ಗೃಹರಕ್ಷಕರನ್ನು ಗುರುತಿಸಿ, ಗೌರವಿಸಿ : ಡಾl ಮುರಲೀ ಮೋಹನ್ ಚೂಂತಾರು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಗೃಹರಕ್ಷಕರನ್ನು ಗುರುತಿಸಿ, ಗೌರವಿಸಿ : ಡಾl ಮುರಲೀ ಮೋಹನ್ ಚೂಂತಾರು

Share This
ಮಂಗಳೂರು: ಸುರತ್ಕಲ್ ಗೃಹರಕ್ಷಕದಳ ಘಟಕದ ಗೃಹರಕ್ಷಕರ ಕುಂದು ಕೊರತೆ ಸಭೆ, ಗೃಹರಕ್ಷಕ ದಳದ ಸಮಾದೇಷ್ಟರಾದ ಡಾl ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಘಟಕಾಧಿಕಾರಿ ರಮೇಶ್ ಇವರು ಪ್ರಾಸ್ತಾವಿಕವಾಗಿ ಗೃಹರಕ್ಷಕರ ಸಮವಸ್ತ್ರಗಳ ಬಗ್ಗೆ ಅಹವಾಲು ಸಲ್ಲಿಸಿದರು.
ಸಂದರ್ಭ ಗೃಹರಕ್ಷಕದಳದಲ್ಲಿ ಕಳೆದ 8 ವರ್ಷಗಳಿಂದ ನಿಷ್ಕಾಮ ಸೇವೆ ಸಲ್ಲಿಸುತ್ತಿರುವ ಫಕೀರಪ್ಪ ಮತ್ತು ಸಾವಿತ್ರಿ ಇವರನ್ನು ಗೌರವಿಸಲಾಯಿತು. 380ರೂ. ಕನಿಷ್ಠ ಗೌರವ ಧನಕ್ಕಾಗಿ ನಿಷ್ಕಾಮ, ನಿಸ್ವಾರ್ಥ ಸೇವೆ ಸಲ್ಲಿಸುವ ಗೃಹರಕ್ಷಕರನ್ನು ಜನರು ಹೆಚ್ಚು ಹೆಚ್ಚು ಗುರುತಿಸಿ ಗೌರವಿಸುವಂತಾಗಬೇಕು. ಪ್ರಾಮಾಣಿಕ ಕರ್ತವ್ಯ ಸಲ್ಲಿಸುವ ಗೃಹರಕ್ಷಕರು ಸಮಾಜದ ದೊಡ್ಡ ಆಸ್ತಿ ಎಂದು ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಸಮಾದೇಷ್ಟರಾದ ಡಾl ಚೂಂತಾರು ಅಭಿಪ್ರಾಯ ಪಟ್ಟರು.

ಸುರತ್ಕಲ್ ಘಟಕದ 30 ಮಂದಿ ಗೃಹರಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು. ಹಿರಿಯ ಗೃಹರಕ್ಷಕರಾದ ಸುರೇಶ್, ಪರಿಯಪ್ಪ, ಹರಿಣಿ ಮುಂತಾದವರು ಉಪಸ್ಥಿತರಿದ್ದರು.

Pages