾಜೇಶ ಆಳ್ವರ ಚಿಕಿತ್ಸೆಗೆ 50 ಸಾವಿರ ರೂ. ಧನ ಸಹಾಯ

Share This
BUNTS NEWS, ಮಂಜೇಶ್ವರ: ದೇಹದ ಅರ್ಧ ಭಾಗದ ಸ್ವಾಧೀನ ಕಳೆದು ಕೊಂಡಿರುವ ವರ್ಕಾಡಿಯ ರಾಜೇಶ್ ಆಳ್ವರ ಚಿಕಿತ್ಸೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಒಮನ್ ಬಂಟ್ಸ್ 50 ಸಾವಿರ ರೂ. ಧನ ಸಹಾಯ ಮಾಡಿದೆ.
ರಾಜೇಶ್ ಆಳ್ವರಿಗೆ ಕಣಚೂರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಜಾಗತಿಕ ಬಂಟರ ಸಂಘದ ಒಕ್ಕೂಟದ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ ಅವರು ಒಮನ್ ಬಂಟ್ಸ್ ನೀಡಿದ ಧನ ಸಹಾಯವನ್ನು ರಾಜೇಶ್ ಆಳ್ವರ ಪರವಾಗಿ ವೆಂಕಟೇಶ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಉಪಸ್ಥಿತರಿದ್ದರು.

ರಾಜೇಶ್ ಆಳ್ವರ ವಿವರ: ಕರ್ನಾಟಕ - ಕೇರಳದ ಗಡಿ ಪ್ರದೇಶದಲ್ಲಿರುವ ರಾಜೇಶ್ ಆಳ್ವರ ಮನೆಯು ಕೇರಳ ರಾಜ್ಯದ ಭಾಗವಾಗಿದ್ದು ವರ್ಕಾಡಿ ಬಂಟರ ಸಂಘದ ವ್ಯಾಪ್ತಿಗೆ ಒಳಪಟ್ಟಿರುತ್ತದ. ರಾಜೇಶ್ ಆಳ್ವರು ತಾಯಿಯೊಂದಿಗೆ ವಾಸಿಸುತ್ತಿದ್ದು ಇಬ್ಬರು ಸಹೋದರಿಯರನ್ನು ಹೊಂದಿರುತ್ತಾರೆ. ಸಹೋದರಿಯರಿಗೆ ಮದುವೆಯಾಗಿದ್ದು ಅವರು ಅವರ ವರ ಗಂಡಂದಿರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆಯ ವ್ಯವಸ್ಥೆಯು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿರುತ್ತದೆ. ಆಳ್ವರು ಆಯಾಯ ಜಮೀನುದಾರರ ಕೇಳಿಕೆ ಮೇರೆಗೆ ಅಡಿಕೆ - ತೆಂಗು ಮರಗಳನ್ನು ಏರಿ ಅದರ ಕೊಯ್ಲನ್ನು ತೆಗೆದು ಕೊಡುವ ಕಾಯಕವನ್ನು ಮಾಡುತ್ತಿದ್ದು ದಿನವೊಂದಕ್ಕೆ ಸರಾಸರಿ ರೂ.1000 ಸಂಭಾವನೆಯನ್ನು ಗಳಿಸುತ್ತಿದ್ದರು ಎಂಬುದಾಗಿ ಅವರೇ ತಿಳಿಸಿರುತ್ತಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಸಣ್ಣ ಅಡಿಕೆ ಮರಕ್ಕೆ ಏರಿ ಬಿದ್ದು ಸೊಂಟದ ಕೆಳಗಿನ ಸ್ಪರ್ಶ ಜ್ಞಾನವನ್ನು ಕಳಕೊಂಡಿರುತ್ತಾರೆ. ಕಾಸರಗೋಡು ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ ಎಂದು ತಿಳಿಸಿದ್ದು ಯಾವುದೇ ಫಲಕಾರಿಯಾಗಿಲ್ಲ. ಎಲ್ಲ ಖರ್ಚು ವೆಚ್ಚಗಳನ್ನು ಊರ - ಪರವೂರ ಮಹನೀಯರು ನಿಭಾಯಿಸಿರುತ್ತಾರೆ. ವರ್ಕಾಡಿ ಬಂಟರ ಸಂಘವು ತನ್ನಿಂದಾದಷ್ಟು ಮಟ್ಟಿಗೆ ಸಹಕರಿಸಿದೆ ಎಂದು ಅದರ ಪದಾಧಿಕಾರಿಗಳು ತಿಳಿಸಿರುತ್ತಾರೆ.

ಹಿನ್ನೆಲೆಯಲ್ಲಿ ರಾಜೇಶ್ ಆಳ್ವರ ಮನೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವರ ನೇತೃತ್ವದ ತಂಡ ಭೇಟಿ ನೀಡಿದೆ. ಆಳ್ವಾರ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯ ದಾಖಲೆಗಳನ್ನು ಕೇಳಿದ್ದು ತಕ್ಷಣಕ್ಕೆ ನೀಡಲಾಗಿಲ್ಲ. ಸಂಬಂಧಪಟ್ಟ ವೈದ್ಯಕೀಯ ದಾಖಲೆ ಪತ್ರ, ಕ್ಷ - ಕಿರಣ ದಾಖಲೆಗಳನ್ನು ತಲುಪಿಸಿದಲ್ಲಿ ಮಂಗಳೂರಿನ  ಪ್ರಖ್ಯಾತ ಮೂಳೆ ತಜ್ಞ ಡಾ ಶಾಂತಾರಾಮ ಶೆಟ್ಟರಲ್ಲಿ ಚರ್ಚಿಸಿ ಅಭಿಪ್ರಾಯಪಟ್ಟ ನಂತರದ ಕ್ರಮಗಳಿಗೆ ಮುಂದಾಗಬಹುದು ಎಂದು ವಿಜಯ ಪ್ರಸಾದ್ ಆಳ್ವರು ತಿಳಿಸಿದ್ದಾರೆ. ಪ್ರದೇಶವು ಕೇರಳ ರಾಜ್ಯಕ್ಕೆ ಸೇರಿದ್ದು ಎಲ್ಲಾ ಸೌಲಭ್ಯಗಳನ್ನು ಕೇರಳ ಸರ್ಕಾರದಿಂದಲೇ ಪಡೆಯಬೇಕಾಗುತ್ತದೆ. ಬಗ್ಗೆ ಎಲ್ಲಾ ಮಾಹಿತಿಗಳನ್ನು ಕೂಡ ಸಂಗ್ರಹಿಸಲಾಗಿದೆ.

Pages